ಮನೋರಂಜನೆ

ಯಶ್ ಹಾಗೂ ರಾಧಿಕಾ ಕಂದಮ್ಮನ ಆಗಮನಕ್ಕೆ ಫಿಕ್ಸ್ ಆಯಿತು ಡೇಟ್

ಜೂನಿಯರ್ ಯಶ್ ಅಥವಾ ಜೂನಿಯರ್ ರಾಧಿಕಾ ಪಂಡಿತ್ ಎಂಟ್ರಿ ಗೆ ಫಿಕ್ಸ್ ಆಯಿತು ಡೇಟ್
ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸರಿಸುಮಾರು ಎರಡು ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದ್ದಾರಲ್ಲಾ, ಆಗಿನಿಂದಲೂ ಇವರಿಬ್ಬರಿಗೂ ಅಭಿಮಾನಿಗಳಿಂದ ಹಿಡಿದು ಆಪ್ತರು ಕೇಳುತ್ತಿದ್ದುದು ಒಂದೇ ಪ್ರಶ್ನೆ ”ಮಗು ಯಾವಾಗ?”.. ಪ್ರತಿ ಸಲ ಈ ಪ್ರಶ್ನೆಗೆ ಕೆಳಿದಾಗಲೆಲ್ಲ ನಗುತ್ತಲೇ ‘ಸದ್ಯದಲ್ಲೇ’ ಎಂದು ಉತ್ತರಿಸುತ್ತಿದ್ದ ಯಶ್ ಜೋಡಿ ಕೊನೆಗೂ ಸಿಹಿ ಸುದ್ದಿ ನೀಡಿ ತಿಂಗಳುಗಳೇ ಕಳೆದಿದೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾ ಪಂಡಿತ್ ಫುಲ್ ಖುಷಿಯಾಗಿ ಇದ್ದಾರೆ ,ಮೊನ್ನೆಯಷ್ಟೇ ರಾಧಿಕಾ ಮತ್ತು ಯಶ್ ಬೇಬಿ ಮೂನ್ ಗೆ ಹೋಗಿ ಬಂದದ್ದು ಆಯಿತು ಹಗೆ ಬಸುರಿ ರಾಧಿಕಾಗೆ ಆಕೆಯ ಫ್ರೆಂಡ್ಸ್ ವಿವಿಧ ತಿಂಡಿ ಮಾಡಿ,ತಿನ್ನಿಸಿ ಬಸರಿ ಬಯಕೆ ತೀರಿಸಿದ್ದು ಆಯಿತು.

 

 

 

ಈಗ ಇಡೀ ಕರ್ನಾಟಕವೇ ರಾಧಿಕಾ ಹಾಗೂ ಯಶ್ ಮಗುವಿನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗುತ್ತೆ. ಮದುವೆ ವಾರ್ಷಿಕೋತ್ಸವ ಒಂದಾದರೆ, ಇನ್ನೊಂದು ಬಹುದೊಡ್ಡ ಸಿನಿಮಾ ಕೆಜಿಎಫ್ ರಿಲೀಸ್ ಆಗುತ್ತದೆ. ಅಷ್ಟೇ ಅಲ್ಲದೆ ಅದೇ ಡಿಸೆಂಬರ್‍ನಲ್ಲಿ ಯಶ್ ಮಗು ಜನ್ಮ ಪಡೆಯಲಿದೆ.

ರಾಧಿಕಾ ಡೆಲಿವರಿ ಡೇಟ್ ಇರೋದು ಡಿಸೆಂಬರ್ ನಲ್ಲಿ ಎನ್ನುವುದನ್ನು ಯಶ್ ಈಗಾಗಲೇ ಹೇಳಿದ್ದಾರೆ. ಆದರೆ ಯಾವ ದಿನ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ ದಿನ. ಇದೇ ದಿನದ ಆಸುಪಾಸು ರಾಧಿಕಾ ಡೆಲಿವರಿ ಡೇಟ್ ಫಿಕ್ಸ್ ಆಗಿದೆ.ಡಿಸೆಂಬರ್ ಮೊದಲ ವಾರದಲ್ಲೇ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ. ಅಲ್ಲಿಗೆ ರಾಕಿಂಗ್ ದಂಪತಿಗೆ ಡಬಲ್ ಖುಷಿ. ಡಿಸೆಂಬರ್ 9 ರಂದೇ ಮಗು ಜನಿಸಿದರೆ ದಂಪತಿಗೂ ಅವರನ್ನು ಆರಾಧಿಸುವ ಕೋಟಿ ಅಭಿಮಾನಿಗಳ ಖುಷಿಗೂ ಮಿತಿಯೇ ಇರಲ್ಲ.ಈ ಡಿಸೆಂಬರ್ ತಿಂಗಳು ಪೂರ್ತಿ ರಾಕಿಂಗ್ ಜೋಡಿಯದ್ದೇ ಹವಾ ಇರುತ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top