ದೇವರು

ನೋಡಿ ಆಶ್ಚರ್ಯ ಗೌರಿ ಹಬ್ಬಕ್ಕೆಂದು ವರ್ಷಕ್ಕೆ ಒಂದು ಬಾರಿ ಬರುವ ಈ ಶಕ್ತಿಯುತ ದೇವಿ ಹೋಗುವಾಗ ಕಣ್ಣಲ್ಲಿ ನೀರು ಹಾಕುತ್ತಾಳಂತೆ

ಕರ್ನಾಟಕದಲ್ಲಿದೆ ಅತ್ಯಂತ ಅಪರೂಪದ ಗೌರಿಯ ದೇವಸ್ಥಾನ. ನಮ್ಮ ನಾಡು ದೇವಾನುದೇವತೆಗಳು ನೆಲೆನಿಂತಿರುವ ಸುಂದರವಾದ ನಾಡು. ಇಲ್ಲಿ ಅನೇಕ ಅತ್ಯಂತ ಶಕ್ತಿಶಾಲಿ ದೇವತೆಗಳು ನೆಲೆಗೊಂಡಿದ್ದಾರೆ. ಅದರಲ್ಲೂ ಕೆಲವೊಂದು ದೇವತೆಗಳು ವರ್ಷದಲ್ಲಿ ಕೆಲವು ದಿನಗಳು ಮಾತ್ರ ದರ್ಶನ ನೀಡುತ್ತಾರೆ. ಅಂತಹ ದೇವತೆಗಳ ದರ್ಶನ ಮಾಡಬೇಕು ಎಂದರೆ ನೀವು ವರ್ಷಗಟ್ಟಲೆ ಕಾಯಬೇಕಾಗುತ್ತದೆ.ಅಂತಹ ಒಂದು ವಿಶಿಷ್ಟವಾದ ಮಹಿಮಾನ್ವಿತ ದೇವಿಯ ದರ್ಶನ ಭಾಗ್ಯ ವರ್ಷದಲ್ಲಿ ಕೇವಲ ಹತ್ತು ದಿನ ಮಾತ್ರ.

ಕರ್ನಾಟಕದಲ್ಲಿದೆ ಅತ್ಯಂತ ಅಪರೂಪದ ಗೌರಿ ದೇಗುಲ. ಈ ದೇವಿಯ ದರ್ಶನ ಒಂದು ವರ್ಷದಲ್ಲಿ ಕೇವಲ ಹತ್ತು ದಿನಗಳು ಮಾತ್ರ ಈ ದೇವಿಯ ದರ್ಶನ ಸಾಧ್ಯ. ಭಾದ್ರಪದ ಮಾಸದ ತದಿಗೆಯಿಂದ ದೇವಿಯ ದರ್ಶನ ಆರಂಭ. ಭಾದ್ರಪದ ಮಾಸ ಬಂತು ಎಂದರೆ ಮನೆಗೆ ಗೌರಿ, ಗಣೇಶ ಬರುವ ಸಂಭ್ರಮ. ಗೌರಿ-ಗಣೇಶ ಹಬ್ಬ ಎಂದು ಹೇಳುತ್ತಿದ್ದರೆ, ಈ ಹಬ್ಬದಲ್ಲಿ ಗೌರಿಗಿಂತ ಗಣಪನಿಗೆ ಹೆಚ್ಚಿನ ಪ್ರಾಮುಖ್ಯತೆ. ಯಾಕೆಂದರೆ ಯಾವ ಮನೆ, ಗಲ್ಲಿ, ರಸ್ತೆಗಳಲ್ಲಿ ನೋಡಿದರು ಗಣಪನದ್ದೇ ಅಬ್ಬರ ,ಮೊದಲು ಗೌರಿ ಹಬ್ಬ ಬಂದರೂ ಎರಡನೇ ದಿನ ಬರುವ ಗಣಪನಿಗೆ ವಿಶೇಷ ಸತ್ಕಾರ ನೀಡಲಾಗುತ್ತದೆ. ಬೃಹತ್ ಗಣಪನ ಮೂರ್ತಿಗಳ ಪಕ್ಕದಲ್ಲಿ ಎಲ್ಲೋ ಮೂಲೆಯಲ್ಲಿ ಕಂಡು ಕಾಣದಂತೆ ಇರುವ ಗೌರಿಯ ಚಿಕ್ಕ ಮೂರ್ತಿಯನ್ನು ಕೊಡಿಸಲಾಗುತ್ತದೆ. ಆದರೆ ಈ ಒಂದು ಗ್ರಾಮದಲ್ಲಿ ಗೌರಿಗೆ ವಿಶೇಷ ಪ್ರಾಧಾನ್ಯತೆ ಇದೆ. ಶತಮಾನಗಳಿಂದಲೂ ಗೌರಿ ದೇವಿಗೆ ಹೆಚ್ಚು ಮನ್ನಣೆಯನ್ನು ಇಲ್ಲಿ ನೀಡಲಾಗಿದೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಮಾಡಾಳು ಗ್ರಾಮದಲ್ಲಿದೆ ಈ ದೇವಾಲಯ. ಇಲ್ಲಿರುವ ದಿವಂಗತ ಮುದ್ದೆ ಗೌಡರ ಮನೆಯಲ್ಲಿ ಗೌರಿದೇವಿ ನೆಲೆಸಿದ್ದಾಳೆ. ಹೀಗೆ ಮಾಡಾಳು ಗೌರಮ್ಮ ದೇವಿ ಎಂದೇ ಪ್ರಸಿದ್ಧಿ ಪಡೆದು ಮನೆಯೊಳಗೆ ಬಾವಿಯಲ್ಲಿ ನಲೆಸಿರುವ ಮಾಡಾಳು ಗೌರಿದೇವಿ ಮಹಿಮೆಗೆ ಬೆರಗಾಗದವರಿಲ್ಲ. ಮಾಡಾಳು ಗ್ರಾಮದಲ್ಲಿರುವ ಗೌರಿ ದೇವಿಗೆ ಹಬ್ಬ ಬಂತು ಎಂದರೆ ಸಂಭ್ರಮ ಸಡಗರ ಮನೆ ಮಾಡುತ್ತದೆ. ಗೌರಿ ಹಬ್ಬಕ್ಕಾಗಿ ಇಡೀ ಗ್ರಾಮವೇ ಇಲ್ಲಿ ಜಾತಕ ಪಕ್ಷಿಯಂತೆ ಕಾಯುತ್ತದೆ. ಗೌರಿ ದೇವಿಯನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ ಇಲ್ಲಿನ ಭಕ್ತರು ಬೇಡಿದ ವರವನ್ನು ಕೊಡುತ್ತಾಳೆ.

