ಭವಿಷ್ಯ

ಸೆಪ್ಟೆಂಬರ್ 17 ನೇ ತಾರೀಖಿನಂದು ಸೂರ್ಯನು ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದು,ಇದರಿಂದ 12 ರಾಶಿಯವರ ಮೇಲೆ ಆಗುವ ಶುಭ ಹಾಗೂ ಅಶುಭ ಫಲಗಳು ಏನೇನು ಅಂತ ತಿಳ್ಕೊಳ್ಳಿ

ಸೂರ್ಯನ ರಾಶಿ ಬದಲಾವಣೆಯಿಂದ ಯಾವ ಯಾವ ರಾಶಿಯ ಮೇಲೆ ಯಾವೆ ರೀತಿಯ ಪ್ರಭಾವ ಬೀರಲಿದೆ.
ಕನ್ಯಾ ರಾಶಿಗೆ ಸೆಪ್ಟೆಂಬರ್ 17 ನೇ ತಾರೀಖಿನಂದು ಸೂರ್ಯನು ಪ್ರವೇಶ ಮಾಡಿದ್ದಾನೆ.ಇಷ್ಟು ದಿನ ಸೂರ್ಯನು ಸಿಂಹ ರಾಶಿಯಲ್ಲಿದ್ದು ಈಗ ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಯಾವ ಯಾವ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ.

 

 

 

ಮೇಷ ರಾಶಿ:ಮೇಷ ರಾಶಿಯವರಿಗೆ ಅಪ ನಿಂದನೆಗಳು, ಅವ್ಯವಸ್ಥೆಗಳು, ನಂಬಿಕೆ ದ್ರೋಹಕ್ಕೆ ಒಳಗಾಗುವ ಸಾಧ್ಯತೆ ಇದೆ,ಅನಾರೋಗ್ಯ ಪೀಡಿತರಾಗ ಬೇಕಾಗುತ್ತದೆ,ಆದಷ್ಟು ಎಚ್ಚರಿಕೆಯಿಂದಿರಿ.
ವೃಷಭ ರಾಶಿ:ವೃಷಭ ರಾಶಿಯವರಿಗೆ ಮಾನಸಿಕವಾಗಿ ವೇದನೆ, ಮನಸ್ಸಿನ ಮೇಲೆ ದುಷ್ಟ ಪರಿಣಾಮಗಳು ಬೀರುತ್ತವೆ, ಮನಸ್ಸನ್ನು ಕೆಡಿಸಿಕೊಳ್ಳುತ್ತೀರ, ದಾಂಪತ್ಯದಲ್ಲಿ ಕಲಹಗಳು ಉಂಟಾಗುತ್ತವೆ, ಆದ್ದರಿಂದ ಎಚ್ಚರಿಕೆ ವಹಿಸಿ.
ಮಿಥುನ ರಾಶಿ:ಎಲ್ಲಾ ರೀತಿಯ ಲಾಭಗಳು ಪ್ರಾಪ್ತಿಯಾಗುತ್ತವೆ,ಅಸ್ಥಿಯಿಂದ ಲಾಭ, ಭೂ ಲಾಭ, ಉದ್ಯೋಗ,ವಾಹನದಿಂದಲೂ ಲಾಭ ಪ್ರಾಪ್ತಿಯಾಗುತ್ತವೆ.
ಕಟಕ ರಾಶಿ:ಕಟಕ ರಾಶಿಯವರಿಗೆ ದುಷ್ಟಬುದ್ಧಿ ಹೆಚ್ಚಾಗುತ್ತದೆ, ಇದ್ದಕ್ಕಿದ್ದಂತೆ ದುರಭ್ಯಾಸಗಳನ್ನು ಕಲಿತುಕೊಳ್ಳುತ್ತಾರೆ, ಅದಕ್ಕೆಂದೇ ಹಣ ವ್ಯಯವನ್ನು ಮಾಡುತ್ತಾರೆ, ಕೆಟ್ಟ ಕೆಟ್ಟ ಆಲೋಚನೆಗಳು ಮೂಡುತ್ತವೆ ,ಕೆಟ್ಟ ಕೆಲಸಗಳನ್ನು ಮಾಡುತ್ತಾರೆ, ಅಪರಾಧಗಳನ್ನು ಮಾಡುತ್ತಾರೆ, ಸ್ವಲ್ಪ ಜಾಗರೂಕತೆಯನ್ನು ಕಟಕ ರಾಶಿಯವರು ವಹಿಸಬೇಕಾಗುತ್ತದೆ.

