ಮನೋರಂಜನೆ

ಟಾಲಿವುಡ್ ಸ್ಟಾರ್ ನಟನಿಗೆ ಹೀರೋಯಿನ್ ಆಡಲು ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

ಸಿನಿಮಾವೆಂದರೆ ಹಾಗೇ… ಕೆಲವರು ಎಷ್ಟು ವರ್ಷ ಇಲ್ಲಿ ಚಪ್ಪಲಿ ಸವೆಸಿದರು, ಎಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ, ಅವರಿಗೆ ಸಿಗುವ ಮಾನ್ಯತೆ, ಸ್ಟಾರ್ ವ್ಯಾಲ್ಯೂ ಅಷ್ಟಕ್ಕಷ್ಟೆ. ಆದ್ರೆ ಅದೃಷ್ಠವೊ ಏನೋ ಎಂಬಂತೆ, ಕೆಲವರು ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಂತೆ ಸ್ಟಾರ್ ಪಟ್ಟ ಮುಡಿಗೇರಿಸಿಕೊಂಡು ಬಿಡುತ್ತಾರೆ. ಇತ್ತೀಚೆಗೆ ಅಂಥದ್ದೆ, ಸ್ಟಾರ್ ಹಿರೋಯಿನ್ ಪಟ್ಟ ಗಿಟ್ಟಿಸಿಕೊಂಡು ಬೀಗುತ್ತಿರುವ ನಟಿ ಶ್ರದ್ಧಾ ಶ್ರೀನಾಥ್.

 

 

ಯೂ-ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಶ್ರದ್ಧಾ ಶ್ರೀನಾಥ್ ಇಲ್ಲಿಯವರೆಗೆ ನಟಿಸಿದ್ದು ಕೇವಲ ಬೆರಳೆಣಿಕೆ ಸಿನಿಮಾಗಳಾದರೂ, ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ತನ್ನ ಡಿಮ್ಯಾಂಡ್ ಮತ್ತು ಸ್ಟಾರ್ ವ್ಯಾಲ್ಯೂ ಎರಡನ್ನು ಹೆಚ್ಚಿಸಿಕೊಂಡ ಬುದ್ಧಿವಂತ ನಟಿ. ಸದ್ಯಕ್ಕೆ ಕನ್ನಡಕ್ಕಿಂತ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಶ್ರದ್ಧಾ, ತೆಲುಗಿನ ಬಿಗ್ ಸ್ಟಾರ್ ಗಳಲ್ಲಿ ಒಬ್ಬರಾದ ನ್ಯಾಚುರಲ್ ಸ್ಟಾರ್ ನಾಣಿ ಅವರಿಗೆ ನಾಯಕಿಯಾಗುವ ಚಾನ್ಸ್ ಪಡೆದಿದ್ದಾಳೆ.

ನಾನಿ ಮುಖ್ಯ ಭೂಮಿಕೆಯ ಹೊಸ ಚಿತ್ರ ‘ಅರ್ಜುನ್’ ಎಂಬ ಸಿನಿಮಾ​ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್​ ನಾಯಕಿಯಾಗಿ ನಟಿಸಲಿದ್ದಾರೆಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿವೆ. ಇನ್ನು ಈ ಚಿತ್ರ ಕ್ರೀಡಾಧಾರಿತ ಸಿನಿಮಾವಾಗಿರಲಿದ್ದು ಚಿತ್ರದಲ್ಲಿ ನಾಯಕ ನಾನಿ ಕ್ರಿಕೆಟ್​ ಬ್ಯಾಟ್ಸ್​ಮನ್​ ಪಾತ್ರವನ್ನು ನಿರ್ವಹಿಸುತಿದ್ದಾರಂತೆ,. ಸಿತಾರ ಎಂಟರ್ಟೈನ್​ ಮೆಂಟ್​ ನಿರ್ಮಾಣದ ಈ ಚಿತ್ರವನ್ನ ಗೌತಮ್​ ತಿನ್ನನುರಿ ನಿರ್ದೇಶನ ಮಾಡ್ತಿದ್ದು, ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನ ಮಾಡ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top