ಸಮಾಚಾರ

ಟ್ರೊಲ್ ಮಾಡುವವರಿಗೆ ಆಹಾರವಾಯ್ತು ಐಶ್ ಮಗಳು ಆರಾಧ್ಯ ಮಾಡಿದ ಈ ಕೆಲಸ

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮದುವೆ ಆದ ಬಳಿಕ ಅದರಲ್ಲೂ ಮಗಳು ಆರಾಧ್ಯ ಹುಟ್ಟಿದ ನಂತರ ಚಿತ್ರಗಳಲ್ಲಿ ನಟಿಸುವುದಕ್ಕೆ ಹೆಚ್ಚಿಗೆ ಆದ್ಯತೆ ನೀಡದೆ ಸಂಪೂರ್ಣವಾಗಿ ಫುಲ್ ಟೈಮ್ ಅಮ್ಮನಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಇನ್ಸ್ಟ್ರಾಗ್ರಾಮ್ ನಲ್ಲಿ ಐಶ್ವರ್ಯ ರೈ ಬಚ್ಚನ್ ಆಗಾಗ ಮಗಳ ಜೊತೆಗಿರುವ ಫೋಟೋವೊಂದನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.ಪುಟಾಣಿ ಆರಾಧ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾಳೆ.

ಜನ ಸಾಮಾನ್ಯರಿಗೆ ನಟ ನಟಿಯರ ಕುರಿತ ಎಲ್ಲ ವಿಷಯಗಳು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುತ್ತೆ,ಕೆಲವರು ಅವರ ಮೆಚ್ಚಿನ ತಾರೆಯ ಬಗ್ಗೆಗಿನ ಅಪ್ಡೇಟ್ ಗಳನ್ನೂ ನೋಡಿ ಖುಷಿ ಪಡ್ತಾರೆ ಇನ್ನೂ ಕೆಲವರು ಅದೇ ವಿಷಯ ಇಟ್ಕೊಂಡು ಟ್ರೊಲ್ ಮಾಡ್ತಾರೆ,ಇತ್ತೀಚಿನ ದಿನಗಳಲ್ಲಿ ಟ್ರೊಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ,ಅದು ಜಾಸ್ತಿ ಸೆಲೆಬ್ರಿಟಿಗಳ ಖಾಸಗಿ ಬದುಕನ್ನು ಪ್ರಶ್ನೆ ಮಾಡಲು ಶುರು ಹಚ್ಕೊಂಡಿದ್ದಾರೆ ,ಇದಕ್ಕೆ ನಿಜ ಸಾಕ್ಷಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್.

 

 

 

ಐಶ್ವರ್ಯ ರೈ ಬಚ್ಚನ್ ರವರನ್ನು ಪದೇ ಪದೇ ಮಗಳು ಆರಾಧ್ಯ ವಿಚಾರಕ್ಕೆ ಕೆಣಕಿ ,ಟ್ರೊಲ್ ಮಾಡಿ ಬಾಯಿಗೆ ಬಂದ ಹಾಗೇ ಮಾತನಾಡ್ತಿರುತ್ತಾರೆ,ಕೆಲ ದಿನಗಳ ಹಿಂದೆ ಲಂಡನ್ ನಿಂದ ವಾಪಸ್ ಆಗಿದ್ದಾರೆ ಐಶು ,ಆ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಗಳು ಆರಾಧ್ಯ ಕೈ ಹಿಡಿದು ಬರ್ತಿದ್ದ ಐಶ್ ಫೋಟೋ ತೆಗೆದು,ಆ ಫೋಟೋವನ್ನು ಫುಲ್ ವೈರಲ್ ಮಾಡಿದ್ದೂ ,ಆ ಫೋಟೋವನ್ನು ನೋಡಿದ ಕೆಲವರು ಫುಲ್ ಟ್ರೊಲ್ ಮಾಡಿ ಕಮೆಂಟ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ,ಆ ಕಾಮೆಂಟ್ ನಲ್ಲಿ ಐಶ್ ಳನ್ನು ಐಶ್, ಸೈಫ್ ಹಾಗೂ ಕರೀನಾ ನೋಡಿ ಕಲಿಯಬೇಕು. ಚಿಕ್ಕವನಾದ್ರೂ ತೈಮೂರ್ ನನ್ನು ಕರೀನಾ ಆತ್ಮವಿಶ್ವಾಸದಿಂದ ಬೆಳೆಸಿದ್ದಾಳೆಂದು ಕಮೆಂಟ್ ಮಾಡುವುದರ ಜೊತೆ ಐಶು ಓವರ್ ಪ್ರೊಟೆಕ್ಟಿವ್ ತಾಯಿ ಎಂದಿದ್ದಲ್ಲದೆ ಆರಾಧ್ಯಗಳನ್ನು ಪುಕ್ಕಲು ಮಾಡ್ತಿದ್ದಾಳೆಂದು ಹೇಳಿದ್ದಾರೆ ಹಾಗೂ ಐಶ್ವರ್ಯ ಮಗಳನ್ನು ಅಗತ್ಯಕ್ಕಿಂತ ಹೆಚ್ಚು ರಕ್ಷಣೆ ಮಾಡ್ತಾಳೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಯಾವ ಸೆಲೆಬ್ರಿಟಿ ಆದ್ರೂ ಅವರಿಗೆ ಅಂತ ಪರ್ಸನಲ್ ಲೈಫ್ ಇರುತ್ತೆ ಅದಕ್ಕೆ ಮೂಗು ತುರಿಸುವವುದು ಸರಿ ಅಲ್ಲ ಏಕೆ ಅಂದ್ರೆ ನಮ್ಮ ನಿಮ್ಮ ಹಾಗೇ ಅವರು ಕೂಡ ಮನುಷ್ಯರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top