 

ಸಿಂಹ ರಾಶಿ:ಧನ ಮತ್ತು ಕುಟುಂಭ ಭಾವದ ಮೇಲೆ ಹೆಚ್ಚಾಗಿ ಪರಿಣಾಮ ಬೀರಲಿದೆ,ಧನ ಪ್ರಾಪ್ತಿಯಾಗುತ್ತದೆ, ಕುಟುಂಬದವರ ಸಹಯೋಗ ದೊರೆಯಲಿದೆ,ಕೆಲಸ ಕಾರ್ಯಗಳಲ್ಲಿ ಸಹಯೋಗ ದೊರೆಯಲಿದೆ,ಅದೃಷ್ಟವು ನಿಮ್ಮ ಜೊತೆಗೆ ಇರಲಿದೆ,ಮನೆಯಲ್ಲಿ ಸುಖ ಶಾಂತಿ ನೆಲೆಸುವಂತೆ ನೋಡಿಕೊಳ್ಳಿ.
ಕನ್ಯಾ ರಾಶಿ:ಅಷ್ಟಾಗಿ ಬುಧನ ಪ್ರಭಾವಗಳು ಚೆನ್ನಾಗಿಲ್ಲ,ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತವೆ,ಉದ್ಯೋಗದಲ್ಲಿ ಕಿರಿ ಕಿರಿ,ಕೊಟ್ಟಿರುವ ಹಣ ನಿಮ್ಮ ಬಳಿ ಮರಳಿ ಬರುವುದಿಲ್ಲ, ಉದ್ಯೋಗದಲ್ಲಿ ನಷ್ಟ,ಇಕ್ಕಟ್ಟಿನ ಪರಿಸ್ಥಿತಿ ಎದುರಾಗಲಿದೆ,ಎಚ್ಚರವಾಗಿರಿ.
ತುಲಾ ರಾಶಿ:ತುಲಾ ರಾಶಿಯ ಮೇಲೂ ಕೂಡ ಮಾನಸಿಕವಾಗಿ ಮನಸ್ಸಿನ ಮೇಲೆ ವೇದನೆ ಮತ್ತು ದುಷ್ಟ ಪರಿಣಾಮಗಳು ಬೀರುತ್ತವೆ, ಮನಸ್ಸನ್ನು ಕೆಡಿಸಿಕೊಳ್ಳುವ ಸಾಧ್ಯತೆಗಳು ಇವೆ, ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಇರಿ.
ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರಿಗೆ ಧನಾಗಮನವಾಗಲಿದೆ.ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಪ್ರಾಪ್ತಿ,ವೈವಾಹಿಕ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ,ಗಲಾಟೆಗಳು ಜಗಳಗಳು ಸಂಭವಿಸುತ್ತವೆ.

 

ಧನಸ್ಸು ರಾಶಿ:ಧನಸ್ಸು ರಾಶಿಯವರಿಗೆ ಎಲ್ಲವೂ ಕೂಡ ಇರುತ್ತದೆ, ಆದರೆ ಅದನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲ, ಅಂತಹ ಒಂದು ಪರಿಸ್ಥಿತಿಯನ್ನು ಬುಧಗ್ರಹ ತಂದೊಡ್ಡುತ್ತದೆ, ಬುದ್ಧಿಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ.
ಮಕರ ರಾಶಿ:ಮಕರ ರಾಶಿಯವರಿಗೂ ಕೂಡ ಧನಾಗಮನವಾಗಲಿದೆ.ಉಷ್ಣಾಂಶ ಹೆಚ್ಚಾಗಿ,ಕಾಲಿನ ಭಾದೆ,ಬೆನ್ನು ನೋವು ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ,ಆರೋಗ್ಯದ ಕಡೆ ಗಮನ ಕೊಡಿ.ವಿದ್ಯಾಭ್ಯಾಸ ಚೆನ್ನಾಗಿದೆ.
ಕುಂಭ ರಾಶಿ:ಕುಂಭ ರಾಶಿಗೂ ಸಾಧಾರಣ ಫಲ,ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ,ಹಠ ಸ್ವಭಾವ ಜಾಸ್ತಿ, ಧನಾಗಮನವಾಗಲಿದೆ.
ಮೀನ ರಾಶಿ:ಮೀನ ರಾಶಿಯವರಿಗೆ ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳನ್ನು ಅನುಭವಿಸಬೇಕಾಗುತ್ತದೆ.

 

ಪರಿಹಾರ:ಬುಧವಾರ ಮುದ್ಗಳ ದಾನ್ಯ ಅಥವಾ ಹೆಸರು ಕಾಳು ಅಥವಾ ಹೆಸರು ಬೇಳೆಯನ್ನು ಉತ್ತರಾಭಿಮುಖವಾಗಿರುವ ಶ್ರೀಮನ್ನಾರಾಯಣನ ದೇವಾಲಯಕ್ಕೆ ಅರ್ಪಿಸಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ, ಬುಧ ಗ್ರಹನಿಗೆ ಪೀತವರ್ಣ ಎಂದರೆ ಹಸಿರು ಬಣ್ಣದ ಬಟ್ಟೆಯನ್ನು ದಾನವಾಗಿ ನೀಡಿ, ಜೊತೆಗೆ ಸಂಕಲ್ಪವನ್ನು ಮಾಡಿ “ಬುಧ ಗ್ರಹ ದೋಷ ನಿವಾರಣಾರ್ಥಂ” ಎಂದು ಸಂಕಲ್ಪ ಮಾಡಿ ವ್ಯವಸ್ಥಿತವಾಗಿ ಕೃಷ್ಣಾರ್ಪಣವನ್ನು ಮಾಡಿದಾಗ ಅನುಕೂಲಗಳು ಖಂಡಿತವಾಗಿಯೂ ಪ್ರಾಪ್ತಿಯಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top