ಮನೋರಂಜನೆ

ರಚಿತಾ ರಾಮ್ ಕೇವಲ 25ದಿನಗಳಲ್ಲೇ ಬರೋಬ್ಬರಿ 7ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ?

ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಗುಳಿಕೆನ್ನೆ ಚಲುವೆ ತೂಕ ಇಳಿಸಿಕೊಂಡಿದ್ದಾರೆ.. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಬಳುಕೋ ಬಳ್ಳಿಯಂತಿದ್ದ ರಚಿತಾ ಇತ್ತೀಚಿಗೆ ಸ್ವಲ್ಪ ದಪ್ಪ ಆಗಿದ್ದರು. ಆದರೆ ಈಗ ಬರೀ 25 ದಿನದಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ‘ಅಯೋಗ್ಯ’ ಚಿತ್ರದ ಸಮಯದಲ್ಲಿ ರಚಿತಾ 65 ಕೆಜಿ ಇದ್ದರು. ಆದರೆ ಈಗ 7 ಕೆಜಿ ತೂಕ ಇಳಿಸಿಕೊಂಡು 58 ಕೆಜಿಗೆ ತಲುಪಿದ್ದಾರೆ.

 

 

‘ಮುಂಚೆಯಿಂದಲೂ ನಾನೇನು ಹೆಚ್ಚು ದಪ್ಪಗಿದ್ದವಳಲ್ಲ. ನಟಿಯಾಗಿ ಚಿತ್ರರಂಗಕ್ಕೆ ಬಂದಾಗಲೂ ಸಣ್ಣಗೆಯೇ ಇದ್ದೆ.. ಚಿತ್ರರಂಗಕ್ಕೆ ಬಂದ ಹೆಚ್ಚು ಕಡಿಮೆ ಎರಡು ವರ್ಷಗಳವರೆಗೂ ನಾನು ಇದ್ದಿದ್ದೇ ಸಣ್ಣಗೆ. ನಂತರ ಅದ್ಯಾಕೋ ನಾನು ದಪ್ಪಗಿದ್ದರೆ ಹೇಗೆ ಕಾಣಬಹುದು ಎಂದು ಎನಿಸಿತ್ತು. ಹಾಗಾಗಿ ನಾನು ವರ್ಕೌಟ್ ಕಡಿಮೆ ಮಾಡಿ, ಊಟ ಜಾಸ್ತಿ ಮಾಡುತ್ತಿದೆ. ಆಗ ನಾನು ಛಬ್ಬಿ ಛಬ್ಬಿಯಾಗಿ ಕಾಣಿಸುತ್ತಿದ್ದೆ. ‘ಅಯೋಗ್ಯ’, ಜತೆಗೆ ‘ಸೀತಾ ರಾಮ ಕಲ್ಯಾಣ’ ಎರಡು ಚಿತ್ರಗಳಲ್ಲೂ ನಾನು ಸ್ವಲ್ಪ ದಪ್ಪನೆ ಇದ್ದೆ. ಈಗ ದಪ್ಪಗಾಗಿದ್ದು ಸಾಕು ಸಣ್ಣ ಆಗಬೇಕು ಎಂತೆನಿಸಿತು. ಹಾಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ.. ಹನಂತ ಇದು ಯಾವುದೋ ಹೊಸ ಸಿನಿಮಾಗಾಗಿ ಅಂತ ಖಂಡಿತಾ ಅಲ್ಲ.ನನ್ನ ಖುಷಿಗೆ ನಾನೇ ಕಡಿಮೆ ಆಗೋಣ ಅಂತ ಅಷ್ಟೇ ’ ಎನ್ನುತ್ತಾರೆ ರಚಿತಾರಾಮ್.

ಅವರ ಜಿಮ್ ಟ್ರೈನರ್​​​​​ ಶ್ರೀನಿವಾಸ್​ ಗೌಡ ಮಾರ್ಗದರ್ಶನದಲ್ಲಿ ವರ್ಕ್​​ಔಟ್​ ಮಾಡಿ ಈಗ ಬರೊಬ್ಬರಿ 7 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ನಟನೆಯ ‘ನಟ ಸಾರ್ವಭೌಮ’ ಹಾಗೂ ಉಪೇಂದ್ರ ನಟನೆಯ ‘ಐ ಲವ್ ಯೂ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಚಿತಾರಾಮ್ ಅವರು ಬ್ಯುಸಿಯಾಗಿದ್ದಾರೆ.

 

 

View this post on Instagram

 

🧡

A post shared by Rachita Ram (@rachita_ram) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top