 

ಪ್ರತಿವರ್ಷ ಭಾದ್ರಪದ ಮಾಸದ ತದಿಗೆಯಂದು ಬಸವಣ್ಣ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಈ ಗೌರಿ ದೇವಿಯನ್ನು ಪ್ರತಿಷ್ಠಾಪನೆ ಗೊಳಿಸುತ್ತಾರೆ. ಪುಷ್ಪಾಲಂಕಾರ ಗೊಂಡ ಹೂವಿನ ಮಂಟಪದಲ್ಲಿ ಆಸೀನಳಾಗುವ ಗೌರಮ್ಮ ದೇವಿ ಭಕ್ತರ ಗಮನವನ್ನು ಸೆಳೆಯುತ್ತಾಳೆ. ದೇವಿಯ ರೂಪ ಅತ್ಯಂತ ಆಕರ್ಷಕವಾಗಿರುತ್ತದೆ. ಮಾಡಾಳು ಗೌರಮ್ಮ ದೇವಿಗೆ ಸತತ 10 ದಿನಗಳ ಕಾಲ ತ್ರಿಕಾಲ ಪೂಜೆಯೊಂದಿಗೆ ವೈಭವಪೇರಿತ ಸೇವೆ ಸಲ್ಲಿಸಲಾಗುತ್ತದೆ. ಹತ್ತು ದಿನ ಇಡೀ ಗ್ರಾಮದಲ್ಲಿ ದೇವಿಯ ಮೆರವಣಿಗೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಗ್ರಾಮದ ಪ್ರತಿ ಮನೆಯಲ್ಲೂ ಈ ತಾಯಿ ಪೂಜೆ ಪಡೆದು, ಮಡಿಲಕ್ಕಿ ಪಡೆಯುತ್ತಾಳೆ. ನಂತರ ಈ ದೇವಿಯನ್ನು ಭಾರವಾದ ಮನಸ್ಸಿನಿಂದ ಭಕ್ತರು ಕಲ್ಯಾಣಿಯಲ್ಲಿ ವಿಸರ್ಜಿಸುತ್ತಾರೆ. ಯಾಕೆಂದರೆ ಮತ್ತೆ ಇವಳ ದರ್ಶನಕ್ಕೆ ಮುಂದಿನ ವರ್ಷದವರೆಗೂ ಕಾಯಲೇಬೇಕು.

 

 

 

