ಸಮಾಚಾರ

ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿ ದಿಢೀರ್ ಪ್ರತ್ಯಕ್ಷ- ವಿಡಿಯೋ ನೋಡಿ.

ಆಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ನಾಲ್ಕು ದಿನಗಳ ಬಳಿಕ ಮಾಧ್ಯಮಗಳಿಗೆ ವಿಡಿಯೋ ಸಂದೇಶ ಕಳುಹಿಸುತ್ತಿದ್ದು, ತಾವು ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ವಿಡಿಯೋ ನೋಡಿ.👇👇👇

 

‘ನಾನು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲಿಯೇ ಇದ್ದೇನೆ. ಹೋಗೋ ಅವಶ್ಯಕತೆಯೂ ಇಲ್ಲ. ಇಂದು ಮಧ್ಯಾಹ್ನ 3.30ಕ್ಕೆ ಸಿಸಿಬಿ ಕಚೇರಿ ಮುಂದೆ ಹಾಜರಾಗುತ್ತೇನೆ’ ಎಂದು ಅಜ್ಞಾತ ಸ್ಥಳದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ವೀಡಿಯೋ ಸಂದೇಶ ರಿಲೀಸ್ ಮಾಡಿದ್ದಾರೆ.

ನಾಳೆ ಭಾನುವಾರ ವಿಚಾರಣೆಗೆ ಬರುವಂತೆ ನಿನ್ನೆ ನೋಟಿಸ್​ ಕೊಟ್ಟಿದ್ದಾರೆ. ಆದ್ರೆ ನಾನು ಇವತ್ತೇ ಸಿಸಿಬಿ ಕಚೇರಿಗೆ ಹಾಜರಾಗುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಸಿಸಿಬಿ ಯವರು ಯಾವುದೇ ದಾಖಲೆಗಳನ್ನು ತೋರಿಸದೇ ಮಾಧ್ಯಮಗಳ ದಿಕ್ಕು ತಪ್ಪಿಸಿರೋದು ನನಗೆ ನೋವಾಗಿದೆ.

‘ನನ್ನ ನಿವಾಸದ ಎದುರು ಭಯದ ವಾತಾವರಣ ಸೃಷ್ಠಿಸಿದ್ದಾರೆ’ ಎಂದು ಆರೋಪಿಸಿರುವ ರೆಡ್ಡಿ, ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಎಫ್‍‌ಐಆರ್‌ನಲ್ಲಿ ಹೆಸರೂ ಇಲ್ಲ. ನೋಟಿಸ್ ನೀಡದೇ ಹಾಜರಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

 

ಏನಿದು ಪ್ರಕರಣ?
ನೋಟ್‌ ಬ್ಯಾನ್‌ ವೇಳೆ ಬಹುಕೋಟಿ ರೂಪಾಯಿ ವಹಿವಾಟು ಮಾಡಿರುವ ಆರೋಪ ಜನಾರ್ದನ ರೆಡ್ಡಿ ಮೇಲಿದೆ. ಆಪ್ತ ಸಹಾಯಕ ಆಲಿಖಾನ್‌ ಮೂಲಕ ಬ್ಯಾನ್ ಆಗಿದ್ದ ನೋಟುಗಳನ್ನ ಬದಲಾವಣೆ ಮಾಡಿರುವ ಆರೋಪವಿದು. ಆಂಬಿಡೆಂಟ್‌ ಗ್ರೂಪ್ ಮೂಲಕ ಅಕ್ರಮ ಹಣ ಬದಲಾವಣೆ ಮಾಡಿಕೊಂಡಿರುವ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿಯ ಮೇಲಿದೆ… ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನ್ಯಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅಂಬಿಡೆಂಟ್ ಮಾರ್ಕೆಟಿಂಗ್ ಲಿಮಿಟೆಡ್‍ನಲ್ಲಿ ರದ್ದಾದ 100 ಕೋಟಿ ರೂ. ನೋಟುಗಳನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ 57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿ ರೆಡ್ಡಿ ಡೀಲ್ ಮಾಡಿಕೊಂಡಿದ್ದರು ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 20 ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆಂಬ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸ್ತಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ಟೀಂ, ಜನಾರ್ದನ್​​ ರೆಡ್ಡಿಯನ್ನ ಅರೆಸ್ಟ್​ ಮಾಡಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top