ಅರೋಗ್ಯ

ಗೊರಕೆ ಹೊಡಿಯೋದ್ರಿಂದ ಡೈವರ್ಸ್ ಕೂಡ ಆಗಿದೆ ಅಷ್ಟು ಡೇಂಜರ್ ಇದು, ಅದಕ್ಕೆ ಇವುಗಳನ್ನ ಹೆಚ್ಚಾಗಿ ತಿನ್ಕೊಂಡು ಅಕ್ಕ ಪಕ್ಕದವರಿಗೂ ಚೆನ್ನಾಗಿ ನಿದ್ದೆ ಕೊಡಿ

ನಿದ್ಧೆ ಅಂದ್ರೆ ನಮಗೆ ಮೊದ್ಲು ನೆನಪಾಗೋದು ಕನಸು ನಂತರ ಗೊರಕೆ,ಈ ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗ್ತಾರೆ.

 

 

 

ಈ ಗೊರಕೆಗೆ ಮುಖ್ಯ ಕಾರಣ ಏನು ಅಂತ ನಿಮಗೆ ಗೊತ್ತ?

ನಿದ್ರೆಯ ಸಮಯದಲ್ಲಿ ನಿಮ್ಮ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ ಮೂಗಿನಿಂದ ಸರಿಯಾದ ಆಮ್ಲಜನಕ ಪ್ರಸಾರದ ಕೊರತೆಯಿಂದ ಗೊರಕೆ ಉಂಟಾಗುತ್ತದೆ. ಇದು ಸುತ್ತಮುತ್ತಲಿನ ಅಂಗಾಂಶಗಳನ್ನು ಕಂಪಿಸುವಂತೆ ಮಾಡಿ, ಗೊರಕೆಯ ಶಬ್ದವನ್ನು ಉಂಟುಮಾಡುತ್ತದೆ.ನೀವು ತಿನ್ನುವಂತ ಊಟ ಮತ್ತು ನಿಮ್ಮ ಅಭ್ಯಾಸಗಳು ಕೂಡ ಇದರ ಮೇಲೆ ಗಾಢ ವಾದ ಪರಿಣಾಮಬೀರುತ್ತದೆ.

ನಿಮ್ಮ ಗೊರಕೆ ನಿಲ್ಲಲು ಈ ಕೆಳಗಿನ ಊಟ ಮತ್ತು ಅಭ್ಯಾಸವನ್ನು ಅನುಸರಿಸಿ:

ಸೋಯಾ ಹಾಲು:ಹಸುವಿನ ಹಾಲಿಗಿಂತ ಸೋಯಾ ಹಾಲನ್ನು ಕುಡಿಯಿರಿ,ಸೋಯಾ ಹಾಲು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೇನಿನ ತುಪ್ಪ:ಜೇನಿನ ತುಪ್ಪ ಸೂಕ್ಷ್ಮ ಜೀವಿಗಳ ವಿರುದ್ದ ಹೊರಡುವ ಮತ್ತು ಗೊರಕೆಯನ್ನು ನಿಲ್ಲಿಸುವ ಗುಣವನ್ನು ಹೊಂದಿದ್ದು ,ನಮ್ಮ ಆರೋಗ್ಯದ ದೃಷ್ಠಿಯಿಂದ ತುಂಬಾ ಒಳ್ಳೆಯದು.

ಮಾಂಸವನ್ನು ಬಿಟ್ಟು ಮೀನನ್ನು ತಿನ್ನಿ:ಮಾಂಸದ ಸೇವನೆ ಕೊಬ್ಬು ಹೆಚ್ಚಾಗುವುದರ ಜೊತೆ ಗೊರಕೆಗೆ ಕಾರಣವಾಗುತ್ತದೆ ಅದರಿಂದ ಮಾಂಸ ಸೇವನೆಯನ್ನು ಬಿಟ್ಟು ಮೀನಿನ್ನ ಸೇವನೆ ಮಾಡುವುದರಿಂದ ನಿಮ್ಮ ಗೊರಕೆ ಕಡಿಮೆಯಾಗುವುದಲ್ಲದೆ ನಿಮ್ಮ ಅರೋಗ್ಯ ಸುಧಾರಿಸುತ್ತದೆ.

ಚಹಾ ಸೇವನೆ:

 

 

 

ಚಹಾ ಮತ್ತು ಗೊರಕೆಯ ನಡುವಿನ ಸಂಪರ್ಕವನ್ನು ಬಲವಾಗಿ ಸಾಬೀತುಪಡಿಸಲಾಗಿದೆ. ಚಹಾ ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಗೊರಕೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ದೈನಂದಿನ ಆಹಾರಕ್ರಮದಲ್ಲಿ ಚಹಾವನ್ನು ಸೇವಿಸಿ.

ಅದಷ್ಟು ಈರುಳ್ಳಿಯನ್ನು ತಿನ್ನಿ:ಈರುಳ್ಳಿ ಸುಲಭವಾಗಿ ಉಸಿರಾಡಲು ಸಹಾಯ ಮಾಡುವುದಲ್ಲದೆ ನಿಮ್ಮ ಗೊರಕೆಯ ಸಮಸ್ಯೆಗೆ ರಾಮಬಾಣ.

ಗೊರಕೆಯನ್ನು ತಡೆಯಲು ಈ ಕೆಳಗಿನ ಅಭ್ಯಾಸದ ಬಗ್ಗೆ ನೀವು ಗಮನ ಕೊಡಬೇಕು:

ಮದ್ಯಪಾನ ಮಾಡುವುದನ್ನು ನಿಲ್ಲಿಸಿ :ಮಲಗುವ ಮೊದಲು ನೀವು ವೈನ್ ಅಥವಾ ಆಲ್ಕೊಹಾಲ್ಯುಕ್ತ ಪಾನೀಯವನ್ನು ಸೇವಿಸಿದರೆ, ನಿಮ್ಮ ಗೊರಕೆ ಹೆಚ್ಚುತ್ತದೆ. ಅಲ್ಲದೆ, ಮದ್ಯಪಾನ ಸೇವನೆ ಯಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.

ಧೂಮಪಾನ ಮಾಡುವುದನ್ನು ನಿಲ್ಲಿಸಿ:ನೀವು ಧೂಮಪಾನ ಮಾಡಿದರೆ ಗಂಟಲು ಮತ್ತು ಮೂಗು ಕಟ್ಟಿಕೊಂಡು ಉಸಿರಾಟ ತೊಂದರೆಯಾಗಿ ಅದು ಗೊರಕೆಗೆ ಕಾರಣ ವಾಗುತ್ತದೆ.

ಯೋಗ ಮಾಡಿ :ಯೋಗ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಯ ಜೊತೆಗೆ ನಿಮಗೆ ಕಿರಿ ಕಿರಿ ಕೊಡುವ ಈ ಗೊರಕೆ ಸಮಸ್ಯೆ ದೂರವಾಗುತ್ತದೆ.

ನೀರನ್ನು ಚೆನ್ನಾಗಿ ಸೇವಿಸಿ:ನೀರಿನಲ್ಲಿರುವ ಗುಣ ನಿಮ್ಮ ಯಾವುದೇ ಅರೋಗ್ಯ ಸಮಸ್ಯೆಗಳನ್ನೂ ವಾಸಿ ಮಾಡುವುದಲ್ಲದೆ,ಸುಲಭ ವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top