ಮನೋರಂಜನೆ

ಸ್ಯಾಂಡಲ್​​​ವುಡ್​ನಲ್ಲಿ ಮತ್ತೊಂದು ಮೆಗಾ ಮಲ್ಟಿ ಸ್ಟಾರ್ ಸಿನಿಮಾ: ಒಂದೇ ಚಿತ್ರದಲ್ಲಿ ಶಿವಣ್ಣ-ದರ್ಶನ್ ನಟನೆ.

ಕನ್ನಡ ಚಿತ್ರರಂಗದ ಪಾಲಿಗಿದು ಮಲ್ಟಿ ಸ್ಟಾರ್ ಚಿತ್ರಗಳ ಜಮಾನ.. ಇನ್ನೇನು ಬಿಡುಗಡೆಯಾಗಬೇಕಿರುವ ‘ದಿ ವಿಲನ್’, ‘ಕುರುಕ್ಷೇತ್ರ’, ಮಲ್ಟಿಸ್ಟಾರ್ ಚಿತ್ರಗಳು ಪ್ರೇಕ್ಷಕರಲ್ಲಿ ನಿರೀಕ್ಷೆಯ ಪರ್ವತವನ್ನೇ ಮೂಡಿಸಿವೆ. ಇಂಥಾ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚುಹೆಚ್ಚು ಬರಲಿ, ನೆಚ್ಚಿನ ಸ್ಟಾರ್ ನಟರೆಲ್ಲಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿ ಎಂದು ಎಲ್ಲರ ಅಭಿಮಾನಿಗಳು ಒತ್ತಾಸೆ. ಆದರೆ ಅಂಥಾದ್ದೊಂದು ನಿರೀಕ್ಷೆ ಇದ್ದರೂ ಆದರೆ ಕೆಲವು ಸ್ಟಾರ್ ನಟರ ಕಾಂಬಿನೇಷನ್ ಚಿತ್ರಗಳನ್ನು ತೆರೆ ಮೇಲೆ ತರುವ ಸಾಹಸಕ್ಕೆ ಯಾರು ಕೈಹಾಕಿಲ್ಲ ಉದಾ: ಸುದೀಪ್-ದರ್ಶನ್, ದರ್ಶನ್-ಶಿವಣ್ಣ, ಪುನೀತ್-ಸುದೀಪ್, ದರ್ಶನ್- ಪುನೀತ್ ಇತ್ಯಾದಿ..

 

 

ಸದ್ಯ ಚಂದನವನದಲ್ಲಿ ಟ್ರೆಂಡ್ ಆಗುತ್ತಿರುವ ಮಲ್ಟಿ ಸ್ಟಾರ್ ಸಿನಿಮಾಗಳ ಸಾಲಿಗೆ ಮತ್ತೊಂದು ಮೆಗಾ ಕಾಂಬಿನೇಷನ್ ಸಿನಿಮಾ ಸೇರಿಕೊಳ್ಳುವ ಸಮಯ ಹತ್ತಿರವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡತೊಡಗಿದೆ.. ಅರಸು ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು, ಈ ಕಾಂಬಿನೇಷನ್‍ ಚಿತ್ರವನ್ನು ತೆರೆ ಮೇಲೆ ತರಲು ರೆಡಿಯಾಗಿದ್ದಾರೆ.

“ಶಿವರಾಜ್​​ ಕುಮಾರ್​​ ಹಾಗೂ ದರ್ಶನ್​​ ಇಟ್ಟುಕೊಂಡು ಸಿನಿಮಾ ಮಾಡಿ , ಅದನ್ನು ನಾನೇ ನಿರ್ಮಾಣ ಮಾಡ್ತೀನಿ” ಎಂದು ನಿರ್ಮಾಪಕರೊಬ್ಬರು ಮಹೇಶ್​​ ಬಾಬು ಅವರಿಗೆ ಆಫರ್​​ ನೀಡಿದ್ದಾರೆ. ಈ ಆಫರ್​ ಒಪ್ಪಿಕೊಂಡ ಮಹೇಶ್​ ಬಾಬು ಈಗಾಗ್ಲೆ ದರ್ಶನ್​​ ಅವರನ್ನು ಸಂಪರ್ಕಿಸಿದ್ದು, ​​ ಶಿವಣ್ಣ ಜೊತೆ ಸಿನಿಮಾ ಮಾಡೋಕೆ ದರ್ಶನ್ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಶಿವರಾಜ್​ಕುಮಾರ್​ ಜೊತೆ ಈ ಬಗ್ಗೆ ಇನ್ನೂ ಮಾತುಕಥೆ ನಡೆಸಬೇಕಿದೆ.

ಈ ಸಿನಿಮಾಗೆ ಬೇಕಿರುವುದು ಒಂದು ಒಳ್ಳೆಯ ಕಥೆ.. ಚಿತ್ರೀಕರಣಕ್ಕೆ ಹೋಗುವ ಮೊದಲೇ ಇಬ್ಬರ ಪಾತ್ರಗಳ ಬಗ್ಗೆ ಸ್ಪಷ್ಟವಾದ ಕಲ್ಪನೆ ಇರಬೇಕು. ಯಾರ ಇಮೇಜ್‍ಗೂ ಧಕ್ಕೆಯಾಗದಂತೆ ಸಿನಿಮಾ ಮಾಡಬೇಕು. ಸ್ವಮೇಕ್ ಕಥೆಯ ಹುಡುಕಾಟದಲ್ಲಿದ್ದೇನೆ. ಒಂದು ವೇಳೆ ಸಿಗದೇ ಹೋದರೆ, ರೀಮೇಕ್ ಆದರೂ ಪರವಾಗಿಲ್ಲ ಎಂದಿದ್ದಾರೆ ಮಹೇಶ್ ಬಾಬು.

ಒಟ್ಟಿನಲ್ಲಿ ಇಬ್ಬರು ಮಹಾನ್ ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದ್ದು ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top