ಅರೋಗ್ಯ

ಅದ್ಬುತವಾದ ಚರ್ಮವನ್ನು ಪಡೆಯಲು ಐಸ್ ಕ್ಯೂಬ್ ಗಳನ್ನು ಬಳಸಿ ಈ 5 ಪ್ರಯೋಜನಗಳನ್ನು ಪಡೆಯಿರಿ .

ದುಬಾರಿ ಉತ್ಪನ್ನಗಳನ್ನು ಹಚ್ಚಿ ಮುಖ ಹಾಲು ಮಾಡಿಕೊಳ್ಳುವಬದಲು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಬಹುಪಯೋಗಿ ಮಂಜು ಗಡ್ಡೆಯ ಚಿಕಿತ್ಸೆಗಳು

ನಿಮಗಾಗಿ .

 

 

 

ಈ ಅತ್ಯಂತ ಕಠಿಣ ಋತುವಿನಲ್ಲಿ ನಿಮ್ಮ ಸುಂದರ ಚರ್ಮ ವನ್ನು ಸೂರ್ಯನ ವಿಕಿರಣದಿಂದ ಉಳಿಸಿಕೊಳ್ಳಲು ನೀವು ದುಬಾರಿ ಉತ್ಪನ್ನಗಳ ಶ್ರೇಣಿಯನ್ನು ಹೊಂದಿರಬಹುದಾದರೂ, ಐಸ್ ಕ್ಯೂಬ್ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮಾಡಲು ಸಹಾಯ ಮಾಡುತ್ತದೆ ,ಐಸ್ ನಿಮ್ಮ ಚರ್ಮದಿಂದ ಮೊಡವೆ ಮುಕ್ತ ಮಾಡಲು ಮತ್ತು ಸನ್ ಟ್ಯಾನ್ ಹೋಗಲಾಡಿಸಲು ಸಹಾಯ ಮಾಡುವ ಒಂದು ಅತ್ಯುತ್ತಮ ಆಯ್ಕೆಯಾಗಿದೆ.ನಮಗೆ ಈಗಾಗಲೇ ಗೊತ್ತಿರುವ ಹಾಗೆ ಹೆಚ್ಚು ನೀರನ್ನು ಸೇವಿಸಿದಷ್ಟು ನಮ್ಮ ಚರ್ಮ ಆರೋಗ್ಯಕಾರಿಯಾಗಿರುತ್ತದೆ .ನಿಯಮಿತವಾಗಿ ಸರಿಯಾದ ನೀರಿನ ಸೇವನೆ ಚರ್ಮದ ಆರೋಗ್ಯಕ್ಕೆ ಪ್ರಮುಖ ವಸ್ತುವಾಗಿದೆ .

ಕಣ್ಣಿನ ಕಪ್ಪು ವರ್ತುಲವನ್ನು ಕಡಿಮೆಗೊಳಿಸುತ್ತದೆ:ಹಾಗೆಯೇ ಮಂಜುಗಡ್ಡೆಯನ್ನು ಕಣ್ಣಿನ ಮೇಲೆ ಇರಿಸಿ ಅಥವಾ ಸೌತೆಕಾಯಿ ರಸ ಮತ್ತು ಗುಲಾಬಿ ನೀರಿನ ದ್ರವನ್ನು ಮಿಶ್ರಣಮಾಡಿ ಫ್ರೀಜ್ ನಲ್ಲಿ ಇಡಿ,ಐಸ್ ತುಂಡುಗಳಾಗಿ ಬದಲಾಗುತ್ತವೆ,ಈ ತುಂಡುಗಳನ್ನು ಕಣ್ಣುಗಳ ಅಡಿಯಲ್ಲಿ (ಕಣ್ಣುಗಳ ಕಪ್ಪು ವರ್ತಲ) 15 ನಿಮಿಷ ಇಟ್ಟು ಬಳಿಕ ಶುದ್ಧ ನೀರಿನಿಂದ ತೊಳೆಯಿರಿ ,ವಾರಕ್ಕೆ 3 ಸಲ ಮಾಡಿದರೆ ನೈಸರ್ಗಿಕವಾಗಿ ಕಪ್ಪು ವರ್ತುಲ ಕಡಿಮೆಯಾಗುತ್ತದೆ.

ಮೊಡವೆಗಳನ್ನು ಗುಣಪಡಿಸುವುದು:ನಿಮಗೆ ಯಾವಾಗಲೂ ಖಿನ್ನತೆಯನ್ನು ಉಂಟುಮಾಡುವ ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆಐಸ್ ಕ್ಯೂಬ್ ಗಳು ನಿಮ್ಮ ಚರ್ಮದಿಂದ ತೈಲವನ್ನು ತೆಗೆದು ಮತ್ತು ಮೊಡವೆಗಳಿಂದ ಉಂಟಾದ ಕಲೆಗಳನ್ನು ಗುಣಪಡಿಸುವಲ್ಲಿ ಅದ್ಬುತ ಚಮತ್ಕಾರವನ್ನು ಮಾಡುತ್ತದೆದಿನಕ್ಕೆ ಎರಡು ಬಾರಿ ಉಪಯೋಗಿಸಿ.

ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ:ಚರ್ಮವು ಹೆಚ್ಚಿನ ಸಂಖ್ಯೆಯ ರಂಧ್ರಗಳನ್ನು ಹೊಂದಿರುತ್ತದೆ ಮುಖದ ಮೇಲೆ ಐಸ್ ಅನ್ನು ಉಜ್ಜಿದಾಗ ಚರ್ಮದ ರಂಧ್ರಗಳು ತೆರವುಗೊಳ್ಳುತ್ತದೆ ಮತ್ತು ನಿಮ್ಮ ಚರ್ಮವು ಆರೋಗ್ಯಕರವಾಗಿ, ಪ್ರಕಾಶಮಾನವಾಗಿ ಮತ್ತು ಮೃದುವಾಗಿರುತ್ತದೆ.

ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ:ನಿಮ್ಮ ಚರ್ಮವು ಎಣ್ಣೆಯುಕ್ತವಾಗಿ ನೀವು ಮಂದವಾಗಿ ಕಾಣುತ್ತಿದ್ದೀರಾ? , ಹಾಗಾದರೆ ಚರ್ಮಕ್ಕೆ ನಿಯಮಿತವಾಗಿ ಐಸ್ ಹಚ್ಚಿ ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಬೆಳ್ಳಗಾಗಿಸುತ್ತದೆ.ಅಷ್ಟೇ ಅಲ್ಲದೆ ರಕ್ತ ಪರಿಚಲನೆ ಸುಧಾರಿಸುವುದರಿಂದ ಪ್ರಕಾಶಮಾನವಾದ ಚರ್ಮ ನಿಮ್ಮದಾಗುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ:ಚರ್ಮಕ್ಕೆ ಐಸ್ ಆನ್ನು ಉಜ್ಜುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಮುಖ್ಯವಾಗಿ ಕಡಿಮೆ ರಕ್ತ ಪರಿಚಲನೆಯನ್ನು ಹೊಂದಿರುವ ಮುಖದ ಜೀವಕೋಶಗಳು ಪುನರುತ್ತೇಜನಗೊಂಡು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.ಆದ್ದರಿಂದ ಸಾಧ್ಯವಾದಾಗಲೆಲ್ಲ ಐಸ್ ಕ್ಯೂಬ್ ಬಳಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top