ಮನೋರಂಜನೆ

ಟ್ವಿಟರ್’ನಲ್ಲಿ ಇಡೀ ಭಾರತಕ್ಕೆ ನಂ.1 ಸ್ಥಾನದಲ್ಲಿ ಟ್ರೆಂಡ್ ಆಗ್ತಿದೆ ವಿಷ್ಣುದಾದಾನ ಹುಟ್ಟುಹಬ್ಬ.

ಇಂದು ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ 69ನೇ ಜನುಮದಿನ. ವಿಷ್ಣು ಅಭಿಮಾನಿಗಳಿಗೆ ಸರಿಸಾಟಿ ಯಾರು ಇಲ್ಲ ಅಂತ ಇದಕ್ಕೆ ಇರ್ಬೇಕು ಹೇಳೋದು ಅನ್ಸುತ್ತೆ ಯಾಕಂದ್ರೆ, ಭೌತಿಕವಾಗಿ ಯಜಮಾನ ನಮ್ಮ ಬಳಿ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನಿಗಳ ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ತಮ್ಮ ಪ್ರೀತಿಯ ನಟನ ಜನುಮದಿನವನ್ನು ಇಡೀ ನಾಡಿನ ತುಂಬೆಲ್ಲಾ ಇರೋ ಕೋಟ್ಯಂತರ ವಿಷ್ಣು ಅಭಿಮಾನಿಗಳು ಸಾರ್ಥಕವಾಗಿ ಆಚರಿಸುತ್ತಿದ್ದಾರೆ.. ಇನ್ನು ಸಾಮಾಜಿಕ ಜಾಲತಾಣ ವಿಷಯಕ್ಕೆ ಬಂದರೆ ವಿಷ್ಣು ಅಕ್ಷರಶಃ ದೂಳೆಬ್ಬಿಸಿದ್ದಾರೆ..

 

 

ಹೌದು, ಇಂದು ಫೇಸ್ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುದಾದನದ್ದೇ ಹವಾ, ಪೋಸ್ಟರ್ ಮತ್ತು ವಿಡಿಯೋ ತುಣುಕುಗಳು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ.. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಅಭಿಮಾನಿಗಳವರೆಗೂ ಪ್ರತಿಯೊಬ್ಬರ ಅಕೌಂಟ್ ಖಾತೆಯಲ್ಲಿ ವಿಷ್ಣು ಕುರಿತಾದ ವಿಚಾರಗಳು ಕಾಣಸಿಗುತ್ತಿವೆ.. ಆಶ್ಚರ್ಯ ಏನಪ್ಪಾ ಅಂದ್ರೆ ವಿಷ್ಣು ಹುಟ್ಟುಹಬ್ಬ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತಾದ್ಯಂತ ಸದ್ದು ಮಾಡುತ್ತಿದೆ. ಇಡೀ ದೇಶಕ್ಕೆ ವಿಷ್ಣು ಹವಾ ಆವರಿಸಿಕೊಂಡಿದೆ.

ಟ್ವಿಟರ್ ನಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನದ ನೆನೆಪನ್ನು ಮೆಲುಕು ಹಾಕುವವರು ಒಂದೆರೆಡು ಹ್ಯಾಶ್ ಟ್ಯಾಗ್ ಗಳನ್ನ ಸೃಷ್ಟಿ ಅವುಗಳ ಜೊತೆ ವಿಷ್ಣು ಬಗ್ಗೆ ತಮಗೆ ಅನಿಸಿದ್ದನ್ನು ಬರೆದುಕೊಳ್ಳುತ್ತಿದ್ದಾರೆ. #HappyBirthdayVishnuDada, #HBDDemigodDrVishnuSir, ಎಂಬ ಹ್ಯಾಶ್ ಟ್ಯಾಗ್ ಗಳು ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ಆಗುತ್ತಿದ್ದು ಇದನ್ನು ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ.. ನಮ್ಮ ನಡುವೆ ಇರೋ ಸ್ಟಾರ್ ನಟರುಗಳ ಬರ್ತಡೆಗಿಂತಲೂ ವಿಷ್ಣುದಾದಾ ಬರ್ತಡೇ ಸದ್ದು ಜೋರಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top