ಮನೋರಂಜನೆ

ಗಾಸಿಪ್ ವಿಚಾರವನ್ನ ಕೊನೆಗೂ ಪಕ್ಕಾ ಮಾಡಿದಳು ಸೂಪರ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ.

ಕೊನೆಗೂ ಕನ್ನಡಿಗರು ನಿರೀಕ್ಷಿಸಿದ್ದೆ ಆಗಿದೆ, ‘ಕಿರಿಕ್ ಪಾರ್ಟಿ’ ಎಂಬ ಅಪ್ಪಟ ಕನ್ನಡ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳಲ್ಲಾ? ರಶ್ಮಿಕಾ ಮಂದಣ್ಣ, ಆಕೆ ತೆಲುಗು ಸಿನಿಮಾಗಳಿಗಾಗಿ ಕಮಿಟ್ ಆಗಿದ್ದ ಕನ್ನಡ ಸಿನಿಮಾಗೆ ಗುಡ್ ಬೈ ಹೇಳಿದ್ದಾಳೆ” ಎಂಬ ಸುದ್ದಿ ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಡಿಕೊಂಡಿತ್ತಲ್ಲಾ ಆ ಬಗ್ಗೆ ಇದೀಗ ಆಕೆಯ ಸ್ಪಷ್ಟನೆ ನೀಡಿದ್ದಾಳೆ.. ಅನಿವಾರ್ಯ ಕಾರಣಗಳಿಂದ ಮೊದಲೇ ಒಪ್ಪಿಕೊಂಡಿದ್ದ ‘ವೃತ್ರ’ ಸಿನಿಮಾದಿಂದ ಹೊರೆನಡೆದಿರುವುದಾಗಿ ಹೇಳಿದ್ದಾಳೆ..

 

 

ಈ ಬಗ್ಗೆ ತನ್ನ ಟ್ವಿಟರ್ ನಲ್ಲಿ ತಿಳಿಸಿರುವ ಮಾಜಿ ಕರ್ನಾಟಕದ ಕ್ರಶ್ ” ‘ವೃತ್ರ’ ಚಿತ್ರದಲ್ಲಿ ನಾನು ಇರುವುದಿಲ್ಲ. ಈ ಬಗ್ಗೆ ನಾನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿಯೂ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ವೃತ್ರ ಚಿತ್ರತಂಡಕ್ಕೆ ನನ್ನ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾಳೆ.

 

 

“3 ತೆಲುಗು ಸಿನಿಮಾಗಳನ್ನ ಕೈಯಲ್ಲಿ ಹಿಡಿದು ತೆಲುಗಿನ ಸ್ಟಾರ್ ನಟಿಯಾಗಿರೋ ರಶ್ಮಿಕಾ ಈ ವರ್ಷ ಕೊನೆವರೆಗೂ ಬಿಡುವಾಗೊದಿಲ್ಲವಂತೆ. ಹೀಗಾಗಿಯೇ ‘ವೃತ್ರ’ ಚಿತ್ರದಿಂದ ಹೊರಗೆ ನಡೆದಿದ್ದಾರೆ ಮತ್ತು ಇದಕ್ಕೆ ಚಿತ್ರತಂಡದ ಸಂಪೂರ್ಣ ಒಪ್ಪಿಗೆ ಕೂಡ ಸೂಚಿಸಿದೆ ಎಂದು ಹೇಳಲಾಗಿದೆ.. ಹಾಗಾಗಿ ‘ವೃತ್ರ’ ಚಿತ್ರತಂಡ ರಶ್ಮಿಕಾ ಬಿಟ್ಟು ಹೋದ ಪಾತ್ರಕ್ಕೆ ಬೇರೆ ಹುಡುಗಿಯನ್ನು ಹುಡುಕಾಲಾಗುತ್ತಿದೆಯಂತೆ.

ಅಂದಹಾಗೆ ‘ಕಿರಿಕ್ ಪಾರ್ಟಿ’ ಸಿನಿಮಾ ಗೆದ್ದಮೇಲೆ ಕನ್ನಡದ ದರ್ಶನ್,ಪುನೀತ್ ರಂತಹ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ನಟಿಯಾಗುವ ಅವಕಾಶವನ್ನ ರಶ್ಮಿಕಾ ಪಡೆದುಕೊಂಡಿದ್ದಳು. ಆನಂತರ ‘ಚಲೋ’ ಸಿನಿಮಾ ಮೂಲಕ ತೆಲುಗಿಗೆ ಕಾಲಿಟ್ಟ ‘ಕಿರಿಕ್ ಹುಡುಗಿ’ ತೆಲುಗಿನಲ್ಲೂ ಬೆಳೆಯಲು ಆರಂಭಿಸಿದರು. ಆಕೆಯ ಬೆಳವಣಿಗೆಯನ್ನು ಕಂಡು ಕನ್ನಡಿಗರೂ ಕೂಡ ಹರ್ಷ ವ್ಯಕ್ತಪಡಿಸಿದ್ದರು. “ನಮ್ಮ ನಾಡಿನ ನಟಿಯೊಬ್ಬಳು ತೆಲುಗಿನಲ್ಲಿ ದೊಡ್ಡ ನಟಿಯಾಗಿ ಬೆಳೆಯುತ್ತಿದ್ದಾಳಲ್ಲ” ಎಂದು ಖುಷಿ ಪಟ್ಟಿದ್ದರು.. ಆದರೆ ನಂತರದ ದಿನಗಳಲ್ಲಿ ಯಾವಾಗ ಈಕೆ ಕನ್ನಡದ ಕಡೆ ತಿರುಗದೇ ಅಲ್ಲೇ ಜಂಡಾ ಹೂಡಿದಳೋ ಆವಾಗಿನಿಂದ ಈಕೆಯ ಮೇಲೆ ಕನ್ನಡಿಗರು ಗುರ್ ಅನ್ನಲು ಶುರು ಮಾಡಿದ್ದರು.

