ಭವಿಷ್ಯ

ಸೆಪ್ಟೆಂಬರ್ 17 ನೇ ತಾರೀಖಿನಂದು ಸೂರ್ಯನು ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದು,ಇದರಿಂದ ಆಗುವ ಶುಭ ಹಾಗೂ ಅಶುಭ ಫಲಗಳು ಏನೇನು ಗೊತ್ತಾ

ಕನ್ಯಾ ರಾಶಿಗೆ ಸೆಪ್ಟೆಂಬರ್ 17 ನೇ ತಾರೀಖಿನಂದು ಸೂರ್ಯನು ಪ್ರವೇಶ ಮಾಡಿದ್ದಾನೆ.ಇದರಿಂದ ಆಗುವ ಪ್ರಭಾವಗಳು ಏನೇನು ?
ಸೂರ್ಯ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಕನ್ಯಾ ರಾಶಿಗೆ ಅಧಿಪತಿ ಬುಧ ಗ್ರಹ ಅಂದರೆ ಬುದ್ಧಿ ಕಾರಕ ಪ್ರತಿಯೊಬ್ಬ ಮನುಷ್ಯನೂ ಕೂಡ ಒಳ್ಳೆಯ ಬುದ್ಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆದರೆ ಚಂದ್ರ ಅದರಲ್ಲೂ ಸೋಮವಾರ ಚಂದ್ರ ವಾಸರದ ದಿನ ಸೂರ್ಯ ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ.

ಇದರಿಂದ ಬಹಳಷ್ಟು ಅನುಕೂಲಗಳು ಖಂಡಿತವಾಗಿಯು ಲಭ್ಯವಾಗುತ್ತವೆ.ಆದರೆ ಪ್ರಕೃತಿಯ ಮೇಲೆ ಬಹಳಷ್ಟು ತೊಂದರೆ ತಾಪತ್ರಯಗಳು ಆಗುತ್ತವೆ. ಭೂಕಂಪಗಳು ಆಗಿರಬಹುದು, ಅಥವಾ ಸುನಾಮಿ, ಚಂಡಮಾರುತ, ಜಲದಿಂದ ತೊಂದರೆ, ನೀರಿನಿಂದ ತೊಂದರೆ ತಾಪತ್ರಯಗಳನ್ನು ನಾವು ಅನುಭವಿಸಲೇಬೇಕಾಗುತ್ತದೆ. ಈ ಸೂರ್ಯ ಕನ್ಯಾ ರಾಶಿಯಲ್ಲಿ ಸಂಚಾರವನ್ನು ಮಾಡುವ ಸಮಯದಲ್ಲಿ ಬಹಳಷ್ಟು ತೊಂದರೆಯನ್ನು ಸಹ ಅನುಭವಿಸಬೇಕಾಗುತ್ತದೆ.
ಬಹಳಷ್ಟು ರೈತರು ಭೂಮಿಯನ್ನು ನಂಬಿ ಕೃಷಿ ಚಟುವಟಿಕೆಯನ್ನು ಮಾಡಿ ಜೀವನವನ್ನು ಮಾಡುವವರಿಗೆ ಸಕಾಲಕ್ಕೆ ಮಳೆ ಬೆಲೆ ಬರುವುದಿಲ್ಲ, ವ್ಯವಸ್ಥಿತವಾಗಿ ಬೆಳೆ ಬರುವುದಿಲ್ಲ. ರೋಗರುಜಿನಗಳು ಭಾದಿಸುತ್ತವೆ ಉಳುಗಳ ಕಾಟ ಪ್ರಾರಂಭವಾಗುತ್ತದೆ ಬೆಳೆಗಳಿಗೆ ನಷ್ಟ ಉಂಟಾಗುತ್ತದೆ.

 

 

 

ಬುಧನ ಕ್ಷೇತ್ರದಲ್ಲಿ ಸೂರ್ಯನು ಸಂಚಾರ ಮಾಡುವುದರಿಂದ ಇಷ್ಟೆಲ್ಲ ಅನಾನುಕೂಲತೆಗಳು ಆಗುತ್ತವೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಬುದ್ಧಿಯ ಮೇಲೆ ದುಷ್ಟ ಪರಿಣಾಮವನ್ನು ಬೀರುತ್ತದೆ. ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ .ಸ್ವತಃ ಸ್ನೇಹಿತರ ಮೇಲೆ ಅನುಮಾನ ಪಡಬಹುದು ಅಥವಾ ಪತಿ ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು, ಅನುಮಾನಗಳು, ದೂರಾಲೋಚನೆಗಳನ್ನು ಮಾಡುವ ಮನಸ್ಸು ಹೆಚ್ಚಾಗಿ ಕಂಡು ಬರುತ್ತದೆ. ಅದು ರಾಜಕೀಯ ಕ್ಷೇತ್ರದಲ್ಲಿ ಇರಬಹುದು ಸಾರ್ವಜನಿಕ , ಉದ್ಯೋಗ, ವ್ಯಾಪಾರ ,ವ್ಯವಹಾರ ಕ್ಷೇತ್ರದಲ್ಲಿ ಮತ್ತು ಬುದ್ದಿ ಶಕ್ತಿಯ ಮೇಲೆ ಪ್ರಭಾವ ಬೀರಿ ಬಹಳಷ್ಟು ತೊಂದರೆ ಅನಾನುಕೂಲಗಳು ಕಂಡು ಬರುತ್ತವೆ. ಆದ್ದರಿಂದ ಪ್ರತಿನಿತ್ಯ ಮಾಡಬೇಕಾದ ಕೆಲಸ ಎಂದರೆ ಅದಕ್ಕೆ ಪರಿಹಾರ ಭಾಗವಾಗಿ

ಪರಿಹಾರ
ಋಷಿ ಮುನಿಪುಂಗರವರು ಈ ರೀತಿ ಹೇಳಿದ್ದಾರೆ. ಪ್ರಾತಃಕಾಲದಲ್ಲಿ ಸೂರ್ಯನಿಗೆ ನಮಸ್ಕಾರ ಮಾಡಬೇಕು, ಮತ್ತು ಭಗವಂತನ ನಾಮಗಳನ್ನು ಪಾರಾಯಣ ಮಾಡಿ ಏಕಾಗ್ರತೆಯಿಂದ ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳಬೇಕು.ಆಗ ನಮ್ಮ ಬುದ್ಧಿಯು ನಮ್ಮ ಮನಸ್ಸಿನ ಹಿಡಿತದಲ್ಲಿ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top