ಮನೋರಂಜನೆ

ಧೃವ ಸರ್ಜಾ ‘ಪೊಗರು’ ಚಿತ್ರಕ್ಕೆ ಚಿತ್ರಕಥೆ ಬರೆದಿರೋ ಆ ಬಹುಭಾಷಾ ಸ್ಟಾರ್ ನಟ ಯಾರು ಗೊತ್ತಾ?

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ..

 

 

ಚಿತ್ರರಂಗಕ್ಕೆ ಕಾಲಿಟ್ಟು ಆರು ವರ್ಷಗಳೇ ಕಳೆದಿದ್ದರೂ ಅವರು ಮಾಡಿರುವುದು ಮಾತ್ರ ಮೂರೇ ಸಿನಿಮಾ, ಅಭಿಮಾನಿಗಳನ್ನು ತುಂಬಾ ಕಾಯಿಸುತ್ತಾರೆ, ಬೇಗ ಬೇಗ ಸಿನಿಮಾ ಕಂಪ್ಲೀಟ್ ಮಾಡೋದಿಲ್ಲ ಎಂಬ ಕಂಪ್ಲೇಂಟುಗಳು ಧ್ರುವ ಮೇಲೆ ಸದಾ ಕೇಳಿಬರುತ್ತಿರುತ್ತವೆ.. ಸಿನಿಮಾ ಆರಂಭಿಸಿ ಒಂದೆರಡು ವರ್ಷಗಳ ಕಾಲ ಎಳೆದಾಡಿ ಅಭಿಮಾನಿಗಳನ್ನು ವರ್ಷಾನುಗಟ್ಟಲೆ ಕಾಯಿಸುತ್ತಾರೆ ಎಂಬುದು ದ್ರುವ ಮೇಲಿರುವ ಗಂಭೀರ ಆರೋಪ. ಅದು ಪೊಗರು ಚಿತ್ರದಲ್ಲೂ ಮುಂದುವರೆಯುತ್ತಿದೆ.. ಚಿತ್ರ ಸೆಟ್ಟೇರಿ ವರ್ಷವೇ ಕಳೆದಿದ್ದರೂ ಇನ್ನೂ ಕಾಲು ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿಲ್ಲ.. ಇಂಥಾ ಚಿತ್ರತಂಡದಿಂದ ಇದೀಗ ಹೊಸ ಮಾಹಿತಿಯೊಂದು ಬಹಿರಂಗಗೊಂಡಿದೆ.

ಪ್ರತಿಯೊಂದು ಚಿತ್ರಕ್ಕೂ ಮುನ್ನ ದೃವಾ ಸರ್ಜಾ ತಮ್ಮ ಮಾವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಅಭಿಪ್ರಾಯ ಕೇಳುವುದು ಸಾಮಾನ್ಯ. ಆದರೆ ಇದೀಗ ಪೊಗರು ಚಿತ್ರಕ್ಕೆ ಅರ್ಜುನ್ ಸರ್ಜಾ ಸ್ವತಃ ತಾವೇ ಚಿತ್ರಕಥೆ ಬರೆದಿದ್ದಾರೆ. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ಕ್ರಿಪ್ಟ್ ಅನ್ನು ಅರ್ಜುನ್ ಸರ್ಜಾ ಅವರು ಬರೆದಿದ್ದಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದರೂ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿಲ್ಲ ಹಾಗಾಗಿ ಎರಡನೇ ಹಂತದ ಚಿತ್ರೀಕರಣವನ್ನು ಆರಂಭಿಸುವುದಕ್ಕೂ ಮುನ್ನವೇ ನಾಯಕಿಯನ್ನು ಅಂತಿಮಗೊಳಿಸಬೇಕಾಗಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿ ದ್ರುವ ಸರ್ಜಾಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಚಿತ್ರಕ್ಕೆ ಬಿ.ಕೆ.ಗಂಗಾಧರ್ ಎಂಬುವವರು ಬಂಡವಾಳ ಹೊಂದುತ್ತಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿದ್ಯಾ.S ಅವರು ಛಾಯಾಗ್ರಹಣವನ್ನು ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top