ದೇವರು

ದ್ವಾರಾಕಾ ಹಾಗೂ ಶ್ರೀಕೃಷ್ಣನ ಜನನ ಕಟ್ಟು ಕಥೆಯಲ್ಲ,ಇಲ್ಲಿದೆ ಆ ಕುರಿತ ಬೆಚ್ಚಿ ಬಿಳಿಸೋ ಸತ್ಯ ಸಂಗತಿ

ಶ್ರೀ ಕೃಷ್ಣ ದ್ವಾಪರಯುಗದಲ್ಲಿಯೇ ಇದ್ದಿದ್ದು,ಈ ಭೂಮಿಯ ಮೇಲೆ ಅವತರಿಸಿದ್ದು ಸುಳ್ಳಲ್ಲ,ಹಾಗೆ ದ್ವಾರಾಕಾ ನಗರ ಇದ್ದಿದ್ದು ಸುಳ್ಳಲ್ಲ, ಇದಕ್ಕೆ ಸಾಕ್ಷಿ ಎಂಬಂತೆ ಅನೇಕ ಕುರುಹುಗಳನ್ನು ಇಂದು ನಾವು ಅರಭೀ ಸಮುದ್ರದ ಅಳದಲ್ಲಿ ನೋಡಬಹುದು.ಇದನ್ನು ಕಂಡು ಹಿಡಿದವರು ನಮ್ಮ ಕರ್ನಾಟಕದ ಹೆಮ್ಮೆಯ ವಿಜ್ಞಾನಿ.
ಕೃಷ್ಣ ಮಹಾಭಾರತದ ಪಾತ್ರವಲ್ಲ.ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ ಈಗಲೂ ಇದ್ದಾನೆ ಎಂಬುದಕ್ಕೆ ಇಂದಿಗೂ ಅನೇಕ ಸಾಕ್ಷಿಗಳಿವೆ. ಸಾಕ್ಷಾತ್ ಶ್ರೀಕೃಷ್ಣ ಆಳಿದ ದ್ವಾರಕೆ ನಿಜವಾಗಿಯೂ ಇತ್ತು ಎನ್ನುವ ಸಂಗತಿಯನ್ನು ನೀವು ನಂಬಲೇಬೇಕು. ಅದು ಹೇಗೆ ? ಎಂದರೆ ಬನ್ನಿ ತಿಳಿದುಕೊಳ್ಳೋಣ ದ್ವಾರಕೆಯ ಬಗ್ಗೆ.

ಕೃಷ್ಣನ ಅವತಾರಕ್ಕೆ ಇದೆ ಒಂದು ದೊಡ್ಡ ಸಾಕ್ಷಿ .ಸಮುದ್ರದಾಳದಲ್ಲಿ ದ್ವಾರಕ ನಗರದ ಕುರುಹು ಇದೆ.ಕೃಷ್ಣನು ಇದ್ದಿದ್ದು ಸುಳ್ಳಲ್ಲ, ದ್ವಾರಕೆ ಇದ್ದಿದ್ದು ಕಟ್ಟು ಸತ್ಯ ಇದು ಕಥೆಯಲ್ಲ. ಅದೊಂದು ಅದ್ಭುತ ನಗರ. ಸಮುದ್ರದಿಂದ ಸುತ್ತುವರೆದ ರಾಜಧಾನಿ. ಸುತ್ತಲೂ ಎತ್ತರದ ಕೋಟೆ, ಕೊತ್ತಲಗಳಿಂದ ನಿರ್ಮಾಣವಾದ ಸುಂದರವಾದ ಕ್ಷೇತ್ರ .ವಿಶ್ವಕರ್ಮನಿಂದ ನಿರ್ಮಾಣಗೊಂಡ ಆಕರ್ಷಕವಾದ ಶ್ರೀಕೃಷ್ಣನ ಸುಂದರವಾದ ದ್ವಾರಕೆ .
ಜರಾಸಂಧನೆಂಬ ರಾಕ್ಷಸನ ದಾಳಿಯಿಂದ ಮಥುರಾ ನಗರದ ಜನರನ್ನು ಪಾರು ಮಾಡುವ ಸಲುವಾಗಿ ಶ್ರೀ ಕೃಷ್ಣ ಪರಮಾತ್ಮ ಒಂದು ಸುಸಜ್ಜಿತವಾದ ನಗರವನ್ನು ನಿರ್ಮಾಣ ಮಾಡುತ್ತಾನೆ. ದೇವಶಿಲ್ಪಿ, ವಿಶ್ವಕರ್ಮನಿಂದ ನಿರ್ಮಾಣವಾದ ಪ್ರಪಂಚ.ಎಂದು ಕಂಡು ಕೇಳರಿಯದಂತಹ ಒಂದು ಅದ್ಭುತ ನಗರವನ್ನು ಶ್ರೀ ಕೃಷ್ಣ ಕಟ್ಟಿಸುತ್ತಾನೆ .ಅದೇ ಸಮುದ್ರದಿಂದ ಆವೃತವಾಗಿರುವ ವಿಸ್ಮಯಕಾರಿ ನಗರ ದ್ವಾರಕ. ಮಹಾಭಾರತದ ಸಭಾಪರ್ವದಲ್ಲಿ ಭಾಗವತ ಮತ್ತು ಪ್ರಾಚೀನ ಗ್ರಂಥಗಳಲ್ಲಿ ದ್ವಾರಕೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ.

