fbpx
ಸಮಾಚಾರ

ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು ಮಂಜೂರು

ವಿರಾಟ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಆನ್‍ಲೈನ್‍ನಲ್ಲಿ ಬೆದರಿಕೆ ಹಾಕಿದ ಐಐಟಿ ಪದವೀಧರನಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ರಾಮ್‍ನಾಗೇಶ್ ಶ್ರೀನಿವಾಸ ಅಕುಬಾಥಿನಿ (23) ಮುಂಬೈ ಪೊಲೀಸ್ ವಿಶೇಷ ತಂಡ ಈತನನ್ನು ಬಂಧಿಸಿತ್ತು. ತಿಂಗಳಿಗೆ 2 ಬಾರಿ ಪೊಲೀಸ್ ಠಾಣೆಗೆ ಹಾಜರಾಗಬೇಕು ಹಾಗೂ ಮುಂಬೈನಲ್ಲಿ ಉಳಿದುಕೊಂಡಿರುವ ವಿಳಾಸವನ್ನು ಪೊಲೀಸರಿಗೆ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.

ಪಾಕ್ ವಿರುದ್ಧ ಭಾರತ ಸೋಲಿನಿಂದಾಗಿ ತೀತ್ರ ಬೇಸರಕ್ಕೆ ಒಳಗಾಗಿ ಅತ್ಯಾಚಾರ ಬೆದರಿಕೆ ಪೋಸ್ಟ್ ಹಾಕಿದ್ದಾಗಿ ಹೇಳಿಕೆ ನೀಡಿದ್ದ. ಆಕಸ್ಮಿಕವಾಗಿ ತಮ್ಮ ಮಗ ಅತ್ಯಚಾರ ಬೆದರಿಕೆ ಪೋಸ್ಟ್ ಮಾಡಿದ್ದಾನೆ ಎಂದು ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಕನ್ನಡಕ ಹಾಕಿದ್ದ ಆತ ಅದನ್ನು ತೆಗೆದ ಬಳಿಕ ತಪ್ಪಾಗಿ ಟೈಪ್ ಮಾಡಿರಬೇಕು. ತಕ್ಷಣ ಪೋಸ್ಟ್ ಅನ್ನು ಅಳಿಸಿದ್ದಾನೆ ಎಂದು ಆರೋಪಿ ತಂದೆ ಹೇಳಿದ್ದರು.

ಅಕ್ಟೋಬರ್ 24 ರಂದು ನಡೆದ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ನಂತರ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ನಿರಂತರವಾಗಿ ಆನ್‌ಲೈನ್‌ನಲ್ಲಿ ಟೀಕೆಗೆ ಒಳಗಾದರು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಶಮಿಯನ್ನು ಬೆಂಬಲಿಸಿ ಆನ್‌ಲೈನ್‌ನಲ್ಲಿ ‘ಸ್ಪೈನ್‌ಲೆಸ್’ ಎಂಬ ಘೋಷಣೆಯನ್ನು ನೀಡಿದರು. ಅದರ ನಂತರ ದ್ವೇಷಿಗಳು ವಿರಾಟ್ ಅವರ 9 ತಿಂಗಳ ಮಗಳನ್ನು ಗುರಿಯಾಗಿ ತೆಗೆದುಕೊಂಡಿದ್ದರು. ಅದರಲ್ಲೂ @Criccrazyygirl ಎಂಬ ಟ್ವಿಟರ್ ಖಾತೆಯಿಂದ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top