ಮನೋರಂಜನೆ

ದಾದಾ ಬರ್ತಡೇ ‘ಪಡ್ಡೆಹುಲಿ’ ಕೊಡುಗೆ- ‘ವಿಷ್ಣು ರ‍್ಯಾಪ್ ಸಾಂಗ್’ ನೋಡುದ್ರಾ?

ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರಿಂದ ಹಿಡಿದು ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರೋ ಕಲಾವಿದರಿಗೂ ಫೆವರೇಟ್ ಹೀರೊ ಅಂದ್ರೆ ಅದು ಸಾಹಸಸಿಂಹ ವಿಷ್ಣುದಾದ.. ಅಂತೆಯೇ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರಿಗೂ ದಾದಾ ಕಂಡ್ರೆ ಅತೀವ ಪ್ರೀತಿ. ಚಿಕ್ಕಂದಿನಿಂದಲೂ ‘ವಿಷ್ಣುಭಕ್ತ’ನಾಗಿರೋ ಶ್ರೇಯಸ್ ತಾವು ನಟಿಸುತ್ತಿರುವ ಮೊದಲ ಚಿತ್ರ ‘ಪಡ್ಡೆಹುಲಿ’ ವಿಷ್ಣು ಅಭಿಮಾನಿಯ ಪಾತ್ರ ಮಾಡುತ್ತಿದ್ದಾರೆ.. ಹೀಗಾಗಿ ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯಿಂದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

 

 

ಪಡ್ಡೆಹುಲಿ ಚಿತ್ರತಂಡ ವಿಷ್ಣುದಾದನಿಗಾಗಿ ಹಾಡೊಂದನ್ನು ಸಮರ್ಪಿಸಿದ್ದು ‘ಯಜಮಾನ’ನ ಬರ್ತಡೇ ವಿಶೇಷವಾಗಿ ಇಂದು ಬಿಡುಗಡೆ ಮಾಡಿದೆ. ರ‍್ಯಾಪ್ ಶೈಲಿಯ ಹಾಡು ಇದಾಗಿದ್ದು ಹಾಡಲ್ಲಿ ಡಾ.ವಿಷ್ಣುವಿನ ಗುಣಗಾನ ಮಾಡಲಾಗಿದೆ.. ಕಾರ್ತಿಕ್ ಈ ಗೀತೆಗೆ ಸಾಹಿತ್ಯ ಬರೆದಿದ್ದು ಹಾಡಿನಲ್ಲಿ ಥೇಟು ನಾಗರಹಾವು ರಾಮಾಚಾರಿಯ ಗೆಟಪ್ಪಿನಲ್ಲಿ ಶ್ರೇಯಸ್ ಕಾಣಿಸಿಕೊಂಡಿರೆ.. ಹಾಡಿನ ಸ್ಪೀಡಿಗೆ ತಕ್ಕಂತೆ ಡ್ಯಾನ್ಸ್ ಕೂಡ ಮನೋಹರವಾಗಿ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡನ್ನು ಕೇಳಿದ ವಿಷ್ಣು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

 

ವಿಡಿಯೋ ಇಲ್ಲಿ ನೋಡಿ👇👇👇

 

ಅಂದಹಾಗೆ ಪಡ್ಡೆಹುಲಿ ಚಿತ್ರವನ್ನು ತೇಜಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಗುರುದೇಶಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಅವರ ಛಾಯಾಗ್ರಹಣವಿದೆ. ನಿಶ್ ವಿಕಾ ನಾಯ್ಡು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 25 ವರ್ಷದ ನಂತರ ರವಿಚಂದ್ರನ್ ಹಾಗೂ ಸುಧಾರಾಣಿ ಜೋಡಿಯಲ್ಲಿ ಮತ್ತೆ ಚಿತ್ರದಲ್ಲಿ ನೋಡಬಹುದಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top