ಮನೋರಂಜನೆ

ಮತ್ತೊಂದು ವಿಭಿನ್ನ ಚಿತ್ರದ ಮೂಲಕ ಬಂದ ನಿತ್ಯಾ ಮೆನನ್.

ಮಲೆಯಾಳಂ ಮೂಲವಾದರೂ ಕನ್ನಡದ ಹುಡುಗಿ ನಿತ್ಯಾ ಮೆನನ್. ಆಕೆ ಕನ್ನಡದಲ್ಲಿ ನಟಿಸಿರೋದು ಕೆಲವೇ ಕೆಲ ಚಿತ್ರಗಳಲ್ಲಾದರೂ ಆ ಪಾತ್ರಗಳನ್ನು ಕನ್ನಡದ ಪ್ರೇಕ್ಷಕರು ಮರೆಯುವಂತಿಲ್ಲ. ಸವಾಲಿನ ಪಾತ್ರಗಳನ್ನೇ ಸದಾ ಆರಿಸಿಕೊಳ್ಳುವ ನಿತ್ಯಾ ಪ್ರತಿಭಾವಂತ ನಟಿ. ಯಾವ ಥರದ ಪಾತ್ರಗಳಿಗಾದರೂ ಹೊಂದಿಕೊಂಡು ನಟಿಸೋ ತಾಕತ್ತಿರೋ ಈಕೆ ಭಾರತೀಯ ಚಿತ್ರರಂಗಕ್ಕೇ ಹೊಸತಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ!

 

 

ಹಾಗಾದರೆ ನಿತ್ಯಾ ನಟಿಸಲಿರೋ ಅಂಥಾ ಡಿಫರೆಂಟಾದ ಪಾತ್ರ ಯಾವುದು? ಅದು ಕನ್ನಡ ಚಿತ್ರವಾ ಎಂಬ ಕುತೂಹಲ ಸಹಜವೇ. ಈ ಹಿನ್ನೆಲೆಯಲ್ಲಿ ಹುಡುಕಾಡಿದರೆ ಎಂಥವರೂ ಹುಬ್ಬೆರಗಾಗುವಂತಹ ವಿಚಾರಗಳು. ಕೋಟಿಗೊಬ್ಬ -2’ ನಂತರ ನಿತ್ಯಾ ಕನ್ನಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೀಗ ‘ಪ್ರಾಣ’ ಎಂಬ ವಿಭಿನ್ನ ಚಿತ್ರದೊಂದಿಗೆ ಮತ್ತೆ ಕನ್ನಡದ ಹುಡುಗರ ನಿದ್ದೆ ಕದಿಯೋಕೆ ನಿತ್ಯ ರೆಡಿಯಾಗಿದ್ದಾಳೆ.. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಪ್ರಾಣ’ ಚಿತ್ರದ ವಿಚಿತ್ರ ಫಸ್‌ಟ್ ಲುಕ್ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನೋಡಿದವರಿಗೆ ಕುತೂಹಲ ಕೆರಳಿಸಿದೆ…

ಈ ಬಹುಭಾಷಾ ಚಿತ್ರಕ್ಕೆ ಕೆವಿ ಪ್ರಕಾಶ್ ಎಂಬುವವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ನಿತ್ಯಾ ಲೇಖಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ವಿಶೇಷವೆಂದರೆ ಸರಿ ಸುಮಾರು ಎರಡು ಗಂಟೆ ಅವಧಿಯಿರುವ ಈ ಸಿನಿಮಾದಲ್ಲಿ ಕೇವಲ ನಿತ್ಯಾ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ನಿತ್ಯಾ ಪಾಲಿಗೆ ಇದು ಮೊದಲ ಏಕವ್ಯಕ್ತಿ ಚಿತ್ರ ಎನ್ನುವುದು ಮತ್ತೊಂದು ವಿಶೇಷ. ಚಿತ್ರವನ್ನು ಸಿಂಕ್‌ ಸೌಂಡ್‌ನೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಆಸ್ಕರ್‌ ಪ್ರಶಸ್ತಿ ವಿಜೇತ ರಸುಲ್‌ ಪೂಕುಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.. ಸದ್ಯ ಫರ್ಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಾಣದ ಸದ್ಯದಲ್ಲಿಯೇ ಟೀಸರ್ ಅನ್ನು ಕೂಡ ಲಾಂಚ್ ಮಾಡಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top