ದೇವರು

ಸಂಜೆ ಸಮಯದಲ್ಲಿ ಎಳ್ಳಿನ  ಎಣ್ಣೆಯಿಂದ ದೀಪ ಹಚ್ಚಿ ಈ ಶ್ಲೋಕ ಪಠಣೆ ಮಾಡಿದ್ರೆ ಎಂತಾ ಪಾಪ ಮಾಡಿದ್ರು ಕರಗಿ ಪುಣ್ಯ ಲಭಿಸಿ ಮನೆಗೆ ಒಳ್ಳೆದಾಗುತ್ತೆ

ಗೋಧೂಳಿ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು.

ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿದಿನ ಪೂಜೆ ಮಾಡಿದರೆ ಎಲ್ಲ ರೀತಿಯಲ್ಲೂ ಒಳ್ಳೆಯದಾಗುವುದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ .ಆದರೆ ಈ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ತುಂಬಾ ಜನರಿಗೆ ಈ ಆಧುನಿಕ ಕಾಲದಲ್ಲಿ ತುಂಬಾ ಹೆಚ್ಚಾಗಿ ಸಂದೇಹಗಳು ಬರುತ್ತಿವೆ. ಇದಕ್ಕೆ ಕಾರಣ ಹಿರಿಯರು ವಿವಿಧ ಕಾರಣಗಳಿಂದ ನಮ್ಮ ಹತ್ತಿರ ಇಲ್ಲದೇ ಇರುವುದು .ಯಾವಾಗ ಹಿರಿಯರ ನಿರೀಕ್ಷೆ ಕಡಿಮೆ ಆಗುತ್ತದೆಯೋ ಆಗ ಧರ್ಮದ ಬಗ್ಗೆ ಸಂದೇಹಗಳು ಹೆಚ್ಚಾಗುತ್ತಾ ಹೋಗುತ್ತವೆ.ಮುಖ್ಯವಾಗಿ ಪ್ರತಿದಿನ ಗೋಧೂಳಿಯ ಸಮಯದಲ್ಲಿ ಸಂಜೆ ದೇವರ ಪೂಜೆಯನ್ನು ಹೇಗೆ ಮಾಡಬೇಕು ಎಂದು ಸಂದೇಹಗಳು ಹೆಚ್ಚು.ಶ್ರೀ ಜೇಷ್ಠ ದೇವಿ ಮನೆಯ ಹಿಂದಿನ ಬಾಗಿಲಿನಿಂದ ಮತ್ತು ಶ್ರೀ ಮಹಾಲಕ್ಷ್ಮಿ ದೇವಿ ಮನೆಯ ಮುಂಬಾಗಿಲಿನ ಭಾಗಿಲಿನಿoದ ಮನೆಯೊಳಗೆ ಪ್ರವೇಶ ಮಾಡುತ್ತಾರೆ.ಅದಕ್ಕೆ ಹಿಂದಿನ ಬಾಗಿಲನ್ನು ಗೋಧೋಳಿ ಸಮಯದಲ್ಲಿ ಮುಚ್ಚಬೇಕು ಮತ್ತು ಮುಂಬಾಗಿಲಿನ ಮನೆಯ ಮುಂದಿನ ಬಾಗಿಲನ್ನು ತೆರೆಯಬೇಕು.

 

 

 

ಶ್ರೀ ಮಹಾಲಕ್ಷ್ಮೀ ದೇವಿಯ ಗೋಧೂಳಿಯ ಸಮಯದಲ್ಲಿ ಬರುವುದರಿಂದ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಶ್ರೀ  ಮಹಾಲಕ್ಷ್ಮೀ ದೇವಿಯು ಬರುವ ಸಮಯದಲ್ಲಿ ನಾವು ಅಳುವುದಾಗಲಿ, ಕಿರುಚುವುದಾಗಲಿ ಅಥವಾ ಕೆಟ್ಟ ಮಾತುಗಳನ್ನು ಆಡುವುದನ್ನಾಗಲಿ ಮಾಡಬಾರದು. ಹಾಗೆ ಉಗುರನ್ನು ಕತ್ತರಿಸಬಾರದು, ತಲೆಯನ್ನು ಬಾಚುತ್ತ ಇರಬಾರದು. ಇಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಸಂಜೆಯ ಸಮಯದಲ್ಲಿ ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಗೋಧೂಳಿಯ ಸಮಯದಲ್ಲಿ ಎಳ್ಳಿನ  ಎಣ್ಣೆಯಿಂದ ದೀಪಾರಾಧನೆ ಮಾಡಿ. ಈ ಶ್ಲೋಕವನ್ನು ಪಠಿಸಿದರೆ ಗೊತ್ತೋ ಗೊತ್ತಿಲ್ಲದೆಯೋ ಆಗಿರುವ ಸಣ್ಣ ಪುಟ್ಟ ತಪ್ಪುಗಳು ಮತ್ತು ಪಾಪಗಳು ದೂರವಾಗುತ್ತವೆ. ಆ ಮಂತ್ರ ಹೀಗಿದೆ

 

 

 

 

“ ದೀಪಂ ಜ್ಯೋತಿ ಪರಬ್ರಹ್ಮ ,

ದೀಪಂ ಸರ್ವತೋಪಹಮ,

ದೀಪೇನ ಸಾಧ್ಯತೇ ಸರ್ವಂ ,

ಸಂಧ್ಯಾ ದೀಪಂ ನಮೋಸ್ತುತೇ”

ಹೀಗೆ ಪ್ರತಿ ದಿನ ಗೋಧೂಳಿ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಿ ಒಂದು ದೀಪವನ್ನು ದೇವರ ಕೋಣೆಯಲ್ಲಿ ಹಚ್ಚಿದರೆ ಎಲ್ಲವೂ ಶುಭವಾಗುವುದು. ಹಾಗೆ ಯಾವುದೇ ಕಾರಣಕ್ಕೂ ಮನೆಯನ್ನು ದೇವರ ಕೋಣೆಯನ್ನು ಕತ್ತಲಾಗಿ ಸಂಜೆಯ ಸಮಯದಲ್ಲಿ ಖಾಲಿ ಬಿಡಬೇಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top