ದೊಡ್ಡ ತೆಲುಗು ಚಿತ್ರಕ್ಕಾಗಿ ಕನ್ನಡ ಸಿನಿಮಾಗೆ ಕೈಕೊಟ್ಟ ರಶ್ಮಿಕಾಗೆ ಒಂದ್ಕಾಲದಲ್ಲಿ ಆಕೆಯನ್ನು ‘ಸ್ಟೇಟ್ ಕ್ರಶ್ಶು’ ಎಂತೆಲ್ಲಾ ಬಿಲ್ಡಪ್ ಕೊಟ್ಟು ತಲೆಮೇಲೆ ಕೂರಿಸಿಕೊಂಡಿದ್ದ ಟ್ರೋಲ್ ಪೇಜುಗಳೇ ಈಗ ಉಗಿಯಲಾರಂಭಿಸಿವೆ. “ತೆಲುಗು ಸ್ಟಾರ್ ನಟರ ಸಿನಿಮಾಗಳಿಗಾಗಿ, ತನಗೆ ನೇಮು ಫೇಮು ತಂದುಕೊಟ್ಟ ಕನ್ನಡ ಚಿತ್ರಗಳನ್ನು ಎಡಗಾಲಲ್ಲಿ ಒದೆಯುತ್ತಾಳೆಂದರೆ ಅದೆಷ್ಟು ಧಿಮಾಕಿರಬೇಕು ಲೆಕ್ಕಹಾಕಿ” ಎಂದು ಕನ್ನಡ ಸಿನಿರಸಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. “ಡೇಟ್ ಕ್ಲಾಷ್ ಆಗುವುದಾದರೆ ತೆಲುಗು ಸಿನಿಮಾವನ್ನೇ ಬಿಟ್ಟು ನಮ್ಮ ಕನ್ನಡ ಸಿನಿಮಾ ಮಾಡಬಹುದಿತ್ತಲ್ವಾ?” ಎಂಬ ಪ್ರಶ್ನೆಗಳನ್ನೂ ಕೂಡ ಕೆಲವರು ಹಾಕುತ್ತಿದ್ದಾರೆ.

ಕನ್ನಡನಾಡಲ್ಲೇ ಹುಟ್ಟಿ ಬೆಳೆದಿದ್ದರೂ ನೆಟ್ಟಗೆ ಕನ್ನಡ ಮಾತನಾಡಲು ಬಾರದ ರಶ್ಮಿಕಾ ಸಿನಿಮಾ ಅವಕಾಶಕ್ಕಾಗಿ ಮೂರು ಮುಕ್ಕಾಲು ದಿನದಲ್ಲಿ ಅಚ್ಚುಕಟ್ಟಾಗಿ ತೆಲುಗು ಮಾತನಾಡುವುದನ್ನು ಕಲಿತಾಗಲೇ ಈಕೆಯ ಮೇಲೆ ಕನ್ನಡಿಗರು ಟೀಕಿಸಿದ್ದರು.. ಈಗ ಕನ್ನಡ ಸಿನಿಮಾದಿಂದ ಹೊರನಡೆದಿರುವುದು ಕನ್ನಡಿಗರಲ್ಲಿ ಮತ್ತಷ್ಟು ಕೋಪ ತರಿಸಿದೆ.. ಪರಭಾಷಾ ಸಿನಿಮಾಗಳಿಗಾಗಿ ಕನ್ನಡವನ್ನು, ಕನ್ನಡ ಚಿತ್ರರಂಗವನ್ನು ತುಚ್ಛವಾಗಿ ಕಾಣುತ್ತಿರುವ ರಶ್ಮಿಕಾಳಂತ ನಟಿಯರನ್ನು ನಮ್ಮ ಜನ ಸಾರಾಸಗಟಾಗಿ ತಿರಸ್ಕಾರ ಮಾಡಬೇಕಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top