ಮನೋರಂಜನೆ

ಬರ್ತಡೇ ಸಂಭ್ರಮದಲ್ಲಿ ಪ್ರಧಾನಿ ಮೋದಿ- ಶುಭಹಾರೈಸಿದ ರಾಹುಲ್, ದೇವೇಗೌಡ, ಸಿದ್ದು, HDK.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಂದು ಜನುಮದಿನದ ಸಂಭ್ರಮ. 68ನೇ ವಸಂತಕ್ಕೆ ಕಾಲಿಡುತ್ತಿರುವ ಮೋದಿಗೆ ದೇಶಾದ್ಯಂತ ಇರುವ ವಿವಿಧ ಪಕ್ಷಗಳ ಅಗ್ರಗಣ್ಯ ನಾಯಕರು, ಶುಭಾಶಯ ಕೋರುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶುಭಾಶಯಗಳನ್ನು ಕೋರಿದ್ದಾರೆ.

ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, “ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹುಟ್ಟುಹಬ್ಬ ಹಿನ್ನಲೆಯಲ್ಲಿ ಮೋದಿಯವರಿಗೆ ಸದಾಕಾಲ ಉತ್ತಮ ಆರೋಗ್ಯ ಹಾಗೂ ಸಂತೋಷ ಸಿಗಲೆಂದು ಕೋರುತ್ತೇನೆಂದು” ಹೇಳಿದ್ದಾರೆ.

“ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳಾದ @narendramodi ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ದೇವರು ತಮಗೆ ಆಯುಷ್ಯ, ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.#HappyBdayPMModi ” ಎಂದು ಕುಮಾರಸ್ವಾಮಿ ಶುಭಾಶಯ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ. ಜನ್ಮದಿನದ ಶುಭಾಶಯಗಳು ನರೇಂದ್ರ ಮೋದಿಯವರೇ. ನಿಮಗೆ ಉತ್ತಮ ಆರೋಗ್ಯ. ದೀರ್ಘ ಆಯುಷ್ಯ ಮತ್ತು ಜನರಿಗೆ ನೀವು ನೀಡಿದ ಭರವಸೆಗಳನ್ನು ಈಡೇರಿಸುವ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆಂದಿದ್ದಾರೆ.

“ನಿಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಹೃದಯದ ಶುಭಾಶಯಗಳನ್ನು ತಿಳಿಸುವಲ್ಲಿ ನನಗೆ ಬಹಳ ಸಂತೋಷವಾಗುತ್ತಿದೆ. ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರದ ಸೇವೆಗೆ ಮುಂದುವರಿಯಲು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ದೇವರು ನಿಮಗೆ ಆಶೀರ್ವದಿಸಲಿ” ಎಂದು ದೇವೇಗೌಡರು ಶುಭಹಾರೈಸಿದ್ದಾರೆ.

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top