ಮನೋರಂಜನೆ

ದೊಡ್ಡ ವ್ಯಕ್ತಿಯೊಬ್ಬರು ತಮಗೆ ಕೊಟ್ಟಿದ್ದನ್ನ ವಿಷ್ಣುದಾದಾ, ಶಿವಣ್ಣನಿಗೆ ಉಡುಗೊರೆಯಾಗಿ ನೀಡಿದ್ದರು- ಆ ಗಿಫ್ಟ್ ಏನು ಗೊತ್ತಾ?

ಇಂದು ಕರುನಾಡ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜನ್ಮ ದಿನೋತ್ಸವ.. ವಿಷ್ಣು ನಮ್ಮನ್ನೆಲ್ಲಾ ಆಗಲಿ ಒಂಭತ್ತು ವರ್ಷಗಳೇ ಕಳೆದಿದೆ ಆದರೆ ಕನ್ನಡಿಗರ ಹೃದಯದ ಸಿಂಹಾಸನವನ್ನು ಶಾಶ್ವತವಾಗಿ ‘ಯಜಮಾನನಾಗಿದ್ದಾರೆ.. ವಿಷ್ಣು ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರ ಒಡನಾಟ ಚಿತ್ರರಂಗದ ಇತರೆ ನಟರ ಜೊತೆ ಹೇಗಿತ್ತು ಎಂಬ ವಿಚಾರಗಳು ಬಿಚ್ಚಿಕೊಳ್ಳುತ್ತಿವೆ. ಅದೇ ರೀತಿ ಶಿವಣ್ಣ ಜೊತೆಗಿನ ವಿಷ್ಣು ಸಂಭಂದ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಮೊನ್ನೆ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನಲ್ಲಿ ವಿಷ್ಣು ಕುಟುಂಬ ‘ಹೃದಯಗೀತೆ’ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಿದ್ದು ಎಲ್ಲರೂ ಸಾಹಸಸಿಂಹ ನಡುವಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.. ಅದೇ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹ್ಯಾಟ್ರಿಕ್ ಹೀರೋ ವಿಷ್ಣು ಜೊತೆಗಿನ ಭಾಂದವ್ಯವನ್ನು ಬಿಚ್ಚಿಟ್ಟರು.

 

 

ವಿಷ್ಣುವರ್ಧನ್ ಅವರ ಚೊಚ್ಚಲ ಸಿನಿಮಾ ನಾಗರಹಾವು ತೆರೆಕಂಡಿದ್ದಾಗ ಶಿವಣ್ಣನಿಗೆ 12 ವರ್ಷ ವಯಸ್ಸಾಗಿತ್ತಂತೆ.. ನಾಗರಹಾವು ಸಿನಿಮಾ ನೋಡಿದ್ದ ಶಿವನ್ನ “ಅಂದಿನಿಂದಲೇ ಸಾಹಸಸಿಂಹ ಅಭಿಮಾನಿ ಆಗ್ಬಿಟ್ರಂತೆ. ಈ ಚಿತ್ರವನ್ನು ಮೆಚ್ಚಿಕೊಂಡಿದ್ದ ಅವರು, ಯಾರಪ್ಪ ಹೊಸ ಹೀರೋ ನೋಡೋಕೆ ಸಕತ್ ಸ್ಮಾರ್ಟ್ ಆಗಿ ಇದ್ದಾರೆ, ವಿಷ್ಣುವಿನ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡಿ ಶಿವಣ್ಣ ಫುಲ್ ಫಿದಾ ಆಗಿಬಿಟ್ಟಿದ್ದರಂತೆ. ನಾಗರಹಾವು ಸಿಲ್ವರ್ ಜೂಬ್ಲಿ ಆಚರಿಸಿಕೊಳ್ಳುತ್ತೆ ಅಂತಾ ಹೇಳಿದ್ದರಂತೆ..

ಶಿವಣ್ಣನಿಗೆ ವಾಚ್ ಗಿಫ್ಟ್ ಕೊಟ್ಟಿದ್ದ ವಿಷ್ಣು ಮಹಾರಾಜ್:
ವಿಷ್ಣು ಹಾಗೂ ತಮ್ಮ ನಡುವಿನ ಒಡನಾಟವನ್ನು ಹೇಳಿಕೊಂಡಿರುವ ಶಿವಣ್ಣ, ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಹೌದು “ಶಿವಣ್ಣನ ಮೊದಲ ಸಿನಿಮಾ ‘ಆನಂದ್’ ಅನ್ನು ನೋಡಿ ಮೆಚ್ಚಿಕೊಂಡಿದ್ದ ವಿಷ್ಣು, ತಮ್ಮ ವಾಚನ್ನು ಗಿಫ್ಟ್ ಆಗಿ ಇವರಿಗೆ ನೀಡಿದ್ದರಂತೆ.. ವಿಶೇಷ ಅಂದ್ರೆ ಆ ವಾಚ್ಅ​​ನ್ನು ವಿಷ್ಣುವರ್ಧನ್ ಅವರಿಗೆ ತಮಿಳು ಸೂಪರ್ ಸ್ಟಾರ್ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್​ ಅವರು ನೀಡಿದ್ದರಂತೆ.. “ಇದನ್ನ ನಾ ಯಾವತ್ತಿಗೂ ಮರೆಯೊದಿಲ್ಲ” ಎಂದರು ಅಣ್ಣಾವ್ರ ಮಗ ಶಿವರಾಜಕುಮಾರ್.

 

 

ವಿಷ್ಣುವರ್ಧನ್ ಜೊತೆ ಶಿವಣ್ಣ ಸುಮಾರು ಆರೇಳು ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರಂತೆ.. ಇನ್ನು ಶಿವಣ್ಣನನ್ನು ವಿಷ್ಣುವರ್ಧನ್​​ ಅವರು ಪ್ರೀತಿಯಿಂದ ‘ಶಿವು’ ಅಂತಾ ಕರೆಯುತ್ತಿದ್ದರಂತೆ..ಇಷ್ಟೆಲ್ಲಾ ವಿಚಾರಗಳನ್ನ ಹಂಚಿಕೊಂಡ ಶಿವಣ್ಣ “ವಿಷ್ಣುವರ್ಧನ್ ಅಂಕಲ್ ಜೊತೆಗೆ ಒಂದು ಸಿನಿಮಾದಲ್ಲಾದರೂ ನಟಿಸುವ ಅವಕಾಶ ಸಿಗಲಿಲ್ಲ, ಇದು ನನಗೆ ತುಂಬಾ ಬೇಸರವನ್ನುಂಟುಮಾಡುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top