ಸಮಾಚಾರ

ಸುಂದರ ಜೋಡಿಯ ಎಲ್ಲ ಕನಸೂ ನುಚ್ಚುನೂರು,ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು.ಸಿನಿಮಾ ರೀತಿಯಲ್ಲಿ ಆಯಿತು ಈ ದುರ್ಘಟನೆ

ಆಂಧ್ರ ಪ್ರದೇಶದ ತೆಲಂಗಾಣದಲ್ಲಿ ಸೆಪ್ಟೆಂಬರ್ ೧೪ ರಂದು ನಡೆದ ಈ ಘಟನೆ ಇಡೀ ರಾಜ್ಯವನ್ನೇ ಗಡಗಡ ನಡುಗಿಸುವಂತೆ ಮಾಡಿತ್ತು,ಆ ಘಟನೆ ಏನು ಅಂದ್ರೆ ಪ್ರೀತಿಸಿ ಮದುವೆಯಾದ ಹುಡುಗನನ್ನು ಮತ್ತೆ ಬರಲಾರದ ಲೋಕಕ್ಕೆ ಕಳುಯಿಸಿದ್ದ ಹುಡುಗಿಯ ತಂದೆ.

ಘಟನೆಯ ಒಳ ವಿವರ :
21 ವಯಸ್ಸಿನ ಅಮೃತಾ ಹಾಗೂ 24 ವರ್ಷ ವಯಸ್ಸಿನ ಪ್ರಣಯ್ ಪ್ರೀತಿಸಿ ಅಂತರ ಜಾತಿಯ ಮದುವೆಯಾಗಿದ್ದರು. ಇಬ್ಬರ ಜಾತಿ , ಮತ ಬೇರೆ ಬೇರೆ ಎಂಬ ಕಾರಣಕ್ಕೆ ಇಬ್ಬರ ಕುಟುಂಬದವರು ಈ ಮದುವೆಗೆ ಒಪ್ಪಲಿಲ್ಲ.ತುಂಬಾ ಪ್ರೀತಿಯಲ್ಲಿ ಇದ್ದ ಇವರು ಮನೆಯವರ ವಿರೋಧದ ನಡುವೆಯೂ ಕಳೆದ ಜನವರಿಯಲ್ಲಿ ಮದುವೆಯಾಗಿದರು ಮದುವೆಯಾದ ಸ್ವಲ್ಪ ದಿನದ ನಂತರ ಈ ಜೋಡಿಯನ್ನು ಪ್ರಣಯ್ ಮನೆಯವರು ಹೇಗೋ ಸ್ವೀಕರಿಸಿದ್ದರು. ನಂತರ ಒಪ್ಪಿ ಮತ್ತೆ ಆಗಸ್ಟ್ 17 ರಂದು ಅವರಿಬ್ಬರಿಗಾಗಿ ಅದ್ಧೂರಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು,ಆರತಕ್ಷತೆಗೆ ಪೊಲೀಸರನ್ನು ಆಮಂತ್ರಿಸಲು ಪ್ರಣಯ್ ಮತ್ತು ಅಮೃತಾ ತೆರಳಿದಾಗ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ‘ನಿಮ್ಮ ಪ್ರಾಣಕ್ಕೆ ಅಪಾಯವಿದೆ’ ಎಂಬ ಸುಳಿವೂ ನೀಡಿದ್ದರು. ಆದರೆ ಇದನ್ನು ಅಷ್ಟು ಗಂಭೀರವಾಗಿ ಸ್ವೀಕರಿಸದ ಈ ಜೋಡಿ , ದೂರನ್ನೂ ನೀಡದೆ ಪೊಲೀಸರ ಮಾತಿಗೆ ನಕ್ಕು ಸುಮ್ಮನಾಗಿದ್ದರು.

