ಅರೋಗ್ಯ

ಸಿಹಿ ಪಾನೀಯಗಳು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ.

ಸಿಹಿ ಪಾನೀಯಗಳು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ.

ಗರ್ಭಿಣಿ ಅಥವಾ ಬಾಣಂತಿಯರು ಸಕ್ಕರೆ ಅಂಶ ಅಂದರೆ ಫ್ರಕ್ಟೋಸ್ ಹೊಂದಿರುವ ಸಿಹಿಯಾದ ಪಾನೀಯ ಸೇವಿಸುವುದರಿಂದ ಮಕ್ಕಳಿಗೆ ಮಧುಮೇಹ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಅದಕ್ಕಾಗಿ ಗರ್ಭಿಣಿಯರು ಸಿಹಿ ಪಾನೀಯವನ್ನು ಸೇವಿಸುವುದು ಅಷ್ಟು ಒಳ್ಳೆಯದಲ್ಲ.ಇದನ್ನು ನೂತನ ಹೊಸ ಅಧ್ಯಯನವೊಂದು ತಿಳಿಸಿದೆ.

 

 

 

ಸುಕ್ರೋಸ್, ಅಧಿಕ ಜಾಸ್ತಿ ಪ್ರಮಾಣದಲ್ಲಿ ಪ್ರಕ್ಟೋಸ್ ಜೋಳದ ಟಾನಿಕ್ (corn syrup) ಮತ್ತು ಸಕ್ಕರೆ ಅಂಶ ಹೊಂದಿರುವ ಸಿಹಿ ಪಾನೀಯಗಳ ಸೇವನೆಯಿಂದ ತಾಯಿಯಿಂದ ಮಕ್ಕಳಿಗೆ ಖಾಯಿಲೆ ಬರಬಹುದು ಎಂದು ನುರಿತ ವೈದ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಗರ್ಭಿಣಿಯಾಗಿರುವ ಸಮಯದಲ್ಲಿ ಮತ್ತು ಬಾಣಂತನದಲ್ಲಿದ್ದು, ಮಗುವಿಗೆ ಎದೆ ಹಾಲು ಉಣಿಸುವ ಸಂದರ್ಭದಲ್ಲಿ ತಾಯಿಯು ಸಕ್ಕರೆ ಅಂಶ ಹೆಚ್ಚಾಗಿರುವ ಪಾನೀಯಗಳ ಸೇವನೆ ಕಡಿಮೆ ಮಾಡುವುದು ಒಳ್ಳೆಯದು ಇಲ್ಲವೇ ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಇಲ್ಲವಾದರೆ ಇದು ಮಕ್ಕಳಲ್ಲಿ ಮುಂದೆ ಬೊಜ್ಜಿನ ಸಮಸ್ಯೆ ಮತ್ತು ಮಧುಮೇಹ ಬರುವ ಸಂಭವ ಹೆಚ್ಚು.ಮಧುಮೇಹದಲ್ಲಿ ಎರಡು ವಿಧಗಳಿವೆ ಮಧುಮೇಹ-1 ಮತ್ತು ಮಧುಮೇಹ-2.ಇಲ್ಲಿ ಮಕ್ಕಳಿಗೆ ಮಧುಮೇಹ-2 ಬರುತ್ತದೆ.ನೀವು ಅಧಿಕ ಸಕ್ಕರೆ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸಿದರೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ.ನೀವು ಅರ್ಧ  ಲೀಟರನಷ್ಟು ಸಿಹಿಯಾಗಿರುವ ಕೋಕ್ ಕೋಲಾ ಮತ್ತು ಬೇರೆ ತರಹದ ಸಕ್ಕರೆ ಅಂಶವಿರುವ ಜ್ಯೂಸಗಳನ್ನು ಕುಡಿದಾಗ ನಿಮ್ಮ ದೇಹಕ್ಕೆ 60% ನಷ್ಟು ಸಕ್ಕರೆ ಅಂಶ ಸೇರುತ್ತದೆ.ಒಬ್ಬ ಗರ್ಭಿಣಿ ಸ್ತ್ರಿಗೆ 50 ಗ್ರಾಂ ಸಕ್ಕರೆ ಸಾಕು ಇದ್ದಕ್ಕಿಂತ ಹೆಚ್ಚಾದರೆ ಅಪಾಯ ಖಂಡಿತ.

 

 

 

 ಗರ್ಭಿಣಿ ಮಹಿಳೆಯರು ಯಾವ ರೀತಿಯ ಪಾನೀಯಗಳನ್ನು ಕುಡಿಯಬಾರದು ಎಂದು ತಿಳಿಯೋಣ ಬನ್ನಿ.ಶೂನ್ಯ ಪೋಷಕಾಂಶಗಳು ಮತ್ತು ಅನಾರೋಗ್ಯಕರ ಕ್ಯಾಲೋರಿಗಳನ್ನು ಹೊಂದಿರುವ ಪಾನೀಯಗಳನ್ನು ಸೇವಿಸಬಾರದು.ಗಾಳಿ ತುಂಬಿದ ಪಾನೀಯಗಳು ಎದೆಯುರಿಯನ್ನು ಉಂಟುಮಾಡುತ್ತವೆ.ಪೆಪ್ಸಿ, ಕೋಕ್ , ಕೆಫಿನ್ ಇರುವ ಪದಾರ್ಥಗಳು ಅಥವಾ ಪಾನೀಯಗಳು.300 ಗ್ರಾಂ ನಷ್ಟು ಕೆಫಿನ್ ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತವನ್ನು ಉಂಟು ಮಾಡುತ್ತದೆ.ಆದ್ದರಿಂದ ಮಗು ಬೇಕು ಎಂದು ಬಯಸುವ ಮಹಿಳೆಯರು ಸ್ವಲ್ಪ ತಿಂಗಳುಗಳ ಮಟ್ಟಿಗಾದರೂ ಕೆಫಿನ್ ಇರುವ ಪದಾರ್ಥಗಳಿಂದ ದೂರ ಉಳಿಯುವುದೇ ಒಳ್ಳೆಯದು.ಕೃತಕ ಬಣ್ಣಗಳು ಮತ್ತು ಕೃತಕ ಸಿಹಿ ಕಾರಕಗಳನ್ನು ಹೊಂದಿರುವ ಪಾನೀಯಗಳನ್ನು ಕುಡಿಯಬಾರದು.ಇವು ಮಗುವಿನ ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಗರ್ಭಿಣಿಯರು ಇವುಗಳ ಸೇವನೆ ಮಾಡದೇ ಇರುವುದು ಉತ್ತಮ. ಇದನ್ನು ಅಧ್ಯಯನ ಮತ್ತು ಸಂಶೋಧನೆಯಿಂದ ನುರಿತ ವೈದ್ಯರು, ತಜ್ಞರುಗಳಿಂದ ದೃಡೀಕರಿಸಲ್ಪಟ್ಟಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top