ಮನೋರಂಜನೆ

ಶನಿ ಧಾರಾವಾಹಿಯಿಂದ ಸಿಕ್ತು ಬ್ರೇಕಿಂಗ್ ನ್ಯೂಸ್,ಸೂರ್ಯದೇವ ಅಲಿಯಾಸ್ ರಂಜಿತ್ ಕುಮಾರ್ ಧಾರಾವಾಹಿಯಿಂದ ಔಟ್,ಕಾರಣ ಏನ್ ಗೊತ್ತಾ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶನಿ ಧಾರಾವಾಹಿ ನೋಡದವರು ಬಹುಶ ಯಾರು ಇಲ್ಲ ,ಎಲ್ಲ ವಯಸ್ಸಿನ ಅಂದ್ರೆ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನರು ಇಷ್ಟ ಪಟ್ಟು ನೋಡುವ ಧಾರವಾಹಿ ಶನಿ ,ಕಿರುತೆರೆಯ ಜಗತ್ತಿನಲ್ಲಿ ಹೊಸದೊಂದು ಪ್ರಯೋಗ ಈ ಶನಿ ಧಾರವಾಹಿ ,ಈ ಧಾರವಾಹಿಯ ಪ್ರತಿಯೊಂದು ಪಾತ್ರವು ತನ್ನದೇ ಆದ ಪ್ರಾಮುಖ್ಯತೆಯ ಜೊತೆಗೆ ಜನರ ಮನಸಲ್ಲಿ ಕೂತು ಬಿಡುತ್ತವೆ.ಈ ಧಾರಾವಾಹಿಯ ಪ್ರಮುಖ ಪಾತ್ರ ಸೂರ್ಯ ದೇವನ ಪಾತ್ರ ವಹಿಸುತ್ತಿರುವ ರಂಜಿತ್‍ಕುಮಾರ್ ,ಸೂರ್ಯ ದೇವನೇ ಭೂಮಿಗೆ ಬಂದಿದ್ದಾನೆ ಎಂದು ಕೊಳ್ಳುವ ಮಟ್ಟಿಗೆ ತನ್ನ ಪಾತ್ರವನ್ನು ಅಮೋಘವಾಗಿ ನಟಿಸಿದ್ದಾರೆ ರಂಜಿತ್.ರಂಜಿತ್ ಅಸೂರ್ಯ ದೇವನ ಪಾತ್ರಕ್ಕೆ ಜೀವವೇ ತುಂಬಿದ್ದಾರೆ .ಇಂದು ಮನೆಮನೆ ಮಾತಾಗಿರುವ ರಂಜಿತ್ ಈ ಮಟ್ಟಕ್ಕೆ ಬರುವುದಕ್ಕೆ ತುಂಬಾ ಕಷ್ಟ ಪಟ್ಟಿದ್ದಾರೆ ,ಇದ್ದ ಕೆಲಸ ಬಿಟ್ಟು ಸ್ಟಾರ್ ನಟ ನಟಿಯರಿಗೆ ಬೌನ್ಸರ್ ಆಗಿ ಕೂಡ ಕೆಲಸ ಮಾಡಿದ್ದಾರೆ .

 

 

 

ಈಗ ಸುದ್ದಿಯಾಗಿರುವ ವಿಷಯ ಏನು ಅಂದ್ರೆ ಶನಿ ಸೀರಿಯಲ್‍ ನ ಸೂರ್ಯ ದೇವಾ ಅಲಿಯಾಸ್ ರಂಜಿತ್ ಕುಮಾರ್ ಆ ಧಾರಾವಾಹಿಯಿಂದ ಕಿಕ್ ಔಟ್ ಆಗಿದ್ದರಂತೆ, ಏಕಾಏಕಿ ಶನಿ ಧಾರಾವಾಹಿಯಿಂದ ರಂಜಿತ್ ಅವರನ್ನು ಶನಿ ಸೀರಿಯಲ್ ನಿಂದ ಕಿಕ್ ಔಟ್ ಮಾಡಲಾಗಿದೆ .ಶನಿ ಧಾರವಾಹಿಯಿಂದ ರಂಜಿತ್ ಹೊರಬರಲು ಮೂಲ ಕಾರಣ ಸಂಭಾವನೆ ಎಂದು ಹೇಳಲಾಗಿದೆ. ಕಳೆದ ಮೂರು ತಿಂಗಳಿಂದ ಸೂರ್ಯ ದೇವನಿಗೆ ಸಂಭಾವನೆ ಕೊಟ್ಟಿಲ್ಲ. ಒಪ್ಪಂದದ ಪ್ರಕಾರ ರಂಜಿತ್‍ಗೆ ಬರೋಬ್ಬರಿ 3,60,000 ರೂ. ಸಂಭಾವನೆ ಬರಬೇಕಾಗಿದೆ.ರಂಜಿತ್ ಜುಲೈ 28ಕ್ಕೆ ಶೂಟಿಂಗ್ ಮುಗಿಸಿಕೊಟ್ಟು ರಜೆ ಇರುವ ಕಾರಣಕ್ಕೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು.

ಇದೇ ಸಂದರ್ಭದಲ್ಲಿ ಆ ಅವಕಾಶ ಉಪಯೋಗಿಸಕೊಂಡ ಧಾರಾವಾಹಿಯವರು ಸೂರ್ಯದೇವನ ಪಾತ್ರಕ್ಕೆ ಬೇರೊಬ್ಬರನ್ನು ತಂದು ಕೂರಿಸಿದ್ದಾರೆ. ಎರಡ್ಮೂರು ತಿಂಗಳು ಕಾಲ ಟೆಲಿಕಾಸ್ಟ್ ಆಗುವಷ್ಟು ಎಪಿಸೋಡ್ ಅನ್ನು ಜುಲೈನಲ್ಲೇ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ರಂಜಿತ್ ನಿರ್ವಹಿಸಿರುವ ಸೂರ್ಯದೇವನ ಪಾತ್ರವೇ ಧಾರಾವಾಹಿಯಲ್ಲಿ ಪ್ಲೇ ಆಗುತ್ತಿದೆ.ಮೂಲಗಳ ಪ್ರಕಾರ ಸೂರ್ಯ ದೇವನ ಪಾತ್ರವನ್ನು ಮಧುಸಾಗರ್ ನಿರ್ವಹಿಸಲಿದ್ದಾರೆ ,ಇನ್ನು ಸ್ವಲ್ಪ ದಿನಗಳಲ್ಲಿ ಇವರ ಪಾತ್ರ ಇರುವ ದೃಶ್ಯ ಪ್ರಸಾರವಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top