 

ಅಮೃತಾ ಮತ್ತು ಪ್ರಣಯ್ ಜೀವಕ್ಕೆ ಅಪಾಯವಿದೆ ಎಂಬ ಅನುಮಾನವಿದ್ದಿದ್ದರಿಂದ ಯಾವುದೇ ದೂರು ಇಲ್ಲದಿದ್ದರೂ ಸ್ವಂತ ಪೊಲೀಸರೇ ಅಮೃತಾ ಅವರ ತಂದೆ ಮಾರುತಿ ರಾವ್ ಅವರನ್ನು ಠಾಣೆಗೆ ಕರೆಸಿದ್ದರು. ಆದರೆ ಆ ಸಮಯದಲ್ಲಿ ಅತ್ತು, ಕಣ್ಣೀರು ಹಾಕಿದ ಮಾರುತಿ ರಾವ್, ನನಗೆ ನನ್ನ ಮಗಳನ್ನಾಗಲೀ, ಪ್ರಣಯ್ ನನ್ನಾಗಲೀ ಕೊಲ್ಲುವ ಯಾವ ಉದ್ದೇಶವೂ ಇಲ್ಲ. ಆದರೆ ಆ ರೀತಿ ಮಾತುಗಳು ಕೇಳಿಬರುತ್ತಿರುವುದರಿಂದ ನನಗೆ ಘಾಸಿಯಾಗುತ್ತಿದೆ ಎಂದಿದ್ದರು. ಅಮೃತಾ-ಪ್ರಣಯ್ ಮದುವೆಯಾದ ನಂತರ ಕೆಲ ದಿನ ಮಾರುತಿ ರಾವ್ ಮೌನವಾಗಿಯೇ ಇದ್ದರು.

 

 

 

ಸ್ವಲ್ಪ ದಿನದ ನಂತರ ಮೂರು ತಿಂಗಳ ಗರ್ಭಿಣಿಯಾಗಿದ್ದ ಅಮೃತಾ, ಕಳೆದ ಶುಕ್ರವಾರ ಅಂದರೆ ಸೆ.14 ರಂದು ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆಂ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ .ಈ ಬಗ್ಗೆ ಕಣ್ಣೀರು ಹಾಕುತ್ತಾ ರೋಷದ ಧ್ವನಿಯಲ್ಲಿ ಮಾತನಾಡಿದ ಅಮೃತಾ ನನ್ನ ತಂದೆಯಲ್ಲದೆ ಬೇರೆ ಯಾರುತತನ್ನಪತಿಯನ್ನು ಕೊಲ್ಲಲು ಸಾಧ್ಯವೇ ಇಲ್ಲ ,ಅಷ್ಟೇ ಅಲ್ಲದೇ ತನ್ನ ಪತಿಯ ಕೊಲೆಯಲ್ಲಿ ಕೇವಲ ತನ್ನ ತಂದೆ ತಾಯಿ ಮಾತ್ರವಲ್ಲದೆ, ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಶಾಸಕರೊಬ್ಬರ ಕೈವಾಡವೂ ಇದೆ ಎಂದು ರೋಪಿಸುವುದು ಈ ನಡುವೆ ಈ ಬಗ್ಗೆ ಮೊದಲೇ ಸುಳಿವಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ ತೆಲಂಗಾಣ ಪೊಲೀಸರ ಮಾತನ್ನು ಕೇಳಿ ಆತಂಕ ಸೃಷ್ಟಿಯಾಗಿದೆ

ಅಮೃತ ತಂದೆ ‘ಮಾರುತಿ ರಾವ್ ರವರ ಕಡೆಯಿಂದ ಆಗಾಗ ತಮ್ಮ ಮಗ ಪ್ರಣಯ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ನಾವು ಅವನ್ನೆಲ್ಲ ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅಳುತ್ತಾ ಹೇಳುತ್ತಾರೆ ಪ್ರಣಯ್ ತಂದೆತಾಯಿ. ಅನುಮಾನವಿದ್ದ ಕಾರಣದಿಂದ ಮನೆಯ ಸುತ್ತ ಮುತ್ತ ಮೂರು ಕಡೆಗಳಲ್ಲಿ ಸಿಸಿಟಿ ಕ್ಯಾಮರಾ ಅಳವಡಿಸಲಾಗಿತ್ತು.ಪೊಲೀಸರು ಸಿಸಿಟಿ ಕ್ಯಾಮರಾ ಏನಾದ್ರು ಸುಳಿವು ಸಿಗಬಹುದಾ ಎಂದು ಹುಡುಕಾಟ ನಡೆಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top