ಸಮಾಚಾರ

ಫ್ಯಾಶನ್ ಲೋಕಕ್ಕೆ ಪಾದಾರ್ಪಣೆ ಮಾಡಲು ರೆಡಿ ಅಂದ್ಲು ವಿಶ್ವದ ಅತಿ ಸುಂದರ ಬಾಲಕಿ

ತನ್ನ ನಾಲ್ಕನೇ ವಯಸ್ಸಿಗೆ ಜಗಮಗಿಸುವ ಕಲರ್ ಫುಲ್ ರಂಗಿನ ದುನಿಯಾ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಛಾಪು ಮೂಡಿಸಿ “ವರ್ಲ್ಡ್ಸ್ ಮೋಸ್ಟ್ ಬ್ಯೂಟಿಫುಲ್ ಗರ್ಲ್” ಪಟ್ಟ ಗಿಟ್ಟಿಸಿಕೊಂಡಿದ್ದ ಈಗ ಜವಳಿ ಉದ್ಯಮಕ್ಕೆ ಕಾಲಿಡಲು ಮುಂದಾಗಿದ್ದಾಳೆ ,ಅತಿ ಬೇಗ ತನ್ನ ನೂತನ ಬ್ರ್ಯಾಂಡ್ ಅನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದ್ದಾಳೆ.

 

 

 

ಈ ಮುದ್ದು ಹುಡುಗಿ ಬೇರೆ ಯಾರು ಅಲ್ಲ ಆಕೆಯ ಹೆಸರು “ತೈಲೇನ್ ಬ್ಲಾಂಡ್”, ತೈಲೇನ್ ಬ್ಲಾಂಡ್ ಫುಟ್ಬಾಲ್ ಆಟಗಾರ ಪ್ಯಾಟ್ರಿಕ್ ಬ್ಲಾಂಡ್ ಹಾಗೂ ವಿನ್ಯಾಸಕಿ ವರೋನಿಕ ಅವರ ಮುದ್ದಿನ ಮಗಳು, ತನ್ನ ನಾಲ್ಕನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕ್ಯಾಟ್ ವಾಕ್ ಮಾಡಿ,ಆರನೇ ವಯಸ್ಸಿಗೆ ವೇಗ್ ಎನ್ಫ್ಯಾಂಟ್ ಮ್ಯಾಗಜೀನ್‌ ನ ಕವರ್ ಪೇಜ್ ಗೆ ಫೋಸ್ ನೀಡುವ ಮೂಲಕ, ವಿಶ್ವದ ಅತಿ ಸುಂದರ ಬಾಲಕಿ ಎನ್ನುವ ಪ್ರಶಂಸೆಗೆ ಪಾತ್ರವಾಗಿದ್ದ ಆಗಿನ ಪುಟ್ಟ ಮಾಡೆಲ್ಗೆ ಈಗ 17 ವರುಷ ,ಈಗ ತನ್ನದೇ ಹೊಸ ಬ್ರ್ಯಾಂಡ್ ಆರಂಭಿಸುವುದಾಗಿ ತನ್ನ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಹೇಳಿಕೊಂಡಿದ್ದಾಳೆ.

ಈ ಚಿಕ್ಕ ವಯಸ್ಸಿಗೆ ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ 2.4 ಮಿಲಿಯನ್ ಫಾಲೋವರ್ಸ್ ನ್ನು ಹೊಂದಿದ್ದಾಳೆ ಈ ಪೋರಿ,ಹೆವನ್ ಮೇ ಕ್ಲಾಥಿಂಗ್” ಎನ್ನುವ ಬ್ರ್ಯಾಂಡ್ ನ್ನು ಶೀಘ್ರದಲ್ಲಿಯೇ ನಿಮ್ಮ ಮುಂದೆ ತರಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.ತಾನು ಮಾಡಿರುವ ವಿಶಿಷ್ಠ ಡಿಸೈನ್ ಗಳು ಕೆಲವೇ ದಿನಗಳಲ್ಲಿ ತೋರಿಸಲಿದ್ದೇನೆ ಎಂದು ಹೇಳಿದ್ದಾಳೆ , ತೈಲನ್ ನ ಈ ಪೋಸ್ಟ್ ಗೆ ಸುಮಾರು 90 ಸಾವಿರ ಲೈಕ್ ಗಳು ಬಂದಿದ್ದು, ಅನೇಕರು ನೂತನ ಬ್ರ್ಯಾಂಡ್ ಗಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಗಳ ಸುರಿಮಳೆ ಬಂದಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top