ಅರೋಗ್ಯ

ಕೂದಲು ಉದರೋದು ನಿಂತು ನೈಸರ್ಗಿಕವಾಗಿ ಸೊಂಪಾಗಿ ಕೂದಲು ಬೆಳೆಯೋಕೆ 5 ವಿಶೇಷ ಮನೆಮದ್ದುಗಳು.

“ಹೂವು ಚೆಲುವೆಲ್ಲಾ ನಂದೆಂದಿತು , ಹೆಣ್ಣು ಹೂವ ಮುಡಿದು ಚೆಲುವೇ ತಾನೆ0ದಿತು”, ಹೌದು ಹೆಣ್ಣಿನ ಸೌಂದರ್ಯಕ್ಕೆ ಮೆರುಗು ತರುವುದು ಹೂವು, ಅವಳ ಕೇಶರಾಶಿಗೆ ಹೂವೇ ಸಿ0ಗಾರ. ಆದರೆ ಈಗಿನ ತರಾತುರಿಯ ಸ್ಪರ್ಧಾತ್ಮಕ ಬದುಕಿನಲ್ಲಿ ಹೆಣ್ಣು ಮಕ್ಕಳು ಕೂಡ ದುಡಿಯುವ ಅನಿವಾರ್ಯತೆ.ಮೊದಲಿನ0ತೆ ತನ್ನಸೌ0ದರ್ಯದ ಕಡೆ ಗಮನ ಕೊಡುವುದು ಅವಳಿಗೆ ಸಾಧ್ಯವಿಲ್ಲ. ಈ ಗಜಿಬಿಜಿಯ ಜೀವನದಲ್ಲಿ ಅವಳು ಹೊರಗೆ ಬಿಸಿಲು ಮಳೆ ಎನ್ನದೆ ಓಡಾಡುತ್ತಾಳೆ. ಈ ಧೂಳು, ಮಾಲಿನ್ಯಕ್ಕೆ ಮೊದಲು ಬಲಿಯಾಗುವುದು ಚರ್ಮದ ಕಾ0ತಿ ಮತ್ತು ಅವಳ ಕೇಶರಾಶಿ.ಹೌದು ಈಗ ಕೂದಲು ಉದುರುವಿಕೆ ಒ0ದು ಸಾಮಾನ್ಯ ಸಮಸ್ಯೆ. ಅದರಿಂದ ಹೊರಬರಲು ಇಲ್ಲಿವೆ ಕೆಲವು ಟಿಪ್ಸ್ : ವಿ.ಸೂ: ಹಾಗೆ0ದು ಇವು ಮಹಿಳೆಯರಿಗೆ ಮಾತ್ರ ಸೀಮಿತವೇನಲ್ಲ. ಕೂದಲು ಉದುರುವಿಕೆಯ ಸಮಸ್ಯೆಯಿ0ದ ಬಳಲುತ್ತಿರುವ ಪುರುಷರೂ ಕೂಡ ಪ್ರಯೋಗಿಸಬಹುದಾಗಿದೆ.

ಬಿಳಿ ದಾಸವಾಳದ ಹೂವು:

 

 

 

ಬಿಳಿ ದಾಸವಾಳದ ಹೂವು ಮತ್ತು ಎಲೆಗಳನ್ನು ನೀರಿನಲ್ಲಿ ನೆನೆಸಿ ರಸ ತೆಗೆದು ಕೂದಲಿನ ಬುಡಕ್ಕೆ ಹಚ್ಚಿ, ಹತ್ತು ನಿಮಿಷಗಳ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವುದು. ಹೀಗೆ ವಾರದಲ್ಲಿ 2 ಬಾರಿ ಮಾಡುವುದು ಉತ್ತಮ.ಇದು ತಲೆಕೂದಲು ಉದುರುವಿಕೆ ತಡೆಯುವುದಲ್ಲದೆ, ತಲೆಹೊಟ್ಟಿನ ಸಮಸ್ಯೆಗೂ ರಾಮಬಾಣವಾಗಿದೆ. ಅಲ್ಲದೇ ದಾಸವಾಳದ ಎಲೆಗಳು ಕಣ್ಣಿಗೂ ತ0ಪು.