 

 

 

ಸುಂದರ ಶ್ರೀಕೃಷ್ಣ ದ್ವಾರಕೆಯಲ್ಲಿ ಇದ್ದುಕೊಂಡು, ಯಾದವ ರಾಜ್ಯವನ್ನು ಆಳಿದ ,ಈ ಸುಂದರ ಸುಭದ್ರವಾದ ನಗರಕ್ಕೆ ಅನೇಕ ದ್ವಾರಗಳಿವೆ. ಈ ನಗರಕ್ಕೆ ಆದ್ದರಿಂದಲೇ ದ್ವಾರಕೆ ಎಂಬ ಹೆಸರು ಬಂದಿದೆ. ದ್ವಾರಕಾನಗರ ಅತ್ಯಂತ ಸುಂದರವಾಗಿದ್ದು, ಮಹಾನಗರದಲ್ಲಿ ಅಂದವಾದ ಹೂ ತೋಟಗಳು, ಬಣ್ಣ ಬಣ್ಣದ ಕಾರಂಜಿಗಳು ಕೂಡ ಇದ್ದವು.
ಇಂತಹ ಸುಂದರವಾದ ನಗರವನ್ನು ಕೃಷ್ಣ ಯಾವಾಗ ಈ ರಾಜ್ಯವನ್ನು ಆಳಿದ್ದ ? ಮಾನವ ರೂಪದಲ್ಲಿ ಜನಿಸಿದ್ದ ಸಾಕ್ಷಾತ್ ವಿಷ್ಣುವಿನ ಅವತಾರವೇ ಶ್ರೀ ಕೃಷ್ಣ ಎನ್ನುವುದು ಇಂದೂ ಧರ್ಮದವರ ನಂಬಿಕೆ . ದೇವರ ಸ್ವರೂಪವೇ ಆಗಿದ್ದ ಕೃಷ್ಣ ಮತ್ತು ಕೃಷ್ಣನ ನಗರಿ ಹೇಗೆ ನಾಶವಾಯಿತು ? ಎನ್ನುವುದು ಯಕ್ಷ ಪ್ರಶ್ನೆ ?ಈ ಪ್ರಶ್ನೆಯಿಂದಾಗಿ ಮಹಾಭಾರತದಲ್ಲಿ ತಿಳಿಸಿರುವ ವಿಷಯಗಳಲ್ಲಿ ಸತ್ಯಾಂಶವಿದೆ ಎನ್ನುವ ಜಿಜ್ಞಾಸೆ ಮೂಡುತ್ತದೆ. ಇದಕ್ಕೆ ಉತ್ತರ ಗುಜರಾತ ಸಮುದ್ರ ತೀರದಲ್ಲಿ ನಡೆದ ಸಂಶೋಧನೆ .

