ಸಮಾಚಾರ

ಕೊನೆಗೂ ಸಿಕ್ಕಿಬಿದ್ದ ವಿನೋದ್ ರಾಜ್ ಬಳಿಯಿಂದ ಕಳ್ಳತನ ಮಾಡಿದ್ದ ಖದೀಮ.

ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ಕಳ್ಳತನ ಮಾಡಿದ್ದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್‍ನ ರಾಜು ಎಂಬ ಓರ್ವ ಖದೀಮನನ್ನ ಪೊಲೀಸರು ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲದಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ಓಜಿಕುಪ್ಪಂ ಗ್ಯಾಂಗ್‍ನ ಓರ್ವ ಅಂದರ್ ಆಗಿದ್ದು, ಮತ್ತಷ್ಟು ಖದೀಮರಿಗೆ ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಬಲೆ ಬೀಸಿದೆ.

ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಈ ಖದೀಮರ ಗುಂಪಿನಿಂದ ಯಾರಿಗೂ ದ್ರೋಹ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಪೋಲೀಸರ ಅತಿಥಿಯಾಗಿರುವ ರಾಜು ಅಲಿಯಾಸ್ ಹೈಟೆಕ್ ರಾಜು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು ಬ್ರ್ಯಾಂಡೆಂಡ್ ಬರೋಬ್ಬರಿ 5 ರಿಂದ 8 ಸಾವಿರ ಬೆಲೆ ಬಾಳುವಂತದ್ದಾಗಿದ್ದು ಹೈಟೆಕ್ ಜೀವನ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಏನಿದು ಘಟನೆ?
ತಿಂಗಳ ಹಿಂದೆ ವಿನೋದ್‍ರಾಜ್ ಇಂಡಸ್‍ಲ್ಯಾಂಡ್ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದು ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನಲ್ಲಿ ಕುಳಿತ್ತಿದ್ದರು. ಇದನ್ನು ನೋಡಿದ ಕಳ್ಳರ ಗುಂಪೊಂದು ಈ ವೇಳೆ ಅಲ್ಲಿಗೆ ಬಂದ ಒಬ್ಬ ಕಳ್ಳರು, ಸರ್ ನಿಮ್ಮ ಕಾರಿನ ಟೈರ್ ಪಂಚರ್ ಆಗಿದೆ ನೋಡಿ ಎಂದು ಹೇಳಿದ್ದಾರೆ. ಚೋರರ ಮಾತನ್ನ ಕೇಳಿ ವಿನೋದ್‍ರಾಜ್ ಕಾರಿನ ಕಿಟಕಿಯಿಂದ ಕೆಳಗೆ ನೋಡುತ್ತಿದ್ದಂತೆ ಕಳ್ಳರು ಕಾರಿನಲ್ಲಿದ್ದ ಒಂದು ಲಕ್ಷ ರೂ. ಇದ್ದ ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top