ಮನೋರಂಜನೆ

ಮದುವೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಮುಖಕ್ಕೆ ಹೊಡೆದಾಗೆ ಉತ್ತರಿಸಿದ ದೀಪಿಕಾ.

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಮದುವೆ ಆಗ್ತಾರಂತೆ ಅನ್ನೋ ಸುದ್ದಿ ಹುಟ್ಟಿಕೊಂಡು ವರ್ಷಗಳೇ ಕಳೆದಿವೆ..ಈ ಹಿಂದೆ ನಟ ರಣಬೀರ್ ಕಪೂರ್, ಮಹೇಂದ್ರ ಸಿಂಗ್ ಧೋನಿ, ವಿಜಯ್ ಮಲ್ಯನ ಮಗ ಸಿದ್ದಾರ್ಥ್ ಮಲ್ಯ ಸೇರಿದಂತ ಅನೇಕರ ಜೊತೆ ದೀಪಿಕಾಳ ಹೆಸರು ತಳುಕು ಹಾಕಿಕೊಂಡಿದ್ದು ಈಗ ಇತಿಹಾಸ.. ಈ ಎಲ್ಲಾ ಗಾಳಿಸುದ್ದಿಗಳು ಮುಗಿದ ಮೇಲೆ ದೀಪಿಕಾ ಮದುವೆ ಸುದ್ದಿ ಮತ್ತೆ ಸದ್ದು ಮಾಡುತ್ತಿರುವುದು ರಣಬೀರ್ ಸಿಂಗ್ ಕಾರಣದಿಂದಾಗಿ..

ಬಾಲಿವುಡ್‌ನ ಸದ್ಯದ ಹಾಟೆಸ್ಟ್ ಜೋಡಿ ಎಂದೇ ಹೆಸರಾಗಿರುವವರು ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಇವರಿಬ್ಬರೂ ಕೂಡಾ ತಮ್ಮ ಬಗ್ಗೆ ಹರಿದಾಡೋ ಎಲ್ಲ ಸುದ್ದಿ ರೂಮರುಗಳನ್ನೂ ಸುಳ್ಳು ಅನ್ನೋ ಕ್ಲಾರಿಫಿಕೇಷನ್ ಕೊಡುತ್ತಾ ಒಟ್ಟೊಟ್ಟಿಗೇ ಓಡಾಡಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಅವರ ಈ ಚಲನವಲನಗಳ ಮೇಲೆ ಖುದ್ದು ಅಭಿಮಾನಿಗಳೇ ಗಮನವಿಟ್ಟು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲವನ್ನೂ ಜಾಹೀರು ಮಾಡುತ್ತಿದ್ದಾರೆ.. ಆದರೀಗ ಡೈರಕ್ಟಾಗಿ ಅವರ ಮದುವೆ ಫಿಕ್ಸ್ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

 

 

ಮದುವೆ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಬಹಿರಂಗಗೊಂಡಿದ್ದರೂ ಅದ್ಯಾಕೋ ದೀಪಿಕಾ ಮಾತ್ರ ಮದುವೆ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಉರಿದುಬೀಳುತ್ತಿದ್ದಾಳೆ. ಇತ್ತೀಚಿಗೆ ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ದೀಪಿಕಾ ಅನೇಕ ವಿಚಾರಗಳನ್ನ ವಿನಿಮಯ ಮಾಡಿಕೊಂಡಳು. ಈ ವೇಳೆ ಮದುವೆ ಯಾವಾಗ ಎಂದು ಪತ್ರಕರ್ತನೊಬ್ಬನು ಕೇಳಿದ ಪ್ರಶ್ನೆ ಕಣ್ಣು ಕೆಂಪಾಗಿಸಿಕೊಂಡ ದೀಪಿಕಾ ಆ ಪ್ರಶ್ನೆಯನ್ನು ಕೇಳಿದ್ದಾತನನ್ನು ಗದರಿದ್ದಾಳೆ.

“ನನ್ನ ಮದುವೆ ಕುರಿತು ನೀವು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಡೋದಿಲ್ಲ. ಮದುವೆ ನನ್ನ ವೈಯಕ್ತಿಕ ವಿಚಾರ.. ಅದನ್ನ ನಿನಗ್ಯಾಕೆ ಹೇಳ್ಬೇಕು.? ಇಂತಹ ಕಾರ್ಯಕ್ರಮದಲ್ಲಿ ಅಂತಹ ಪ್ರಶ್ನೆ ಕೇಳುವುದು ತಪ್ಪು” ಎಂದು ಖಡಕ್ಕಾಗಿ ಹೇಳಿದ್ದಾಳೆ.

ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ ಮದುವೆ ಮುಹೂರ್ತ ಇದೇ ವರ್ಷ ನವೆಂಬರ್​ 10ರಂದು ದೀಪಿಕಾ ಹಾಗೂ ರಣವೀರ್ ಮದುವೆಯಾಗಲಿದ್ದಾರಂತೆ. ದೀಪಿಕಾ ಮತ್ತು ರಣವೀರ್ ಹೆತ್ತವರು ಸೇರಿ ಮದುವೆ ಮಾತುಕತೆ ನಡೆಸಿದ್ದಾರೆ.. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರಂತೆ ದೀಪಿಕಾ ರಣವೀರ್ ಕೂಡ ಮಾಧ್ಯಮಗಳ ಕಾಟದಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ಮದುವೆ ಮಾಡಿಕೊಳ್ಳಲಿದ್ದು ಇಟಲಿಯಲ್ಲೇ ನಡೆಯೋದು ಪಕ್ಕಾ ಆಗಿದೆ. ಈ ವಿಚಾರವನ್ನ ಅಂತಾರಾಷ್ಟ್ರೀಯ ನಟ ಕಬೀರ್ ಬೇಡಿ ಟ್ವಿಟ್ಟರ್​​ನಲ್ಲಿ ಬಹಿರಂಗಪಡಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top