ಸಮಾಚಾರ

ಜನಾರ್ಧನ ರೆಡ್ಡಿಯ ಡೀಲ್‌ ಬಗ್ಗೆ ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ?

ಆ್ಯಂಬಿಂಡೆಂಟ್​ ಚಿಟ್​ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ರೆಡ್ಡಿ ಹೈದರಾಬಾದ್​ನಲ್ಲಿ ಅಡಗಿರುವ ಶಂಕೆ ಇದ್ದು, ಅಲ್ಲಿಯೂ ಹುಡುಕಾಟ ಆರಂಭಗೊಂಡಿದೆ. ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೇನು ಅಂದಾಜಿಲ್ಲ. ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

“ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಷ್ಟಕ್ಕೂ ಜನಾರ್ದನ ರೆಡ್ಡಿ ನಮ್ಮ ಪಕ್ಷದಲ್ಲಿ ಈಗ ಇಲ್ಲ. ಹಾಗಾಗಿ ನಮಗೂ, ಅವರಿಗೂ ಸಂಬಂಧ ಇಲ್ಲ. ಈ ಬಗ್ಗೆ ತನಿಖೆ ಆಗಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಈ ಪ್ರಕರಣ ಬಗ್ಗೆ ನಾನು ಹೆಚ್ಚಿನ ಮಾಹಿತಿ ಪಡೆದಿಲ್ಲ ಎಂದರು. ವಿರೋಧ ಪಕ್ಷದವರ ಕೈವಾಡವೆಂದೆನ್ನಲು ಕೂಡ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದಾಗ ಪ್ರಕರಣ ಕುರಿತಂತೆ ಗೊತ್ತಾಗಿದೆ. ಕಾನೂನು ಏನು ಹೇಳುತ್ತೋ ಹಾಗೆ ಆಗುತ್ತದೆ” ಎಂದು ತಿಳಿಸಿದರು

ನಾಪತ್ತೆಯಾದರೆ ರೆಡ್ಡಿ?
ಸಿಸಿಬಿ ಪೊಲೀಸರು ವಶಕ್ಕೆ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಜನಾರ್ಧನ ರೆಡ್ಡಿ ಆಪ್ತನ ವಿಚಾರಣೆ ವೇಳೆ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ್ದು, ಹೀಗಾಗಿ ಜನಾರ್ದನ ರೆಡ್ಡಿ ಅವರ ಪಾರಿಜಾತ ನಿವಾಸ ಸೇರಿದಂತೆ ಹಲವು ಕಡೆ ಅವರಿಗಾಗಿ ಹುಡುಕಾಟ ನಡೆಸಿದ್ದಾರೆನ್ನಲಾಗಿದೆ.ಇದರ ಮಾಹಿತಿ ಮೊದಲೇ ಪಡೆದಿದ್ದ ಜನಾರ್ದನ ರೆಡ್ಡಿ, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆನ್ನಲಾಗಿದೆ.

ಏನಿದು ಪ್ರಕರಣ?
ನೋಟ್‌ ಬ್ಯಾನ್‌ ವೇಳೆ ಬಹುಕೋಟಿ ರೂಪಾಯಿ ವಹಿವಾಟು ಮಾಡಿರುವ ಆರೋಪ ಜನಾರ್ದನ ರೆಡ್ಡಿ ಮೇಲಿದೆ. ಆಪ್ತ ಸಹಾಯಕ ಆಲಿಖಾನ್‌ ಮೂಲಕ ಬ್ಯಾನ್ ಆಗಿದ್ದ ನೋಟುಗಳನ್ನ ಬದಲಾವಣೆ ಮಾಡಿರುವ ಆರೋಪವಿದು. ಆಂಬಿಡೆಂಟ್‌ ಗ್ರೂಪ್ ಮೂಲಕ ಅಕ್ರಮ ಹಣ ಬದಲಾವಣೆ ಮಾಡಿಕೊಂಡಿರುವ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿಯ ಮೇಲಿದೆ… ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನ್ಯಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು.

ಅಂಬಿಡೆಂಟ್ ಮಾರ್ಕೆಟಿಂಗ್ ಲಿಮಿಟೆಡ್‍ನಲ್ಲಿ ರದ್ದಾದ 100 ಕೋಟಿ ರೂ. ನೋಟುಗಳನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ 57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿ ರೆಡ್ಡಿ ಡೀಲ್ ಮಾಡಿಕೊಂಡಿದ್ದರು ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 20 ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆಂಬ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸ್ತಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ಟೀಂ, ಜನಾರ್ದನ್​​ ರೆಡ್ಡಿಯನ್ನ ಅರೆಸ್ಟ್​ ಮಾಡಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top