ಮಹಾಭಾರತದಲ್ಲಿ ಉಲ್ಲೇಖವಾಗಿರುವ ದ್ವಾರಕೆ ಇಂದಿಗೂ ಇದೆ. ಶ್ರೀಕೃಷ್ಣನ ದ್ವಾರಕೆ ಕಂಡು ಹಿಡಿದವರು ನಮ್ಮ ಕನ್ನಡದ ಖ್ಯಾತ ಪುರಾತತ್ವ ತಜ್ಞ ಡಾಕ್ಟರ್ ಎಸ್, ಆರ್ ರಾವ್. ಈಗಿರುವ ಗುಜರಾತ್ ನ ಸಮುದ್ರ ತೀರದಲ್ಲಿ ದೊರೆತಿವೆ ದ್ವಾರಕೆಯ ಅವಶೇಷಗಳು. ಮಹಾಭಾರತ, ಭಾಗವತ ಸೇರಿದಂತೆ ಇನ್ನಿತರೆ ಹಿಂದೂ ಧರ್ಮಗ್ರಂಥಗಳು ಸೇರಿದಂತೆ ಕೃಷ್ಣನ ಕರ್ಮಭೂಮಿ ದ್ವಾರಕ ನಗರದ ಶ್ರೀಮಂತಿಕೆಯನ್ನು ವರ್ಣಿಸಲಾಗಿದೆ .
ಇಲ್ಲಿರುವ ಪಟ್ಟಣಗಳು ,ಸ್ಮಾರಕಗಳು ,ಪ್ರಾಂತ್ಯಗಳು ಭೂ ಸ್ವರೂಪಗಳ ಬಗ್ಗೆ ವಿವರಿಸಲಾಗಿದೆ. ಇವೆಲ್ಲ ಕಥೆಗಳು ನಿಖರ ಮತ್ತು ಸತ್ಯದಿಂದ ಕೂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಅವಶೇಷಗಳು ದೊರೆತಿವೆ. ದ್ವಾರಕಾ ನಗರದಲ್ಲಿ ಪ್ರಜೆಗಳ ಬಳಸುತ್ತಿದ್ದ ಪಾತ್ರೆಗಳು, ಚಿನ್ನ, ಬೆಳ್ಳಿಯ ಆಭರಣವಿರುವ ಮುದ್ರೆಗಳು, ಹೀಗೆ ಅಸಂಖ್ಯಾತವಾಗಿ ದೊರೆತ ಅವಶೇಷಗಳನ್ನು ನೋಡಿ ಜನರಷ್ಟೇ ಯಾಕೆ ವಿಜ್ಞಾನಿಗಳು ಮತ್ತು ಸಂಶೋಧನಾಕಾರರು ಕೂಡ ದಂಗಾಗಿ ಹೋಗಿದ್ದಾರೆ.

 

ಪ್ರಸ್ತುತ ಶ್ರೀಕೃಷ್ಣನ ದ್ವಾರಕೆ ಎಂದು ಕರೆಯಲ್ಪಡುವ ಪಟ್ಟಣ ಗುಜರಾತ್ ನ ಅರಬೀ ಸಮುದ್ರದ ತೀರದಲ್ಲಿದೆ. ಗುಜರಾತ್ ನಲ್ಲಿ ಸುಮಾರು ಹನ್ನೊಂದು ವರ್ಷಗಳ ಕಾಲ ತಪಸ್ಸಿನಂತೆ ಉತ್ಖನನ ನಡೆಸಿದ ಕಾಲವೇ ಶ್ರೀಕೃಷ್ಣನ ದ್ವಾರಕ ನಗರ ಪತ್ತೆಯಾಯಿತು. ಮಹಾಭಾರತದ ಕಾಲದಲ್ಲಿದ್ದ ದ್ವಾರಕಾನಗರ ಇದ್ದದ್ದು ಸುಳ್ಳಲ್ಲ ಎನ್ನುವುದು ಜಗತ್ತಿಗೆ ಗೊತ್ತಾದದ್ದು ನಮ್ಮ ಕರ್ನಾಟಕದ ಹೆಮ್ಮೆಯ ಪುರಾತತ್ವ ತಜ್ಞ ಡಾಕ್ಟರ್ ಎಸ್, ಆರ್ ರಾವ್ ಅವರ ಮುಖಾಂತರ.
ಕೆಲವರು ಮಹಾಭಾರತ ಮತ್ತು ಕೃಷ್ಣನನ್ನು ಕಥೆಗಳು ಕೇವಲ ಕಾಲ್ಪನಿಕ ಎಂದು ಭಾವಿಸುತ್ತಾರೆ. ಆದರೆ ದ್ವಾಪರಯುಗದಲ್ಲಿ ದ್ವಾರಕ ಇದ್ದದ್ದು ನಿಜ ಎಂಬುದು ಸಂಶೋಧನೆಯಿಂದ ತಿಳಿದು ಬರುತ್ತದೆ. ಕೃಷ್ಣನ ಕನಸಿನ ಅತ್ಯದ್ಭುತವಾದ ದ್ವಾರಕೆ ಇಂದಿಗೂ ಸಾಗರದಾಳದಲ್ಲಿ ಇದೆ ಎಂಬುದನ್ನು ವಿಜ್ಞಾನಿಗಳು ಸಾಕ್ಷಿ ಸಮೇತ ಸ್ಪಷ್ಟ ಉತ್ತರ ನೀಡಿದ್ದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top