ಮನೋರಂಜನೆ

ಸ್ಯಾಂಡಲ್ ವುಡ್ ನ ಕ್ಯೂಟ್ ರಾಕಿಂಗ್ ಜೋಡಿ ಒಟ್ಟಿಗೆ ಕಂಡದ್ದು ಬೇಬಿ ಮೂನ್​ನಲ್ಲಿ.ಫೋಟೋ ಒಳಗಿದೆ

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸರಿಸುಮಾರು ಎರಡು ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದ್ದಾರಲ್ಲಾ, ಆಗಿನಿಂದಲೂ ಇವರಿಬ್ಬರಿಗೂ ಅಭಿಮಾನಿಗಳಿಂದ ಹಿಡಿದು ಆಪ್ತರು ಕೇಳುತ್ತಿದ್ದುದು ಒಂದೇ ಪ್ರಶ್ನೆ ”ಮಗು ಯಾವಾಗ?”.ಪ್ರತಿ ಸಲ ಈ ಪ್ರಶ್ನೆಗೆ ಕೆಳಿದಾಗಲೆಲ್ಲ ನಗುತ್ತಲೇ ‘ಸದ್ಯದಲ್ಲೇ’ ಎಂದು ಉತ್ತರಿಸುತ್ತಿದ್ದ ಯಶ್ ಜೋಡಿ ಕೊನೆಗೂ ಸಿಹಿ ಸುದ್ದಿ ನೀಡಿ ತಿಂಗಳುಗಳೇ ಕಳೆದಿದೆ.

ಗರ್ಭಿಣಿ ಯಾಗಿರುವ ರಾಧಿಕಾ ಪಂಡಿತ್ ಈಗ ಹ್ಯಾಪಿಯಾಗಿದ್ದಾರೆ ಈಗ ಅವರು ಒಬ್ಬರಲ್ಲ, ಬದಲಿಗೆ ಇಬ್ಬರಾಗಿದ್ದಾರೆ. ಫಿಟ್​ ಅಂಡ್​ ಹೆಲ್ದಿಯಾಗಿರುವ ರಾಧಿಕಾ ಸಿಕ್ಕಾಪಟ್ಟೆ ಖುಷಿಯಲ್ಲಿ ಮುಳುಗಿ ತೇಲುತ್ತಿದ್ದಾರೆ,ಚಿತ್ರರಂಗದಿಂದ ಮದುವೆಯಾದ ಮೇಲೆ ದೂರ ಉಳಿದರು ಸಾಮಾಜಿಕ ಜಾಲತಾಣ ದಲ್ಲಿ ಪೋಸ್ಟ್ ಹಾಕುವುದರ ಮೂಲಕ ಅವರ ಅಭಿಮಾನಿಗಳಿಗೆ ಹತ್ತಿರ ಇದ್ದಾರೆ ,ಅವರು ಮಾಡುವ ಒಂದೊಂದು ಪೋಸ್ಟ್ ಫುಲ್ ವೈರಲ್ ಆಗುತ್ತೆ ,ಈಗ ಯಶ್ ಜೋಡಿ ಸುದ್ದಿಯಲ್ಲಿ ಇರೋಕೆ ಕಾರಣ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಾಡಿರೋ ಈ ಪೋಸ್ಟ್ .

 

 

 

ಯಾವಾಗ್ಲೂ ಸಿನಿಮಾಗಳಲ್ಲಿ ಬ್ಯುಸಿ ಯಾಗಿರೋ ಯಶ್ ಈಗ ಮಡದಿ ರಾಧಿಕಾ ಪಂಡಿತ್ ಗರ್ಭಿಣಿ ಆಸೆನ್ನ ತೀರಿಸಿದ್ದಾರೆ.ಬರೋ ಪುಟ್ಟ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರೋ ಸ್ಟಾರ್ ಜೋಡಿ ಯಶ್ ರಾಧಿಕಾ ಪಂಡಿತ್ ಏನೇ ಮಾಡಿದ್ರೂ ತಮ್ ಸ್ಟೈಲ್‌ನಲ್ಲೇ ಮಾಡ್ತಾರೆ.ಈ ಜೋಡಿ ಹನಿಮೂನ್​ ಅಲ್ಲ ಬೇಬಿ ಮೂನ್​ ಮೂಡ್ ನಲ್ಲಿ ಇದ್ದಾರೆ ,ಮದುವೆಯಾದ ಮೇಲೆ ಜೋಡಿಗಳು ಹನಿಮೂನ್ ಹೋಗೋದು ಕಾಮನ್ ಆದ್ರೆ ಈ ರಾಕಿಂಗ್ ಜೋಡಿ ಬೇಬಿಮೂನ್ ಕೂಡ ಮಾಡ್ತಿದ್ದಾರೆ.
ಈ ರಾಕಿಂಗ್ ಜೋಡಿ ದೂರದಲ್ಲಿ ಇರೋ ಮಾಲ್ಡೀವ್ಸ್ ದ್ವೀಪಕ್ಕೆ ಹೋಗಿ ಅಲ್ಲಿನ ಸಮುದ್ರತೀರವೊಂದ್ರಲ್ಲಿ ಕೈಕೈಹಿಡಿದು ನಡೆದುಕೊಂಡು ಹೋಗ್ತಿರೋ ಫೋಟೋವನ್ನು ರಾಧಿಕಾ ತಮ್ಮ ಇನ್ಸ್ಟ್ ಗ್ರಾಂ ನಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದು ಕೊಂಡಿದ್ದಾರೆ “ಇಲ್ಲಿ ನಾನು,ಅವರು,ಸಮುದ್ರ ಮತ್ತು ನಾವು ಮೂವರು ಅಂತಾ ಬರೆದಿದ್ದಾರೆ. ಇನ್ನೊಂದೆಡೆ ಬೇಬಿಮೂನ್ ಟ್ರಾವಲ್‌,ಫೋಟೋಗಳನ್ನ ಶೀಘ್ರದಲ್ಲೇ ನಿರೀಕ್ಷಿಸಿ” ಅಂತಾ ಬರೆದಿದ್ದಾರೆ.ಈ ಫೋಟೋಗೆ ಲೈಕ್ ಹಾಗೂ ಕಾಮೆಂಟ್ಗಳ ಹೊಳೆ ಹರಿದು ಬಂದಿದೆ , ಇದನ್ನ ನೋಡಿದ ಅಭಿಮಾನಿಗಳಂತೂ “ವಾವ್ ಎಂತ ಸೂಪರ್ ಜೋಡಿ ಇದು ಸದಾ ಕಾಲ ಹೀಗೆ ಖುಷಿ ಖುಷಿಯಾಗಿ ಇರಲಿ ಎಂದು ಆರೈಸಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top