ಮನೋರಂಜನೆ

ರಾಧಿಕಾ ಆಪ್ಟೆಗೆ ಕಾಟ ಕೊಟ್ಟನಲ್ಲಾ ನಟ- ಕಾಮುಕ ನಟನ ಬೆಚ್ಚಿ ಬೀಳಿಸೋ ಸ್ಟೋರಿ ಬಿಚ್ಚಿಟ್ಟಳು ನಟಿ.

ಹೀರೋಯಿನ್ನುಗಳಿಗೆ ಥರ ಥರದ ಕಾಟ ಕೊಡುವ ಪ್ರವೃತ್ತಿ ಬಾಲಿವುಡ್’ನಿಂದ ಹಿಡಿದು ಎಲ್ಲ ಪ್ರಾದೇಶಿಕ ಭಾಷೆಗಳ ಚಿತ್ರರಂಗಕ್ಕೂ ಅಂಟಿಕೊಂಡಿರೋ ಸಾಂಕ್ರಾಮಿಕ ರೋಗ. ಅದಕ್ಕೆ ನಮ್ಮ ಕನ್ನಡ ಚಿತ್ರರಂಗಕೂಡ ಹೊರತಾಗಿಲ್ಲ, ನಟಿಯರ ಮೇಲೆ ದೈಹಿಕ, ಮಾನಸಿಕ ಕಿರುಕುಳದಂತಹ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತ್ರಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.. ಅದೇ ರೀತಿ ಬಾಲಿವುಡ್ ನಲ್ಲಿ ತನ್ನ ಬಿಂದಾಸ್ ಮನಸ್ಥಿತಿಯಿಂದಲೇ ಖ್ಯಾತಿಯಾಗಿರೋ ನಟಿ ರಾಧಿಕಾ ಆಪ್ಟೆ ಕೂಡ ಬೆಚ್ಚಿ ಬೀಳಿಸೋ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾಳೆ..

ರಾಧಿಕಾ ಆಪ್ಟೆ ಬಿಂದಾಸ್ ಆಗಿ ಬಟ್ಟೆ ಬಿಚ್ಚೋದರ ಮೂಲಕವೇ ಆಗಾಗ ಸದ್ದು ಮಾಡುತ್ತಾ ವಿವಾದಕ್ಕೂ ಕಾರಣವಾಗುವ ನಟಿ. ಇಂಥಾ ನಟಿಯರ ವ್ಯಕ್ತಿತ್ವವನ್ನು ಅಂಥವರು ತೊಡುವ ಬಟ್ಟೆಯಿಂದಲೇ ಅಳೆದು ಮಂಚಕ್ಕೆ ಆಹ್ವಾನ ನೀಡುವ ಮನಸ್ಥಿತಿ ಕೆಲ ನಟರಿಗಿದೆ. ಇಂಥಾದ್ದೇ ಮನಸ್ಥಿತಿಯಿಂದ ಕಿರುಕುಳ ನೀಡಿದ್ದ ನೀಚ ನಟನೊಬ್ಬನ ಪುರಾಣವನ್ನು ರಾಧಿಕಾ ಹೇಳಿದ್ದಾಳೆ. ‘ಮೀಟೂ’ ಎಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಆಪ್ಟೆ ಸಹ ನಟನೊಬ್ಬ ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

“ಚಿತ್ರವೊಂದರ ಶೂಟಿಂಗ್ ವೇಳೆ ನನಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಇದ್ದರೂ ಹೇಗೋ ಕಷ್ಟಪಟ್ಟು ಆ ದಿನದ ಸಂಪೂರ್ಣ ಚಿತ್ರೀಕರಣ ಮುಗಿಸಿ ಲಿಫ್ಟ್ ನಲ್ಲಿ ರೂಂಮಿಗೆ ಹೋಗುವಾಗ ಚಿತ್ರದ ಸಹನಟನೊಬ್ಬ ನನ್ನ ಜೊತೆಯಲ್ಲಿ ಇದ್ದ.. ಆತ ನಾನು ನಟಿಸುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾನೆ ಎಂಬ ವಿಷಯ ಬಿಟ್ಟು ಆತನ ಬಗ್ಗೆ ಮತ್ತೆ ಯಾವ ವಿಚಾರವೂ ಗೊತ್ತಿರಲಿಲ್ಲ. ಲಿಫ್ಟ್ ನಲ್ಲಿ ನಾವು ಹೋಗುವಾಗ ಆತ ನನ್ನೊಂದಿಗೆ ಅಸಭ್ಯವಾಗಿ, ಕೆಟ್ಟರೀತಿಯಲ್ಲಿ ಕಣ್ಣು ಸನ್ನೆ ಮಾಡಿ “ನಿಮಗೆ ಏನಾದರೂ ಸಹಾಯ ಬೇಕೆಂದರೆ ನನ್ನ ಹತ್ತಿರ ಹೇಳಿ. ಮಧ್ಯರಾತ್ರಿ ಆದರೂ ಪರವಾಗಿಲ್ಲ. ನಾನು ಬಂದು ನಿಮಗೆ ಸೊಂಟ ಮಸಾಜ್ ಮಾಡುತ್ತೀನಿ’ ಎಂದು ಕೆಟ್ಟ ದಾಟಿಯಲ್ಲಿ ಹೇಳಿದ್ದ.. ಆತನ ಮಾತು ಕೇಳಿ ನಾನು ಒಂದು ಕ್ಷಣ ಬೆಚ್ಚಿಬಿದ್ದಿದ್ದೆ.” ಎಂದು ನಟಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top