fbpx
ಸಮಾಚಾರ

ಮತ್ತೆ ಏರಿಕೆ ಕಂಡ ಪೆಟ್ರೋಲ್ ಡೀಸೆಲ್ ಬೆಲೆ: ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ

ಟ್ರೋಲ್‌ ಮತ್ತು ಡೀಸೆಲ್‌ ದರ ಈಗ ವಿಮಾನಗಳ ಇಂಧನ ದರಕ್ಕಿಂತಲೂ ಹೆಚ್ಚಾಗಿದೆ. ಒಂದು ಲೀಟರ್‌ ಏವಿಯೇಷನ್‌ ಟರ್ಬೈನ್‌ ಇಂಧನ (ಎಟಿಎಫ್‌) ಬೆಲೆ 79 ರೂ. ಇದ್ದರೆ, ದೇಶಾದ್ಯಂತ ಪೆಟ್ರೋಲ್‌ ದರ 100ರ ಗಡಿ ದಾಟಿ 110ರ ಅಸುಪಾಸಿನಲ್ಲಿದೆ. ಪೆಟ್ರೋಲ್‌ ದರವು ವೈಮಾ​ನಿಕ ಇಂಧ​ನ​ಕ್ಕಿಂತಲೂ ಶೇ.33ರಷ್ಟು ಹೆಚ್ಚು ದುಬಾ​ರಿಯಾಗಿದೆ.

ವಿಮಾನದ ಇಂಧನ ಎಟಿಎಫ್‌ಗೆ(ATF) ಒಂದು ಲೀಟ​ರ್‌ಗೆ 79 ರು. ಇದ್ದರೆ, ದೇಶಾದ್ಯಂತ ಪೆಟ್ರೋಲ್‌ ದರ 110 ರು. ಆಸುಪಾಸಿನಲ್ಲಿದೆ. ಅಂದರೆ ಪೆಟ್ರೋಲ್‌ ದರವು ವೈಮಾ​ನಿಕ ಇಂಧ​ನ​ಕ್ಕಿಂತತ ಶೇ.33ರಷ್ಟು ಹೆಚ್ಚು ದುಬಾ​ರಿ.

ಕಳೆದ 4 ದಿನಗಳಿಂದ ಇಂಧನ ದರ ಏರಿಕೆ ಪರ್ವ ಮುಂದುವರಿದಿದ್ದು, ಈ 4 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.40 ರು. ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 109.53 ರು. ಮತ್ತು ಡೀಸೆಲ್‌ ದರ 100.37 ರು.ಗೆ ತಲುಪಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ಗೆ 105.84 ರು. ಮತ್ತು ಡೀಸೆಲ್‌ಗೆ 94.57 ರು. ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ 111.77 ರು. ಮತ್ತು ಡೀಸೆಲ್‌ 102.52 ರು.ಗೆ ಜಿಗಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top