ದೇವರು

ವಾಸ್ತು ಶಾಸ್ತ್ರದ ಪ್ರಕಾರ ಈ ಶಬ್ಧಗಳು ಮನೆಯಲ್ಲಿ ಕೆಟ್ಟ , ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆಯಂತೆ ಅದಕ್ಕೆ ಈ ರೀತಿಯ ಶಬ್ದಗಳು ಮನೆಯಲ್ಲಿ ಬರದಂತೆ ಎಚ್ಚರಿಕೆ ವಹಿಸಿ

ವಾಸ್ತು ಶಾಸ್ತ್ರದ ಪ್ರಕಾರ ಯಾವ ರೀತಿಯ ಶಬ್ದಗಳು ಮನೆಯಲ್ಲಿ ಬರದಂತೆ  ತಡೆಗಟ್ಟಬೇಕು.

 

 

 

ಮನೆಯಲ್ಲಿ ಈ ಶಬ್ದಗಳು ಬರದಂತೆ ನೋಡಿಕೊಳ್ಳಬೇಕು. ಈ ಶಬ್ದಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ .ಈ ಶಬ್ದಗಳು ಮನೆಯಲ್ಲಿ ಬರದಂತೆ ನೋಡಿಕೊಂಡರೆ ಲಕ್ಷ್ಮೀ ದೇವಿಯೂ ಸಹ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.ಶ್ರೀ ಮಹಾಲಕ್ಷ್ಮೀ ದೇವಿಯು ನಮ್ಮ ಮನೆಗೆ ಬರಬೇಕೆಂದರೆ ಕೆಲವು ನಿಯಮಗಳನ್ನು ನಾವು ಖಂಡಿತವಾಗಿಯೂ ಸಹ ಪಾಲಿಸಲೇಬೇಕು.ಮನೆಯನ್ನು ಯಾವಾಗಲೂ ಸದಾ ಕಾಲ ಸ್ವಚ್ಛವಾಗಿಟ್ಟುಕೊಳ್ಳಬೇಕು.ಪ್ರತಿ ನಿತ್ಯ ದೇವರ ಮನೆಯಲ್ಲಿ ದೀಪಾರಾಧನೆ ಮಾಡಬೇಕು .ತುಳಸಿ ಪೂಜೆ ಮಾಡುವುದು.ರಂಗೋಲಿಯನ್ನು ಹಾಕುವುದು.ಅತಿಥಿ ಸತ್ಕಾರ ಮಾಡುವುದು.ಹೀಗೆ ಇವೆಲ್ಲ ನಮಗೆ ಗೊತ್ತಿರುವ ಸಂಗತಿ. ಆದರೆ ತುಂಬಾ ಜನರಿಗೆ ಯಾವ ರೀತಿಯ ಶಬ್ದಗಳು ಮನೆಯಲ್ಲಿ ಬರಬಾರದು ಎಂದು ಗೊತ್ತಿಲ್ಲ.ಆ ಶಬ್ದಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಈ ಜಾಗ್ರತೆಯಿಂದ ನಮ್ಮ ಹಿರಿಯರು ನಮಗೆ ಮುಂಚೆಯೇ ಹೇಳಿದ್ದಾರೆ. ಆದರೂ ಸಹ ನಾವು ಅದರ ಬಗ್ಗೆ ನಿರ್ಲಕ್ಷಿಸಿದ್ದೇವೆ. ಈ ಶಬ್ದಗಳು ಮನೆಯಲ್ಲಿ ಬರದಂತೆ ನೋಡಿಕೊಂಡರೆ ಲಕ್ಷ್ಮಿದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಆ ಶಬ್ದಗಳು ಯಾವುವೆಂದರೆ.

 

 

 

ನಮ್ಮ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ತೆಗೆಯುವಾಗ ಮತ್ತು ಹಾಕುವಾಗ   ಒಂದು  ಕರ್ಕಶವಾದ ಶಬ್ದ ಮತ್ತು ಧ್ವನಿ ಬರುತ್ತದೆ.ಅಂತಹ ಶಬ್ದಗಳು ಬರದಂತೆ ಇರಬೇಕೆಂದರೆ ಅದಕ್ಕೆ ಆಗಾಗ ಕಿಟಕಿ ಮತ್ತು ಬಾಗಿಲುಗಳಿಗೆ ಎಣ್ಣೆಯನ್ನು ಹಾಕಬೇಕು.ನಾವು ಮನೆಯಲ್ಲಿ ನಡೆಯುವಾಗ ಜೋರಾದ ಶಬ್ದ ಬರದಂತೆ ನಡೆಯಬೇಕು.ನಾವು ಆಹಾರವನ್ನು ಅಗೆದು ತಿನ್ನುವಾಗ ಶಬ್ದ ಬರದಂತೆ ಆಹಾರವನ್ನು ಸೇವಿಸಬೇಕು.ಹೀಗೆ ಇಂತಹ ಶಬ್ದಗಳನ್ನು ಮನೆಯಲ್ಲಿ ನಿಯಂತ್ರಿಸಿದರೆ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಕೂಡ ಹೆಚ್ಚಾಗುವುದಿಲ್ಲ.ಎಂದು ನಮ್ಮ ಹಿರಿಯರು ಮತ್ತು ವೇದ, ಪುರಾಣಗಳು ಸಹ ಸಾರಿ ಹೇಳುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top