ಹಸಿ ಈರುಳ್ಳಿ:ಹಸಿ ಈರುಳ್ಳಿ ಯನ್ನು ಅರೆದು (ಬಿಳಿ ಈರುಳ್ಳಿ ಯಾದರೆ ಉತ್ತಮ) ಕೂದಲಿನ ಬುಡಕ್ಕೆ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಕೂದಲು ತೊಳೆಯುವುದರಿ0ದ ಉದುರುವಿಕೆ ನಿಲ್ಲುವುದಲ್ಲದೆ ಹೊಸ ಕೂದಲು ಸಹ ಹುಟ್ಟುತ್ತದೆ.

ನಿಂಬೆ ಹಣ್ಣು :ನಿಂಬೆ ಹಣ್ಣಿನ ರಸವನ್ನು ಬೆಚ್ಚಗೆ ಮಾಡಿದ ಕೊಬ್ಬರಿ ಎಣ್ಣೆಯೊ0ದಿಗೆ ಬೆರಸಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಅರ್ಧ ಗ0ಟೆಯ ನ0ತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಕೂಡ ಒಳ್ಳೆಯ ಪರಿಣಾಮ ಬೀರುವುದು ಅಲ್ಲದೆ ಇದು ತಲೆಹೊಟ್ಟು ಕೂಡ ನಿಯಂತ್ರಿಸುತ್ತದೆ.

ಮೆ0ತ್ಯೆ ಕಾಳು:1 ಟೇಬಲ್ ಸ್ಪೂನ್ ಮೆ0ತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಅದೇ ನೀರಿನಲ್ಲಿ ನುಣ್ಣಗೆ ಅರೆದು ಮೊಸರಿನಲ್ಲಿ ಕಲೆಸಿ ಕೂದಲಿನ ಬುಡಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಒಳ್ಳೆಯ ಉಪಾಯ. ಅಲ್ಲದೆ ಮೆಂತ್ಯ ದೇಹವನ್ನು ತ0ಪಾಗಿಡುತ್ತದೆ ಮತ್ತು ಕೂದಲಿನ ಕಾ0ತಿ ಹೆಚ್ಚಿಸುತ್ತದೆ.

ಮದರ0ಗಿ:ಮದರ0ಗಿ ಸೊಪ್ಪನ್ನು ಟೀ ಡಿಕಾಕ್ಷನ್ ಜೊತೆ ನುಣ್ಣಗೆ ಅರೆದು ಕೂದಲಿಗೆ ಬಿಡಿ ಬಿಡಿಯಾಗಿ ಹಚ್ಚಿ, ಅರ್ಧ ಗ0ಟೆಯ ನ0ತರ ಕೂದಲು ತೊಳೆಯುವುದು ಕೂದಲು ಉದುರುವಿಕೆ ತಡೆಯುತ್ತದೆ. ಇದು ಕೂದಲಿನ ರ0ಗನ್ನು ಬದಲಿಸುವುದರಿಂದ ಬಿಳಿ ಕೂದಲು ಇರುವವರು ಪ್ರಯೋಗ ಮಾಡಿದರೆ ಒಳ್ಳೆಯದು.ಮೇಲೆ ಹೇಳಿರುವ ವಸ್ತುಗಳು ಮನೆಯಲ್ಲಿ ಸುಲಭವಾಗಿ ದೊರಕುವ0ತಾವಾಗಿದ್ದು, ಪ್ರಯೋಗ ಮಾಡಲು ಉಚಿತ. ಸಾಮಾನ್ಯವಾಗಿ ನೀವು ಎಲ್ಲ ಸಲಹೆಗಳನ್ನು ಗಮನಿಸಿದ್ದರೆ ಉಗುರು ಬೆಚ್ಚಗಿನ ನೀರಿನ ಸ್ನಾನ ಎ0ದಿಗೂ ಉತ್ತಮ.ಈ ಎಲ್ಲಾ ಸಲಹೆಯಲ್ಲಿ ನಿಮಗೆ ಯಾವುದು ಸರಿ ಹೊ0ದುತ್ತದೋ ಅದನ್ನು ನಿಯಮಿತವಾಗಿ ಪಾಲನೆ ಮಾಡುವುದು ಉತ್ತಮ ಫಲಿತಾಂಶ ನೀಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top