ಮನೋರಂಜನೆ

ರಕ್ಷಿತ್ ವಿಚಾರವಾಗಿ ಕೊನೆಗೂ ಮೌನಮುರಿದ ರಶ್ಮಿಕಾ ಮಂದಣ್ಣ.

ಸ್ಯಾಂಡಲ್ ವುಡ್’ನಲ್ಲಿ ಸದ್ಯದ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿಯ ನಡುವಿನ ಸಂಭಂದ ಮುರಿದುಬಿದ್ದಿದೆ, ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ವೃತ್ತಿ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ..” ಎಂಬಂತ ಸುದ್ದಿಗಳು ಕಳೆದೊಂದು ವಾರದಿಂದ ಕನ್ನಡ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಹರಿದಾಡತೊಡಗಿದೆ. ಆದರೆ ಈ ಬಗ್ಗೆ ಸೂಪರ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವ್ರತ ಕೈಗೊಂಡಿದ್ದಳು..

 

 

ಆದರೀಗ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ರಶ್ಮಿಕಾ ಹೇಳಿದ್ದಿಷ್ಟು:
“ನಾನು ಇಷ್ಟು ದಿನ ಸೈಲೆಂಟ್ ಆಗಿ ಇರುವುದಕ್ಕೆ ನನ್ನನ್ನು ಕ್ಷಮಿಸಿ, ನನ್ನ ಬಗ್ಗೆ ಸಾಕಷ್ಟು ಕಥೆಗಳು, ಲೇಖನಗಳು, ಕಾಮೆಂಟ್ಸ್ ಮತ್ತು ಟ್ರೋಲ್ಸ್ ಬರುತ್ತಿವೆ. ಇದರಿದ ನನಗೆ ತುಂಬಾ ಬೇಸರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವ್ಯಕ್ತಿತ್ವವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ ಈ ಬಗ್ಗೆ ನಿಮ್ಮನ್ನು ದೂರುವುದಿಲ್ಲ. ಆದರೆ ಒಂದನ್ನು ನೆನಪಿಟ್ಟುಕೊಳ್ಳಿ ನಾಣ್ಯಕ್ಕೆ 2 ಮುಖಗಳಿರುವಂತೆ, ಪ್ರತಿಯೊಂದು ಕಥೆಗೂ, ವಿಚಾರಗಳಿಗೂ ಎರಡು ಆಯಾಮಗಳಿರುತ್ತವೆ. ಒಂದು ದೃಷ್ಟಿಕೋನದಿಂದ ಮಾತ್ರ ಇದು ಸರಿ, ಇದು ತಪ್ಪು ಎಂಬ ಭಾವನೆಗೆ ಬರಬೇಡಿ.

ನಾನು ಇಲ್ಲಿ ಯಾವುದನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ಆದ್ರೆ, ರಕ್ಷಿತ್ ಆಗಲಿ, ನಾನಾಗಲಿ ಅಥವಾ ಚಿತ್ರರಂಗದಲ್ಲಿ ಯಾರೇ ಆಗಲಿ ಇದನ್ನೆಲ್ಲ ಅನುಭವಿಸಬಾರದು ಎಂಬುದನ್ನಷ್ಟೇ ನಾನು ಹೇಳಲು ಬಯಸುವೆ.. ನಾನು ಕನ್ನಡ ಚಿತ್ರಗಳಲ್ಲೇ ಮುಂದುವರೆಯುತ್ತೇನೆ. ಹಾಗೆಯೇ ಅದು ಯಾವುದೇ ಭಾಷೆಯಾಗಲಿ, ಯಾವುದೇ ಚಿತ್ರೋದ್ಯಮವಾಗಲಿ, ಅತ್ಯುತ್ತಮವಾದದ್ದನ್ನೇ ನೀಡುತ್ತೇನೆ” ಎಂದು ರಶ್ಮಿಕಾ ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top