ಸಮಾಚಾರ

“ಮಧ್ಯರಾತ್ರಿಯಾದ್ರೂ ಪರವಾಗಿಲ್ಲ,ನಾನು ಬಂದು ಸೊಂಟ ಮಸಾಜ್​ ಮಾಡ್ತೇನೆ”ಎಂದವನ ವಿರುದ್ದ ರೊಚ್ಚಿಗೆದ್ದ ನಟಿ

ಬಾಲಿವುಡ್ ಖ್ಯಾತ ಚಿತ್ರನಟಿ ರಾಧಿಕಾ ಆಪ್ಟೆ ಸದಾ ಒಂದಿಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ಬಾಲಿವುಡ್ ನಟಿ ರಾಧಿಕಾ ಆಪ್ಟೆ ಟಾಲಿವುಡ್ ನಲ್ಲಿ ಬಾಲಕೃಷ್ಣ ಜೊತೆಗೆ ಲೆಜೆಂಡ್, ಲಯನ್ ಸಿನಿಮಾ ಗಳಲ್ಲಿ ಮತ್ತು ರಾಮ್ ಗೋಪಾಲ್ ವರ್ಮಾ ರವರ ರಕ್ತಚರಿತ್ರೆ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ. ತಮಿಳಿನಲ್ಲಿ ರಜನಿಕಾಂತ್ ನಾಯಕ ನಟನಾಗಿರುವ ‘ಕಬಾಲಿ’ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಹಿಂದೆ ಒಂದು ಸಲ ಸಿನಿಮಾ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ನಿಜ ಎಂದು ಹೇಳಿ ಸ್ವತಃ ತಮಗೆ ಅದ ಅನುಭವದ ಬಗ್ಗೆಬಾಲಿವುಡ್ ಚಿತ್ರನಟಿ ನೇಹಾ ದೂಪಿಯಾ ನಿರೂಪಣೆ ಮಾಡುತ್ತಿರುವ ಟಾಕ್ ಶೋ ‘ವೋಗ್ ಬಿಎಫ್‍ಎಫ್‌’ ಕಾರ್ಯಕ್ರಮದಲ್ಲಿ ರಾಧಿಕಾ ಹೇಳಿಕೊಂಡಿದರು ಹಾಗೂ ಪರಿಚಯ ಇಲ್ಲದ ವ್ಯಕ್ತಿ ಒಬ್ಬಅಸಭ್ಯವಾಗಿ ವರ್ತನೆ ಮಾಡುತ್ತಿರುವುದನ್ನು ಕಂಡು ಸಿಟ್ಟಿಗೆದ್ದು ಆತನ ಕಪಾಳಕ್ಕೆ ಬಾರಿಸಿರುವುಗಾಗಿ ರಾಧಿಕಾ ಹೇಳಿಕೊಂಡಿದ್ದರು.

 

 

 

ಈಗ ಈ ವಿಷ್ಯದಿಂದ ಮತ್ತೆ ಸುದ್ದಿಯಾಗಿದ್ದಾರೆ ರಾಧಿಕಾ ,`ಮೀಟೂ’ ಎಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಧಿಕಾ ,ತನ್ನ ಸಹ ನಟನೊಬ್ಬ ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದನು ಎಂದು ಬಹಿರಂಗವಾಗಿ ಧೈರ್ಯದಿಂದ ಹೇಳಿದ್ದಾರೆ.ಈ ನಡುವೆ ಒಂದು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ ರಾಧಿಕಾಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು,ಆ ನೋವಿನ ನಡುವೆಯೂ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದರಂತೆ ರಾಧಿಕಾ.ಶೂಟಿಂಗ್ ಮುಗಿಸಿ ಮನೆಗೆ ಹೋಗುವಾಗ

ಲಿಫ್ಟ್ ನಲ್ಲಿ ರೂಮಿಗೆ ಹೋಗುವಾಗ ತನ್ನ ಜೊತೆ ಇದ್ದ ಸಹನಟ ಅಂದರೆ ರಾಧಿಕಾ ನಟಿಸುತ್ತಿರುವ ಚಿತ್ರದಲ್ಲಿ ಆತ ಕೂಡ ನಟಿಸುತ್ತಿದ್ದಾನಂತೆ,ಆತ ನಿಮಗೆ ಏನಾದರೂ ಸಹಾಯ ಬೇಕೆಂದರೆ ನನ್ನಲ್ಲಿ ಹೇಳಿ. ಮಧ್ಯರಾತ್ರಿ ಆದರೂ ಪರವಾಗಿಲ್ಲ. ನಾನು ಬಂದು ನಿಮಗೆ ಸೊಂಟ ಮಸಾಜ್ ಮಾಡುತ್ತೀನಿ’ ಎಂದು ಹೇಳಿದನಂತೆ ಆತನ ಮಾತು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದರಂತೆ ರಾಧಿಕಾ ,ಇದರಿಂದ ಕೋಪಗೊಂಡ ರಾಧಿಕಾ ಮಾರನೇ ದಿನ ಈ ವಿಷಯವನ್ನು ನನ್ನ ಚಿತ್ರತಂಡದ ಕೆಲವು ಜನರ ಬಳಿ ಹೇಳಿಕೊಂಡರಂತೆ ಆಗ ಚಿತ್ರತಂಡದಲ್ಲಿದ್ದ ಹಿರಿಯರು ಆತನನ್ನು ಕರೆದು ಮಾತನಾಡಿದರಂತೆ ಆಗ ಆತ ರಾಧಿಕಾ ಆಪ್ಟೆ ಬಳಿ ಬಂದು ಕ್ಷಮೆ ಕೇಳಿದನಂತೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top