ಅರೋಗ್ಯ

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ಈ ಮನೆ ಮದ್ದುಗಳು ಮತ್ತೆ ಆಹಾರ ಪದ್ಧತಿ ಫಾಲೋ ಮಾಡೋದು ಮರೀಬೇಡಿ .

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆಗೆ ಕೆಲವು ಮನೆ ಮದ್ದುಗಳು ಮತ್ತೆ ಆಹಾರ ಪದ್ಧತಿಗಳು ಹೀಗಿವೆ

ಮಜ್ಜಿಗೆ:ಮಜ್ಜಿಗೆ ತುಂಬಾ ಒಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

ಮೂಲಂಗಿ:

 

 

 

ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆಗೆ ತುಂಬಾ ಒಳ್ಳೆಯದು.

ಆಪಲ್ ಸೈಡರ್ ವಿನೆಗರ್:ಒಂದು ಚಮಚ ಆಪಲ್ ಸೈಡರ್ ವಿನೆಗರ್ ರನ್ನು ಹತ್ತಿಯಲ್ಲಿ ಅದ್ದಿ ನೋವಿರುವ ಜಾಗಕ್ಕೆ ಒತ್ತಿ.

ನಿಂಬೆ ಹಣ್ಣಿನ ರಸ:ಶುಂಠಿ ರಸವನ್ನು ನಿಂಬೆ ಹಣ್ಣಿನ ಪಾನಕಕ್ಕೆ ಹಾಕಿ ಕುಡಿಯುವುದು ಒಳ್ಳೆಯದು.

ಬಿಳೀಎಳ್ಳು:ಮೂಲವ್ಯಾಧಿಯಿಂದ ಬಳಲುತ್ತಿರುವವರು ಬಿಳೀಎಳ್ಳು 15 ಗ್ರಾಂ, ಕಲ್ಲುಸಕ್ಕರೆ 15 ಗ್ರಾಂ, ಹಾಗು ಹಸುವಿನ ಬೆಣ್ಣೆ 15 ಗ್ರಾಂ ಸೇರಿಸಿ ಅರೆದು, ನಿತ್ಯ ಬೆಳಗ್ಗೆ ಮಾತ್ರ 3 ವಾರ ಸೇವಿಸುವುದರಿಂದ ಸಾಮಾನ್ಯ ಮೂಲವ್ಯಾಧಿಯಲ್ಲದೆ ರಕ್ತ ಮೂಲವ್ಯಾಧಿಯು ಸಹ ನಿವಾರಣೆಯಾಗುತ್ತದೆ.

ಜೀರಿಗೆಪ್ರತೀದಿನ ಒಂದು ಲೋಟ ಜೀರಿಗೆ ನೀರು ಕುಡಿಯಿರಿ. ಅದಕ್ಕೆ ಜೀರಿಗೆಯನ್ನು ರೋಸ್ಟ್ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ ಅದನ್ನು ಜೀರಿಗೆ ಕಲೆಸಿ ಕುಡಿದರೆ ಒಳ್ಳೆಯದು.

ವಿಭೂತಿ ಎಲೆಗಳು :ವಿಭೂತಿ ಎಲೆಗಳನ್ನು ಹರಳೆಣ್ಣೆಯಲ್ಲಿ ಸುಟ್ಟು ಆರಿದ ಮೇಲೆ ಸೋಂಕಿರುವ ಜಾಗಕ್ಕೆ ಹಚ್ಚಬೇಕು .

ಬಾಳೆ ಹಣ್ಣು:ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

ತುಳಸೀ ಬೀಜದ ಪುಡಿ:ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

ಲೋಳೆರಸ:

 

 

 

ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು

ಹಾಗಾಲಕಾಯಿ:ಹಾಗಾಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top