ಸಮಾಚಾರ

“ನಾನು ಸಿದ್ದು ಖಾನ್ ಆದರೇ, BSYಗೆ ಯಡ್ಡಿ ಖಾನ್​ ಅನ್ನಬೇಕಾ? ಶೆಟ್ಟರ್​ ಯಾವ ಖಾನ್​?” ಸಿದ್ದರಾಮಯ್ಯ ತಿರುಗೇಟು.

ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ‘ಸಿದ್ದು ಖಾನ್’​ ಎನ್ನುವ ಮೂಲಕ ಗೇಲಿ ಮಾಡಿದ್ದ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡಿದಕ್ಕೆ ನನ್ನನ್ನು ಸಿದ್ದುಖಾನ್ ಎಂದು ಕರೆದ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ಸಿದ್ದು “ಈ ಹಿಂದೆ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ್ದರು. ಅವರನ್ನು ಯಡ್ಡಿಖಾನ್ ಎಂದು ಕರೆಯಲು ಆಗುತ್ತಾ?” ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಸಿದ್ದರಾಮಯ್ಯ ಅವರು, “ಟಿಪ್ಪು ಜಯಂತಿ ಆಚರಣೆ ಮಾಡಿದ್ದಕ್ಕೆ ನನ್ನನ್ನು ಸಿದ್ದು ಖಾನ್ ಕರೆಯುವುದಾದರೆ. ಬಿಜೆಪಿ ನಾಯಕರದ ಜಗದೀಶ್ ಶೆಟ್ಟರ್, ಆರ್ ಅಶೋಕ್ ಅವರು ಕೂಡ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರನ್ನು ಯಾವ ಖಾನ್ ಅಂತ ಕರೆಯಬೇಕೆಂದು ನೀವು ನಿರ್ಧಾರ ಮಾಡಿ” ಎಂದು ಸಕ್ಕತ್ತಾಗಿ ತಿರುಗೇಟು ಕೊಟ್ಟರು.

“ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಬಿಜೆಪಿ ಪಕ್ಷದವರಿಗೆ ಎರಡೆರಡು ನಾಲಿಗೆಯಿದೆ. ಈ ಹಿಂದೆ ಇವರೇ ಟಿಪ್ಪು ಸುಲ್ತಾನ್​ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಮೆರೆದಿದ್ದಾರೆ. ಈಗ ನನ್ನನ್ನು ಸಿದ್ದು ಖಾನ್​ ಎಂದು ಹೇಳುತ್ತಿದ್ದಾರೆ. ಇಂತಹ ಎರಡು ನಾಲಿಗೆಯವರಿಗೆ ನಾನು ಏನು ಹೆಸರಿಡಬೇಕು? ಸಂವಿಧಾನದ ಪರವಾಗಿ ಇರುವುದು ಮತಾಂಧತನವಾ? ” ಎಂದು ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top