ಮನೋರಂಜನೆ

“ನಾನು ರಾಜಕಾರಣಕ್ಕೆ ಬಂದಿರೋದು, ಸಮಾಜ ಸೇವೆ ಮಾಡೋದಕ್ಕೆ ಅಲ್ಲ” ಅನಂತಕುಮಾರ್ ಹೆಗ್ದೆ ಹೊಸ ಹೇಳಿಕೆ.

ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಗೆ ಗ್ರಾಸವಾಗುವವರು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ. ಯಾವುದೇ ವಿಚಾರವಾಗಲೇ ನಿರ್ಭಿಡತೆಯಿಂದ ನೇರಾನೇರಾವಾಗಿ ಹೇಳಿಕೆ ಕೊಡುತ್ತಾ ಒಂದು ಪಂಥದವರ ತೀವ್ರ ವಿರೋಧವನ್ನೂ ಕಟ್ಟಿಕೊಂಡಿರುವ ಅನಂತಕುಮಾರ್ ಹೆಗ್ಡೆಯವರು ಆ ಮೂಲಕವೇ ಸುದ್ದಿಯಾಗಿದ್ದು ಹೆಚ್ಚು.. ಇಂಥ ಹೆಗಡೆಯವರು ಇದೀಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

 

ವಿಡಿಯೋ ನೋಡಿ👇👇👇

 

ಗುರುವಾರ ನಡೆದ ಉತ್ತರಕನ್ನಡ ಜಿಲ್ಲೆ ಶಿರಸಿಯ ಬಿಜೆಪಿ‌ ಕಾರ್ಯಕಾರಿಣಿ ಸಭೆಯಲ್ಲಿ ಮಾತಮಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು ರಾಜಕಾರಣ ಮಾಡಲಿಕ್ಕೆ ಹೊರತು ರಾಜಕಾರಣ ಬಿಟ್ಟು ಬೇರೆನು ಮಾಡಬೇಕು. ರಾಜಕಾರಣ ಮಾಡುವುದಕ್ಕಾಗಿ ನಾವು ತಾಲೂಕು ಅಧ್ಯಕ್ಷ ಆಗಿದ್ದು, ತಾಲೂಕು ಪ್ರಮುಖ್‌ ಆಗಿದ್ದು, ಜಿಲ್ಲಾ ಪ್ರಮುಖ್‌ ಆಗಿದ್ದು. ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ” ಎಂದಿದ್ದಾರೆ.

ಜನ ಸೇವೆಯೇ ಜನಾರ್ಧನ ಸೇವೆ ಎಂಬುದೇ ರಾಜಕೀಯದ ಮೂಲ ಉದ್ದೇಶವಾಗಿರಬೇಕು ಎಂಬುದು ಬಹುತೇಕರ ವಾದ.. ಆದರೆ “ನಾನು ರಾಜಕಾರಣಕ್ಕೆ ಬಂದಿರೋದು, ಸಮಾಜ ಸೇವೆ ಮಾಡೋದಕ್ಕೆ ಅಲ್ಲ” ಎಂದು ಹೇಳಿರುವ ಹೆಗಡೆ ನಂತರ “ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಬಿಟ್ಟದ್ದು” ಅಂತ ನೇರ ನೇರವಾಗಿ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top