ಮನೋರಂಜನೆ

ಅಭಿಮಾನಿಗಳೊಂದಿಗೆ ಬರ್ತಡೇ ಆಚರಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ.

ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ 50ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್ ವುಡ್ ಬುದ್ದಿವಂತ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕತ್ರಿಗುಪ್ಪೆ ನಿವಾಸದಲ್ಲಿ ಭಾರಿ ಗಾತ್ರದ ಸ್ನೇಹಿತರು, ಅಭಿಮಾನಿಗಳ ಜತೆ ಜನ್ಮದಿನ ಆಚರಿಸಿಕೊಂಡರು.. ಸಾವಿರಾರು ಅಭಿಮಾನಿಗಳು ಆಗಮಿಸಿ ಶುಭ ಕೋರಿ, ತಮ್ಮ ನೆಚ್ಚಿನ ನಟನ ಜತೆ ಸೆಲ್ಫೀ ತೆಗೆದುಕೊಂಡು ಸಂಭ್ರಮಪಟ್ಟರು..

 

 

ಮಧ್ಯರಾತ್ರಿಯಿಂದಲೇ ಉಪ್ಪಿ ಮನೆಮುಂದೆ ಅಭಿಮಾನಿಗಳು ಸೇರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ತಯಾರಿ ಬ್ಯಾನರ್‌, ಪೋಸ್ಟರ್‌ ಕಟ್ಟಿ, ಕೇಕ್‌ ಹಿಡಿದು ಸಂಭ್ರಮಿಸಿದರು. ಉಪೇಂದ್ರ ಅವರ ವಿವಿಧ ಗೆಟಪ್‌ನ ಪೋಸ್ಟರ್‌ಗಳು, ವಿಭಿನ್ನ ಶೈಲಿಯಲ್ಲಿ ಮಾಡಿಸಿದ ಕೇಕ್‌ಗಳೊಂದಿಗೆ ಆಗಮಿಸಿದ ಅಭಿಮಾನಿಗಳ ಹಾಗೂ ತಮ್ಮ ಕುಟುಂಬ ವರ್ಗದ ಜೊತೆ ಉಪೇಂದ್ರ ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.

ಉಪೇಂದ್ರ ಹುಟ್ಟುಹಬ್ಬ. ಅವರ ನಟನೆಯ ಮುಂಬರುವ ಚಿತ್ರ ‘ಐ ಲವ್ ಯೂ’ ಚಿತ್ರತಂಡ ಉಪೇಂದ್ರ ಅವರಿಗೆ ಆಶ್ಚರ್ಯಕರ ಉಡುಗೊರೆ ಕೊಡಲು ಯೋಜನೆ ಮಾಡಿದೆ. ಚಿತ್ರತಂಡ 3ಡಿ ಮೋಷನ್ ಪೋಸ್ಟರ್ ನ್ನು ತಯಾರು ಮಾಡಿದೆ.. ಅಷ್ಟೇ ಅಲ್ಲದೆ ಉಪೇಂದ್ರ ಅವರು ತಮ್ಮ ರಾಜಕೀಯ ಪಕ್ಷ ಉತ್ತಮ ಪ್ರಜಾಕೀಯ ಪಾರ್ಟಿಯನ್ನು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top