ಮನೋರಂಜನೆ

“ನಿನ್ನೆ ಮೊನ್ನೆ ಬಂದೊರೆಲ್ಲಾ ನಂ.1 ಅಂತಾರೋ” ಸಾಲನ್ನ ಕೇಳಿದ ಕೂಡಲೇ ಸುದೀಪ್ ಕೊಟ್ಟಿದ್ದ​​​ ರಿಯಾಕ್ಷನ್​ ಏನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಇನ್ನೇನು ವಾರದೊಪ್ಪತ್ತಿನಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಲನ್ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಸೆಟ್ಟಿರಿದಾಗಿನಿಂದಲೂ ಒಂದಲ್ಲ ಒಂದು ವಿಚಾರವಾಗಿ ಚರ್ಚೆಯಾಗುತ್ತಲೇ ಇತ್ತು.. ಟೀಸರ್, ಪೋಸ್ಟರ್ ಆಡಿಯೋ ಏನೇ ರಿಲೀಸ್ ಆದಾಗಲೂ ಸಿನಿಮಾ ಟಾಕ್ ಆಫ್ ದಿ ಟೌನ್ ಆಗ್ತಿತ್ತು. ಅದರಲ್ಲೂ ‘ಟಿಕ್ ಟಿಕ್’ ಹಾಡು ರಿಲೀಸ್ ಆದ ಮೇಲಂತೂ ಅದರಲ್ಲಿರುವ ಸಾಹಿತ್ಯ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಲ್ಲದೆ ವಿವಾದಕ್ಕೂ ಕಾರಣವಾಗಿತ್ತು.

“ನಿನ್ನೆ ಮೊನ್ನೆ ಬಂದೋರೆಲ್ಲಾ ನಂಬರ್​ 1 ಅಂತಾರೋ, ನಿಂಗ್​ ನಂಬರ್​ಗಳೇ ಲೆಕ್ಕ ಇಲ್ಲಣ್ಣ” ಎಂಬ ಸಾಲುಗಳು ಗಾಂಧಿನಗರದಲ್ಲಿ ವಿವಾದವನ್ನು ಎಬ್ಬಿಸಿತ್ತು. ಬೇರೆ ನಟರಿಗೆ ಟಾಂಗ್ ಕೊಡೋದಕ್ಕಾಗಿಯೇ ನಿರ್ದೇಶಕ ಪ್ರೇಮ್ ಈ ಸಾಲುಗಳನ್ನ ಬಳಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.. ಅಂದಹಾಗೆ ಇದೇ ಸಿನಿಮಾದಲ್ಲಿ ನಟಿಸಿರುವ ಸುದೀಪ್ ಅವರು ಈ ಹಾಡಿನ ಸಾಹಿತ್ಯ ಕೇಳಿ ಏನಂತ ಹೇಳಿದ್ದರಂತೆ ಗೊತ್ತಾ? ಮುಂದೆ ಓದಿ.

ಈ ಸಾಲುಗಳನ್ನ ಕೇಳಿ ಪ್ರೇಮ್ ಅವರಿಗೆ ಫೋನ್ ಮಾಡಿದ್ದ ಕಿಚ್ಚ ಸುದೀಪ್ ” ತುಂಬಾ ಚೆನ್ನಾಗಿ ಬರೆದಿದ್ದೀಯಾ, ಶಿವಣ್ಣನಿಗೆ ಚೆನ್ನಾಗಿ ಸೂಟ್ ಆಗುತ್ತೆ,ಸಕತ್ ಇಷ್ಟ ಆಯ್ತು ಅಂತ ಖುಷಿ ಪಟ್ಟಿದ್ರಂತೆ.” ಹೀಗಂತ ಸ್ವತಃ ಪ್ರೇಮ್ ಅವರೇ ನೆನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ ಚಿತ್ರ ಬಿಡುಗಡೆಯಾಗಲು ಇನ್ನೂ ಒಂದು ವಾರ ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top