ಅರೋಗ್ಯ

‘ತೊನ್ನು’ ಅಥವಾ ‘ಬಿಳಿ ಮಚ್ಚೆ’ಗಳ ಸಮಸ್ಯೆ ದೇವರು ಕೊಟ್ಟ ಶಾಪವಲ್ಲ ಅದಕ್ಕೂ ಮನೆಮದ್ದುಗಳು ಮಾಡ್ಕೊಂಡು ವಾಸಿಮಾಡ್ಕೊಬಹುದು ಹೇಗೆ ಅಂತೀರಾ ಮುಂದೆ ಓದಿ.

ಸ್ವಯಂ ಪ್ರತಿರೋಧಕ ಅಸಹಜತೆಯ ಕಾಯಿಲೆ ಚರ್ಮಕ್ಕೆ ಬಣ್ಣ ನೀಡುವ `ಮೆಲನಿನ್’ ಅಂಶದ ಕೊರತೆ ಕಂಡುಬಂದಾಗ ಈ ಕಾಯಿಲೆ ಗೋಚರಿಸುತ್ತದೆಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸುವ ಮೆಲನೊಸೈಟೆ ಕೋಶಗಳ ವರ್ಣದ್ರವ್ಯಗಳಲ್ಲಿ ನಷ್ಟದಿಂದಾಗಿ ಚರ್ಮವು ಬಿಳಿ ಬಣ್ಣಕ್ಕೆ ತಿರುಗುತ್ತದೆ. ತೊನ್ನು ದೋಷದಲ್ಲಿ ಮೆಲನೊಸೈಟ್ ಕೋಶಗಳು ನಾಶವಾಗಿ ಚರ್ಮದ ಮೇಲೆ ಬಿಳಿ ಕಲೆಗಳನ್ನು ಉಳಿಸುತ್ತದೆ.

 

 

 

ಮದರಂಗಿ ಗಿಡದ ಬೇರಿನ ತೊಗಟೆಯನ್ನು ಹಾಲಿನಲ್ಲಿ ಅರೆದು ಬಿಳಿ ಮಚ್ಚೆ ಇರುವ ಜಾಗದಲ್ಲಿ ಲೇಪಿಸುತ್ತಿರಬೇಕು.ಎಕ್ಕದ ಬಲಿತ ಎಲೆಯನ್ನು ನೆರಳಿನಲ್ಲಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬೇವಿನ ಎಣ್ಣೆಯಲ್ಲಿ ಕಲೆಸಿ ಹಚ್ಚಬೇಕು.ಮೆಂತೆಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು 3 ತಿಂಗಳೊಳಗೆ ತೊನ್ನುಮಾಯವಾಗುತ್ತದೆ. ಈ ಸಂದರ್ಭ ಟೊಮೆಯೋ, ಬದನೆ ಸೇವಿಸಬಾರದು. ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.ಐದು ಚಮಚ ಅರಿಶಿನಕ್ಕೆ ಸಾಸಿವೆ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಂಡು ಬಿಳಿ ಮಚ್ಚೆಗಳು ಇರುವ ಜಾಗಕೆ ಹಚ್ಚಿಕೊಳ್ಳಿ .ಪರಂಗಿ ಹಣ್ಣನ್ನು ದಿನಾಗಲೂ ಬಿಳಿ ಮಚ್ಚೆಗಳು ಇರುವ ಜಾಗಕೆ ಹಚ್ಚಿಕೊಳ್ಳಿ , ಸಾಧ್ಯವಾದ್ರೆ ಹೆಚ್ಚು ಪರಂಗಿ ಹಣ್ಣು ತಿನ್ನಿ .

 

 

 

ಸೊರಲಿಯಾ ಮತ್ತು ಹುಣಸೆ ಬೀಜವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು 2-3 ದಿನ ಚೆನ್ನಾಗಿ ನೆನೆಸಿ ನಂತರಹೊಟ್ಟು ತೆಗೆದು ಪೇಸ್ಟ್ ಮಾಡಿಕೊಳ್ಳಿ. ಇದನು ಬಿಳಿ ಮಚ್ಚೆಗಳ ಮೇಲೆ ಲೇಪಿಸಿ.ಶುಂಠಿ ಎಲೆಯನ್ನು ನೀರಿನಲ್ಲಿ ಬೇಯಿಸಿ ಪೇಸ್ಟ್ ಮಾಡಿಕೊಂಡು ಬಿಳಿ ಮಚ್ಚೆ ಇರುವ ಜಾಗದಲ್ಲಿ ಲೇಪಿಸುತ್ತಿರಬೇಕು.ಅರಿಶಿನದ ಕೊಂಬು ಮತ್ತು ಚೆನ್ನಾಗಿ ಬಲಿತ ಎಕ್ಕದ ಬೇರನ್ನು ನೀರಿನಲ್ಲಿ ತೇಯ್ದು, ಈ ಗಂಧವನ್ನು ಬೆರಿಸಿ ಬಿಳಿ ಮಚ್ಚೆ ಇರುವ ಜಾಗದಲ್ಲಿ ಲೇಪಿಸಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top