ಮನೋರಂಜನೆ

ಧಾರ್ಮಿಕ ಭಾವನೆಗೆ ಧಕ್ಕೆ ತಂದ ‘ಜೀರೋ’- ಕಿಂಗ್ ಖಾನ್ ಶಾರುಖ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು.

ವೆರೈಟಿ ವಿವಾದಗಳನ್ನು ಹುಟ್ಟುಹಾಕುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು. ಅದೆಂಥದೇ ಭಯಾನಕ ವಿವಾದವಾದರೂ ನೀರು ಕುಡಿದಷ್ಟು ಸಲೀಸಾಗಿ ಹುಟ್ಟುಹಾಕುವ ಇವರು ಖರ್ಚಿಲ್ಲದೇ ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿವಾದದ ರೂಟು ಹಿಡಿದ್ದಾರೆಯೇ ಎಂಬ ಡೌಟ್ ಹಲವರಲ್ಲಿ ಮೂಡಿಕೊಂಡಿದೆ. ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಯಾರನ್ನಾದರೂ ಕೆರಳಿಸುವ ಸನ್ನಿವೇಶವನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ. ಇಂಥಾದ್ದೇ ಒಂದು ಫಾರ್ಮುಲಾವನ್ನು ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ‘ಜೀರೋ’ ಚಿತ್ರವೂ ಕೂಡ ಅನುಸರಿಸಲು ಮುಂದಾಗಿದೆಯಾ ಎಂಬ ಅನುಮಾನ ಪ್ರೇಕ್ಷಕರ ವಲಯದಲ್ಲಿ ದಟ್ಟವಾಗಿದೆ.

 

 

ಶಾರೂಕ್ ಖಾನ್ ಅಭಿನಯದ ‘ಜೀರೋ’ ಸಿನಿಮಾ ಟ್ರೇಲರ್ ದೊಡ್ಡ ಮಟ್ಟದ ಹೆಸರು ಮಾಡಿತ್ತು. ಇದೀಗ ಈ ಜೀರೋಗೆ ಸಂಕಷ್ಟ ಎದುರಾಗಿದೆ. ಸಿಖ್ಖರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಆರೋಪದಲ್ಲಿ ನಟ ಶಾರೂಕ್ ಕಾನ್ ಹಾಗೂ ಜೀರೋ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜಿಂದೆರ್ ಸಿಂಗ್ ದೂರು ದಾಖಲಿಸಿದ್ದಾರೆ.

ಜೀರೋ ಚಿತ್ರದ ಪ್ರೋಮೋದಲ್ಲಿ ಶಾರೂಕ್ ಖಾನ್ ಸಿಖ್ಖರ ಪೂಜ್ಯನೀಯ ಆಯುಧ ಗತ್ರಾ ಕಿರ್ಪಾನ್ ನನ್ನು ಹಿಡಿದುಕೊಂಡಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆನಂದ್ ಎಲ್ ರೈ ಆರೋಪಿಸಿದ್ದಾರೆ. ಸಿಖ್ಖರ ನಂಬಿಕೆ ಪ್ರಕಾರ ಗತ್ರಾ ಕರ್ಪಾನನ್ನು ಅಮೃತಧಾರಿ ಸಿಖ್ ಮಾತ್ರ ಧರಿಸಬೇಕು. ಬೇರೆಯವರು ಧರಿಸುವಂತಿಲ್ಲ ಎಂಬ ನಿಯಮವಿದೆ. ಶಾರೂಕ್ ಖಾನ್ ಧರಿಸಿರುವುದು ನಮ್ಮ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. ಸಿಖ್ ಧಾರ್ಮಿಕ ಭಾವನೆಗೆ ಧಕ್ಕೆ, ಸಿಖ್ ಪವಿತ್ರ ಕಿರ್ಪಾನ್ ದುರ್ಬಳಕೆ ಎಂದು ದೂರು ನೀಡಿದ್ದಾರೆ.

ರಸ್ತೆಯೊಂದರಲ್ಲಿ ಬನಿಯನ್, ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಅವರ ಕೊರಳಿಗೆ ದುಡ್ಡಿನ ಹಾರ ಹಾಕಲಾಗಿದೆ. ಜೊತೆಗೆ ಕಿರ್ಪಾನ್(ಪವಿತ್ರ ಕತ್ತಿ) ಧರಿಸಿದ್ದಾರೆ. ಎಡಗೈ ಕತ್ತಿಯ ಹಿಡಿಕೆ ಮೇಲಿದೆ. ಈ ಪೋಸ್ಟರ್ ನಲ್ಲಿ ಶಾರುಖ್ ಖಾನ್ ಅವರು ಹಾಸ್ಯದ ಮೂಡ್ ನಲ್ಲಿದ್ದಾರೆ. ಇದು ಇನ್ನೊಂದು ಅಂಶವಾಗಿದ್ದು, ಸಿಖ್ ಸಮುದಾಯವನ್ನು ಕೀಳಾಗಿ ಕಾಣುವಂತಾಗಿದೆ ಎಂದು ದೂರಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top