ಮನೋರಂಜನೆ

ಅಂದು ಯಶ್​​ಗೆ Mr.ಶೋ ಆಫ್ ಎಂದಿದ್ದ ರಶ್ಮಿಕಾ ಇಂದು KGF ಟ್ರೈಲರ್ ನೋಡಿ ಹೇಳಿದ್ದೇನು ಗೊತ್ತಾ?

ಪ್ರೇಕ್ಷಕರ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಕೆಜಿಎಫ್​ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ನಗರದ ಓರಾಯನ್​ ಮಾಲ್​ನಲ್ಲಿ ನೆನ್ನೆ ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಐದೂ ಭಾಷೆಯಲ್ಲೂ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ.. ಟ್ರೈಲರ್ ನೋಡಿ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ.

ಇದರ ಬೆನ್ನಲ್ಲೇ, ಈ ಹಿಂದೆ ಯಶ್​​ಗೆ ಬಗ್ಗೆ Mr ಶೋ ಆಫ್ ಅಂತಾ ಹೇಳಿಕೆ ನೀಡಿದ್ದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕೂಡಾ ಕೆಜಿಎಫ್​ ಚಿತ್ರದ ಟ್ರೈಲರ್​ನ ಹಾಡಿ ಹೊಗಳಿದ್ದಾರೆ. ಹೌದು, ಕೆಜಿಎಫ್​ ಟ್ರೈಲರ್​ ವೀಕ್ಷಿಸಿರುವ ರಶ್ಮಿಕಾ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡುವ ಮೂಲಕ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿತ್ರತಂಡಕ್ಕೆ ಶುಭಕೋರಿದ್ದಾರೆ..

“OMG! OMG! OMG! ನಿಜವಾಗಿಯೂ ನಾನು KGF ಟ್ರೈಲರ್​​ಗೆ ಕ್ಲೀನ್ ಬೌಲ್ಡ್ ಆಗಿ ಹೋಗಿದ್ದೇನೆ. ಅಮೇಜಿಂಗ್ ಆಗಿದೆ!! ಇಡೀ ಚಿತ್ರ ತಂಡಕ್ಕೆ Bestest of luck. ಚಿತ್ರಕ್ಕಾಗಿ ಪಟ್ಟಿರುವ ಪರಿಶ್ರಮ ಟ್ರೈಲರ್​​ನಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಚಿತ್ರತಂಡ ಏನ್ ಅಂದುಕೊಂಡಿದೆಯೋ ಅದು ಸಿಕ್ಕೇ ಸಿಗುತ್ತೆ ” ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಸಿನಿಮಾ ಬಹುಕೋಟಿ ವೆಚ್ಚದ ಸಿನಿಮಾ. ಸುಮಾರು 70ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದ್ದು ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.. ಚಾಪ್ಟರ್-1 ಮತ್ತು ಚಾಪ್ಟರ್-2 ರೂಪದಲ್ಲಿ ಎರಡು ಕಂತುಗಳಲ್ಲಿ ‘ಕೆಜಿಎಫ್’ ಬಿಡುಗಡೆಯಾಗುತ್ತಿದೆ. ಮೊದಲ ಭಾಗದಲ್ಲಿ ರಾಕಿಯ ಬಾಲ್ಯ ಮತ್ತು ಭೂಗತ ಲೋಕದಲ್ಲಿ ಆತ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಳ್ಳಲು ಕಾರಣವೇನು ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ತೋರಿಸಲಿದ್ದಾರಂತೆ.

ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.. ಇಂಥಾ ಮಹೋನ್ನತ ಚಿತ್ರ ಡಿಸೆಂಬರ್ 21ರಂದು ದೇಶಾದ್ಯಂತ ತೆರೆಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top