ಅರೋಗ್ಯ

ಒಂದು ಸಣ್ಣ ಲವಂಗ ಎಷ್ಟೆಲ್ಲಾ ಆರೋಗ್ಯಕಾರಿ ಕೆಲಸಗಳನ್ನ ಮಾಡುತ್ತೆ ಗೊತ್ತಾ.

ಲವಂಗದಲ್ಲಿರುವ  ಔಷದೀಯ ಗುಣಗಳು

 

 

 

ಲವಂಗದಲ್ಲಿರುವ ಔಷದೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು.ನಾವು ದಿನನಿತ್ಯ ಅಡುಗೆಗೆ ಲವಂಗವನ್ನು ಯಾವುದಾದರೊಂದು ತಿಂಡಿ ಮಾಡುವಾಗ ಪುಲಾವ,ಕೇಸರಿ ಬಾತ್, ಮಸಾಲೆಯುಕ್ತ ಸಾರು ಮಾಡುವಾಗ ಕೂಡ ಲವಂಗವನ್ನು ಬಕಸುತ್ತೇವೆ ಅಲ್ಲವೇ.ಇದು ಗಂಟಲಿಗೆ ಹಿತ,ಬಾಯಿಗೆ ರುಚಿ,ಮತ್ತು ಹಾಗೇ ಸ್ವಲ್ಪ ಖಾರ ಕೂಡ ಹೌದು. ಲವಂಗ ಅಷ್ಟೇ ಅಲ್ಲ ಅದರ ಎಲೆಯಲ್ಲೂ ಕೂಡ  ಅನೇಕ ಔಷಧೀಯ ಗುಣಗಳಿವೆ ಇದನ್ನು ಆಯುರ್ವೇದದಲ್ಲಿ ಈಗಲೂ ಸಹ ಬಳಸುತ್ತಾರೆ.ಹಲ್ಲು ನೋವು,ಗಂಟಲು ನೋವು ಗಳಿಗೆ ನಾವು ಸಹಜವಾಗಿ ಬಳಸುತ್ತೇವೆ ಇದನ್ನು ಹೊರತು ಪಡಿಸಿ ಇನ್ನು ಏನೆನೆಲ್ಲ ಉಪಯೋಗಗಳಿವೆ ಎಂದು ತಿಳಿಯೋಣ  ಬನ್ನಿಲವಂಗದ ಎಲೆಯ ಪುಡಿಯನ್ನು ನೋವಿರುವ ಹಲ್ಲಿನ ಮೇಲೆ ಇಟ್ಟರೆ ನೋವು ಕಡಿಮೆಯಾಗುತ್ತದೆ.

ಲವಂಗದ ಪುಡಿಯನ್ನು ಜೇನು ತುಪ್ಪದಲ್ಲಿ ಕಲೆಸಿ ತಿಂದರೆ ವಾಂತಿ ನಿಲ್ಲುತ್ತದೆ.ಲವಂಗವನ್ನು ಚೆನ್ನಾಗಿ ಹುರಿದು ಒಂದು ತೆಳ್ಳನೆಯ ಬಟ್ಟೆಯಲ್ಲಿ ಸುತ್ತಿ ನೋವಿರುವ ಜಾಗಕ್ಕೆ ಶಾಖವನ್ನು ಕೊಟ್ಟರೆ ನೋವು ಮಾಯವಾಗುತ್ತದೆ.ಎರಡು ಅಥವಾ ಮೂರು ಹನಿ ಲವಂಗದ ಎಣ್ಣೆಯ ಜೊತೆ ಒಂದು ಚಮಚ ಉಪ್ಪು ಮತ್ತು ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಣೆಯ ಮೇಲೆ ತ್ತಿಕ್ಕಿದರೆ ತಲೆನೋವು ಗುಣವಾಗುತ್ತದೆ.ಒಂದು ಚಮಚ ಲವಂಗದ ಎಣ್ಣೆಯನ್ನು ಹತ್ತು ಚಮಚ ಕೊಬ್ಬರಿ ಎಣ್ಣೆ ಜೊತೆ ಸೇರಿಸಿ ಹಟ್ಟಿಯಲ್ಲಿ ಅದ್ದಿ ಮುಖದಲ್ಲಿರುವ ಮೊಡವೆಗಳಿಗೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ.ನಿವು ಉಸಿರಾಡುವಾಗ ನಿಮಗೆ ದುರ್ಗಂಧ ದಂತಹ ವಾಸನೆ ಬಂದಲ್ಲಿ ಲವಂಗದ ಕಷಾಯವನ್ನು ತಯಾರಿಸಿ ಅದರಿಂದ ಬಾಯಿಯನ್ನು ಮುಕ್ಕಳಿಸಿ ಆಗ ಬಾಯಿಯ ದುರ್ವಾಸನೆಯಿಂದ ಮುಕ್ತರಾಗಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top