ಸಮಾಚಾರ

ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದ ಭಾರತೀಯ ಬೌಲರ್- 360 ಡಿಗ್ರಿ ತಿರುಗುವ ಬೌಲರ್ ವಿಡಿಯೋ ವೈರಲ್​.

ಕ್ರಿಕೆಟ್ ಜಗತ್ತಿನಲ್ಲಿ ಬೌಲರ್​ಗಳು ತಮ್ಮದೆ ಆದ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಅನೇಕರ ಗಮನ ಗೆದ್ದವರಿದ್ದಾರೆ ಜೊತೆಗೆ ಎದುರಾಳಿಗೆ ಕಂಟಕವಾದವರೂ ಇದ್ದಾರೆ. ಉದಾಹರಣೆಗೆ ಶ್ರೀಲಂಕಾದ ಲಸಿತ್ ಮಲಿಂಗಾ,ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್​​ಪ್ರೀತ್ ಬುಮ್ರಾ, ಸೇರಿದಂತೆ ಅನೇಕರು ವಿಶಿಷ್ಠ ರೀತಿಯಲ್ಲಿ ಬೌಲಿಂಗ್ ಮಾಡುವುದನ್ನು ನೋಡಿರುತ್ತೇವೆ. ಆದರೆ, ಇಲ್ಲಬ್ಬರು 360 ಡಿಗ್ರಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಉತ್ತರ ಪ್ರದೇಶ ತಂಡದ ಬೌಲರ್‌ ಶಿವ ಸಿಂಗ್‌, ಸಿಕೆ ನಾಯ್ಡು ಟ್ರೋಫಿ ಪಂದ್ಯಾವಳಿಯಲ್ಲಿ ಬೆಂಗಾಲದ ವಿರುದ್ಧದ ಪಂದ್ಯದಲ್ಲಿ ಈ ರೀತಿಯ ಬೌಲಿಂಗ್‌ ಪ್ರದರ್ಶಿಸಿದ್ದಾರೆ. ವಿಶ್ವಕಪ್‌ ಗೆದ್ದ ಭಾರತದ ಅಂಡರ್‌ 19 ತಂಡದಲ್ಲಿ ಸ್ಪಿನ್ನರ್‌ ಶಿವ ಸಿಂಗ್‌ ಸ್ಥಾನ ಪಡೆದಿದ್ದರು.

 

 

ಬೌಲಿಂಗ್ ಮಾಡುವ ಮುನ್ನ ಬೌಲರ್ 360 ಡಿಗ್ರಿ ತಿರುಗಿ ಚೆಂಡನ್ನು ಎಸೆಯುವುದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎನ್ನಬಹುದು. ಬೌಲರ್ ನ ವಿಚಿತ್ರ ಬೌಲಿಂಗ್ ಕಂಡ ಮೈದಾನದ ಅಂಪೈರ್ ಡೆಡ್ ಬಾಲ್ ನೀಡಿದರು. ಈ ರೀತಿ ಬೌಲಿಂಗ್ ಆಕ್ಷನ್ ಮಾಡಬಾರದು ಎಂದು ಹೇಳಿದ್ದರು. ಈ ವೇಳೆ ಮೈದಾನದಲ್ಲಿದ್ದ ಹಲವು ಫೀಲ್ಡರ್ ಗಳು ಇದನ್ನು ಪ್ರಶ್ನಿಸಿದರು. ಕೊನೆಗೆ ಅಂಪೈರ್ ಈ ರೀತಿ ಬೌಲಿಂಗ್ ಆಕ್ಷನ್ ಸಲ್ಲದು ಎಂದು ಹೇಳಿ ಸುಮ್ಮನಾಗಿಸಿದರು.

ಈ ಶೈಲಿಯಲ್ಲಿಯೇ ವಿಜಯ್‌ ಹಜಾರೆ ಟ್ರೋಫಿಯ ಕೇರಳ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ಮಾಡಿದ್ದೆ, ಅಲ್ಲಿ ಅಂಪೈರ್‌ಗಳಿಂದ ಯಾವುದೇ ತಡೆ ಉಂಟಾಗಿರಲಿಲ್ಲ ಎಂದು ಶಿವ ಪ್ರತಿಕ್ರಿಯಿಸಿದ್ದಾರೆ. ‌

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top