ಮನೋರಂಜನೆ

ಅಮಿತಾಬ್ ಬಚ್ಚನ್ ಮೇಲೆ ಕೇಳಿ ಬಂತು ಲೈಂಗಿಕ ಕಿರುಕುಳದ ಆರೋಪ- ಬಾಂಬ್ ಸಿಡಿದ ಸಪ್ನಾ ಭವಾನಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ..

ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಆರೋಪ ಮಾಡಿದೇಟಿಗೆ ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.. ಲೈಂಗಿಕ ಕಿರುಕುಳದ ವಿರುದ್ಧ Me Too ಅಭಿಯಾನ ಶುರುವಾಗಿದೆ..

ನಾನಾ ಪಾಟೇಕರ್​, ಸುಭಾಷ್​ ಘೈ, ಅಭಿಜಿತ್​ ಭಟ್ಟಾಚಾರ್ಯ, ಅಲೋಕ್​ ನಾಥ್​, ಚೇತನ್​ ಭಗತ್​, ಸುನಿಲ್​ ಗ್ರೋವರ್​, ಎಂ.ಜೆ ಅಕ್ಬರ್​, ಕೈಲಾಶ್​ ಕೇರ್​​ ಸೇರಿದಂತೆ ದೊಡ್ಡ ದೊಡ್ಡ ಹೆಸರುಗಳ ವಿರುದ್ಧ ಕೇಳಿಬಂದಿರೋ ಮೀಟೂ ಅಭಿಯಾನ ಇದೀಗ ಬಾಲಿವುಡ್​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ಗೂ ಮುಟ್ಟಿದೆ.. ಬಾಲಿವುಡ್ ನಟ ಅಮಿತಾಭಾ ಬಚ್ಚನ್ ಕೂಡ ಇಂತಹದ್ದೇ ಕೆಲಸಗಳಲ್ಲಿ ಭಾಗಿಯಾಗಿದ್ದಾರೆಂದು ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿಯವರು ಗಂಭೀರ ಆರೋಪ ಮಾಡಿದ್ದು, ಇದು ಬಾಲಿವುಡ್ ನಲ್ಲಿ ಹೊಸ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ.

ನಟಿಯರ ಮೀಟೂ ಆಂದೋಲನ ಬೆಂಬಲಿಸಿ ಬಚ್ಚನ್ ಮಾಡಿದ್ದ ಟ್ವೀಟ್ ಒಂದನ್ನು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಪ್ನಾ ‘ಇದೊಂದು ದೊಡ್ಡ ಸುಳ್ಳು. ಅಮಿತಾಬ್ ಅವರ ಅಸಲಿ ಬಣ್ಣ ಶೀಘ್ರ ಹೊರಬರಲಿದೆ. ನಿಮ್ಮ ಸತ್ಯ ಶೀಘ್ರ ಹೊರಬೀಳಲಿದೆ. ಬಚ್ಚನ್ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಸ್ವತಃ ನಾನೇ ಹಲವು ಕಥೆಗಳನ್ನು ಕೇಳಿದ್ದೇನೆ. ಬಹುಶಃ ಹೀಗೆ ನೊಂದವರ ಪೈರಿ ಯಾರಾದರೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದರೆ ಎಲ್ಲವೂ ಬಯಲಾಗಲಿದೆ ಎಂದು ಸಪ್ನಾ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top