fbpx
ಸಮಾಚಾರ

“ಮೋದಿ ಸರ್ಕಾರ ಆಡಳಿತ ಸಂಪೂರ್ಣ ವಿಫಲ” ಕೇಂದ್ರ ಸರ್ಕಾರವನ್ನು ಟೀಕಿಸಿದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ

ತಮ್ಮದೇ ಪಕ್ಷ ಹಾಗೂ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸುವುದಕ್ಕೆ ಹಿಂಜರಿಯದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ಜಯಪ್ರಕಾಶ್​ ನಾರಾಯಣ್​, ಮೊರಾರ್ಜಿ ದೇಸಾಯಿ, ರಾಜೀವ್​ ಗಾಂಧಿ, ಚಂದ್ರಶೇಖರ್​ ಮತ್ತು ಪಿ.ವಿ.ನರಸಿಂಹ ರಾವ್​ ಅವರಂಥ ರಾಜಕೀಯ ದಿಗ್ಗಜರೊಂದಿಗೆ ಹೋಲಿಸಿದ್ದರು.

ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಆದರೆ ಸುಬ್ರಹ್ಮಣಿಯನ್ ಸ್ವಾಮಿ ಬಿಜೆಪಿ ಸರ್ಕಾರವನ್ನು ಟೀಕಿಸಿ ಕೇಂದ್ರ ಸರ್ಕಾರ ತನ್ನ ಆಡಳಿತದ ಪ್ರತಿ ಅಂಶದಲ್ಲೂ ವಿಫಲವಾಗಿದೆ ಎಂದು ಕಟುವಾಗಿ ಹೇಳಿದ್ದಾರೆ.

ಸುಬ್ರಹ್ಮಣಿಯನ್​ ಸ್ವಾಮಿ ಪ್ರಧಾನಿ ಮೋದಿ ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್​ ಕೊಟ್ಟಿದ್ದಾರೆ. ಅದರಲ್ಲಿ ಆರ್ಥಿಕತೆ-ಫೇಲ್​, ಗಡಿ ಭದ್ರತೆ-ಫೇಲ್​, ವಿದೇಶಾಂಗ ನೀತಿ-ಅಫ್ಘಾನಿಸ್ತಾನ ಬಿಕ್ಕಟ್ಟು ನಿರ್ವಹಣೆ ವೈಫಲ್ಯ, ರಾಷ್ಟ್ರೀಯ ಭದ್ರತೆ-ಪೆಗಾಸಸ್​ ಎನ್​ಎಸ್ಒ, ಅಂತಾರಾಷ್ಟ್ರೀಯ ಭದ್ರತೆ-ಕಾಶ್ಮೀರದ ಕರಾಳತೆ ಕಾರಣ ಯಾರು? ಆರ್ಥಿಕತೆ ಗಡಿ ಭದ್ರತೆ ಸೇರಿ ಪ್ರತಿಯೊಂದರಲ್ಲೂ ಮೋದಿ ಸರ್ಕಾರದ ವಿಫಲತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

 

 

ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ನಲ್ಲಿ ರಾಜಕೀಯ ದಿಗ್ಗಜರೊಂದಿಗೆ ಹೋಲಿಸಿ ನಾನು ಅನೇಕ ರಾಜಕಾರಣಿಗಳೊಟ್ಟಿಗೆ ಕೆಲಸ ಮಾಡಿದ್ದೇನೆ ಮತ್ತು ಭೇಟಿಯಾಗಿದ್ದೇನೆ. ಅವರಲ್ಲಿ ಮಮತಾ ಬ್ಯಾನರ್ಜಿ, ಜೆಪಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್​ ಮತ್ತು ಪಿ.ವಿ.ನರಸಿಂಹ ರಾವ್​ ಅವರು ಏನು ಹೇಳಿದ್ದಾರೋ ಅದನ್ನೇ ಮಾಡಿದ್ದಾರೆ ಮತ್ತು ಏನನ್ನು ಮಾಡುತ್ತಿದ್ದರೋ ಅದನ್ನೇ ಹೇಳಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಲಹೆ ನೀಡುವುದು ಮಾತ್ರವಲ್ಲ ಸರ್ಕಾರಕ್ಕೆ ನೇರವಾಗಿ ಸಲಹೆ ನೀಡುವುದು ಉತ್ತಮ ಎಂದು ಟ್ವಿಟರ್‌ ಬಳಕೆದಾರ ಕುಮಾರ್‌ ರಜ್‌ಪೂತ್‌ ಎಂಬುವವರು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಕಮೆಂಟ್‌ ಮೂಲಕ ತಿಳಿಸಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top