ಸಮಾಚಾರ

ನಾಡಿನ ಜನತೆಗೆ ಸಿಹಿ ಸುದ್ದಿ- ಪೆಟ್ರೋಲ್, ಡೀಸೆಲ್ ದರವನ್ನು 2ರೂ. ಕಡಿಮೆಗೊಳಿಸಿದ ಸಿಎಂ HDK.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದ್ದರಿಂದ ಕಂಗಾಲಾಗಿದ್ದ ಜನರಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ರಾಜ್ಯಸರ್ಕಾರದ ವತಿಯಿಂದ ಪ್ರತಿ ಲೀಟರ್‌ಗೆ ₹2 ಇಳಿಕೆ ಮಾಡಲಾಗಿದೆ. “ರಾಜ್ಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು. ಆ ಮೂಲಕ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯಲ್ಲಿ 2 ರೂ. ಇಳಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

 

 

ಮುಖ್ಯಮಂತ್ರಿಯಾದ ಬಳಿಕ ಮೊದಲ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಇಲ್ಲಿನ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಬವಣೆಯನ್ನು ಅರಿತುಕೊಂಡು ಬೆಲೆ ಇಳಿಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

“ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ತೈಲ ದರ ಏರಿಕೆಯು ದಿನನಿತ್ಯ ಬಳಸುವ ವಸ್ತುಗಳ ದರವನ್ನೂ ಹೆಚ್ಚಿಸುತ್ತದೆ. ಇವೆಲ್ಲವನ್ನು ಮನಗಂಡು ಜನರ ಮೇಲಿನ ಆರ್ಥಿಕ ಹೊರೆಯನ್ನು ಇಳಿಸಲು ಕರ್ನಾಟಕದಲ್ಲಿ ತೈಲ ಬೆಲೆಯನ್ನು ನಮ್ಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಸುಮಾರು 2 ರೂ.ಗಳಷ್ಟು ಇಳಿಸಲು ನಿರ್ಧರಿಸಿದೆ.” ಎಂದು ಟ್ವಿಟರ್ ಖಾತೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top