ದೇವರು

 ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಹೆಣ್ಣುಮಕ್ಕಳು ಈ ವಿಷಯವನ್ನು ಖಡ್ಡಾಯವಾಗಿ ಪಾಲಿಸಿದ್ರೆ ಒಳ್ಳೇದು

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಸ್ತ್ರೀಯರು ಕೂದಲನ್ನು ಬಿಚ್ಚಿಕೊಂಡು ಓಡಾಡಿದರೆ ಅದು ಆಶುಭದ ಸೂಚಕ ಹಾಗೂ ಶೋಕದ ಸಂಕೇತವಾಗಿದೆ.ಮುಖದ ಸೌಂದರ್ಯದ ಜೊತೆಗೆ ಕೂದಲಿನ ಸೌಂದರ್ಯಕ್ಕೆ ಮಹಿಳೆಯರು ಹೆಚ್ಚಿನ ಒತ್ತು ನೀಡುತ್ತಾರೆ. ವಿಶೇಷ ಸಮಾರಂಭಗಳಲ್ಲಿ ಹಾಗೂ ಹಬ್ಬಗಳಲ್ಲಿ ಮಹಿಳೆಯರು ಹೇರ್ ಸ್ಟೈಲ್ ಮಾಡಬೇಕೆಂದು ಮೊದಲೇ ಚಿಂತನೆ ನಡೆಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ  ಕೂದಲುಗಳನ್ನು ಬಿಚ್ಚಿಕೊಂಡು ಓಡಾಡುವುದು ಒಂದು ರೀತಿಯ ಫ್ಯಾಶನ್ ಆಗಿಬಿಟ್ಟಿದೆ. ಹಬ್ಬ ಹರಿ ದಿನಗಳಲ್ಲಿ ಮಹಿಳೆಯರು ಕೂದಲನ್ನು ಕಟ್ಟುವುದಿಲ್ಲ ಅಥವಾ ಜಡೆಯನ್ನು ಸಹ ಹಾಕುವುದಿಲ್ಲ.  ಆದರೆ ಈ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ ? ಎಂಬುದು ಅನೇಕ ಮಹಿಳೆಯರಿಗೆ ತಿಳಿದಿಲ್ಲ

 

 

 

ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಮಹಿಳೆಯರು ಕೂದಲನ್ನು ಕಟ್ಟದೇ ಬಿಚ್ಚಿಕೊಳ್ಳುವುದು ಶುಭವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಮಹಿಳೆಯರು ಯಾವಾಗಲೂ ಕೂದಲನ್ನು ಕಟ್ಟಿ ಕೊಳ್ಳಬೇಕು. ಬಿಚ್ಚಿಕೊಂಡಿರುವ ಕೂದಲು ಶೋಕದ ಸಂಕೇತವೆಂದು ಶಾಸ್ತ್ರ ಹೇಳುತ್ತದೆ .ಶುಭ ಕೆಲಸಗಳನ್ನು ಮಾಡುವ ವೇಳೆ ಮಹಿಳೆಯರು ಕೂದಲನ್ನು ಕಟ್ಟಿಕೊಳ್ಳಬೇಕು. ರಾಮಾಯಣದಲ್ಲಿ ಕೂಡ ಶ್ರೀರಾಮನ ಮದುವೆಯ ಸಂದರ್ಭದಲ್ಲಿ ಸೀತಾ ದೇವಿಗೆ ತನ್ನ ತಾಯಿಯೂ ಕೂಡ ಇದೇ ಸಲಹೆಯನ್ನು ನೀಡಿದ್ದಳು. ಸದಾ ಕೂದಲನ್ನು ಕಟ್ಟಿಕೊಂಡಿರು, ಕಟ್ಟಿದ ಕೂದಲು ಸಂಬಂಧವನ್ನು ಗಟ್ಟಿ ಮಾಡುತ್ತದೆ ಎಂದು ಹೇಳಿದ್ದಳು .

ಚೈತ್ರ ನವರಾತ್ರಿ ಆರಂಭವಾಗಿದೆ, ಭಕ್ತರು ದೇವಿಯ ಆರಾಧನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ಮಹಿಳೆಯರು ಬಿಚ್ಚಿರುವ ಕೂದಲಿನಲ್ಲಿ ಮಲಗಿದರೆ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ ಎಂದು ಹೇಳಲಾಗಿದೆ.ಬಿಚ್ಚಿರುವ ಕೂದಲಿನಲ್ಲಿ ಯಾವುದೇ ಶುಭ ಕೆಲಸ ಮಾಡಿದರೂ ಸಹ ಅದು ಬೇಗನೆ ಫಲವನ್ನು ನೀಡುವುದಿಲ್ಲ. ಹಾಗೇ ಮನೆಯಲ್ಲಿ ಗಲಾಟೆ ಮತ್ತು ಜಗಳಗಳಿಗೆ ಇದು ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳು ಮತ್ತು ಮದುವೆಯಾಗಿರುವ ಸ್ತ್ರೀಯರು ಈ ವಿಷಯವನ್ನು ತಿಳಿದ ಮೇಲಾದರೂ ಈ ಪದ್ದತಿಯನ್ನು ಪಾಲಿಸಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top