ಮಾಡಳು ಗೌರಿ ದೇವಿಗೆ ಈ ಬಾರಿ 155 ನೇ ವರ್ಷದ ಸಂಭ್ರಮ. ಈ ತಾಯಿಗೆ ನೂರಾರು ವರ್ಷಗಳ ಇತಿಹಾಸವಿದ್ದರೂ ಇವಳಿಗೆ ಒಂದು ಶಾಶ್ವತವಾದ ವಿಗ್ರಹವಿಲ್ಲ. ವರ್ಷದಲ್ಲಿ ಕೇವಲ ಹತ್ತು ದಿನ ಮಾತ್ರ ದರ್ಶನಕ್ಕೆ ಸಿಗುತ್ತಾಳೆ. ಗೌರಿ ಹಬ್ಬದಲ್ಲಿ ಮಾತ್ರ ದರ್ಶನ ನೀಡುವ ಈ ದೇವಿಯ ದರ್ಶನಕ್ಕಾಗಿ ಜನಸಾಗರವೇ ಹರಿದು ಬರುತ್ತದೆ.
ಪ್ರತಿವರ್ಷ ಸಿದ್ಧವಾಗುತ್ತದೆ ಮಾಡಾಳು ಗೌರಮ್ಮ ಪ್ರತಿಮೆ. ಈ ದೇವಿಗೆ ಕರ್ಪೂರದ ಸೇವೆ ಎಂದರೆ ಹಚ್ಚು ಮೆಚ್ಚು.ಇಲ್ಲಿ ಉತ್ಸವದ ವೇಳೆ ಗೌರಮ್ಮನಿಗೆ ನಡೆಯುತ್ತದೆ ಲಕ್ಷಾಂತರ ಮೌಲ್ಯದ ಕರ್ಪೂರದ ಆರತಿ. ಮಾಡಾಳು ಗೌರಮ್ಮ ಲಕ್ಷಾಂತರ ಭಕ್ತರ ಉಸಿರು. ಇಲ್ಲಿ ಬರುವ ಭಕ್ತರ ವಿಶ್ವಾಸ, ಅಚಲ ನಂಬಿಕೆ, ಇಷ್ಟಾದರೂ ಇವಳಿಗೆ ಒಂದು ಶಾಶ್ವತ ಮೂರ್ತಿ ಇಲ್ಲ. ಮೂರ್ತಿ ಇಲ್ಲದೆ ಹೋದರೂ ತಾಯಿಗೆ ನೂರಾರು ವರ್ಷಗಳಿಂದ ಪೂಜೆ ನಡೆಯುತ್ತಿದೆ. ಇವಳ ಶಕ್ತಿಯ ಪ್ರಭಾವ ದಿನೇ ದಿನೇ ಹೆಚ್ಚುತ್ತಲೇ ಇದೆ.

ಈಕೆ ಒಂದು ವಂಶಕ್ಕೆ ಸೇರಿದವಳು. ಈಕೆ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಈ ತಾಯಿ ದಿವಂಗತ ಮುದ್ದೆ ಗೌಡರ ಮನೆಯಲ್ಲಿ ನೆಲೆಸಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾಳೆ. ವರ್ಷಕ್ಕೊಮ್ಮೆ ಗೌರಿ ಹಬ್ಬದ ಸಮಯದಲ್ಲಿ ಈ ಗೌರಿ ಮಾತೇ ತನ್ನನ್ನು ನಂಬಿರುವ ಭಕ್ತರಿಗೆ ಮೂರ್ತಿಯ ರೂಪದಲ್ಲಿ ದರ್ಶನ ನೀಡುತ್ತಾಳೆ. ಸಿದ್ದೇಗೌಡರ ವಂಶಜರ ಉಸ್ತುವಾರಿಯಲ್ಲಿ ಈ ಮೂರ್ತಿ ಶ್ರಾವಣದ ಹುಣ್ಣಿಮೆಯಲ್ಲಿ ಶಾಸ್ತ್ರೋಕ್ತವಾಗಿ ರೂಪುಗೊಳ್ಳುತ್ತದೆ. ಈ ಗ್ರಾಮದ ಪುಟ್ಟ ಶಾಮಣ್ಣ ಆಚಾರ್ ಅವರ ನೈಪುಣ್ಯದಲ್ಲಿ ಮಣ್ಣಿನಲ್ಲಿ ಸುಂದರವಾಗಿ ತಯಾರಾಗುತ್ತಾಳೆ. ಸುಮಾರು 150 ವರ್ಷಗಳಿಂದ ಇದೇ ರೀತಿಯ ಮಣ್ಣಿನ ಮೂರ್ತಿ ಸಿದ್ಧವಾಗುತ್ತಿದೆ.
ಅಚ್ಚರಿ ಎಂದರೇ ಶತಶತಮಾನಗಳಿಂದಲೂ ಪ್ರತಿವರ್ಷ ಪವಿತ್ರವಾದ ಮಣ್ಣಿನಲ್ಲಿ ಗೌರಿಯ ಮೂರ್ತಿ ಸಿದ್ಧವಾಗುತ್ತದೆ. ಇಷ್ಟು ವರ್ಷಗಳಲ್ಲಿ ಎಂದಿಗೂ ಈ ವಿಗ್ರಹ ಗಾತ್ರದಲ್ಲಿ ಕಿಂಚಿತ್ತು ಬದಲಾವಣೆಯಾಗಿಲ್ಲ. ಸುಂದರವಾದ ರೂಪದಲ್ಲಿ ನೂರಾರು ವರ್ಷಗಳಿಂದ ಒಂದೇ ರೂಪದಲ್ಲಿ ತಯಾರಾಗುತ್ತದೆ. ಒಂದು ವೇಳೆ ಅಳತೆಯಲ್ಲಿ ಸ್ವಲ್ಪ ಏನಾದರೂ ಆದರೆ ಮೂರ್ತಿ ನಿಲ್ಲದೆ ಬಿದ್ದು ಹೋಗುತ್ತದೆ. ಮತ್ತೆ ಮೂರ್ತಿ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಇದರ ಹಿಂದಿರುವ ರಹಸ್ಯ ಏನು ? ಎಂದರೆ ಅದಕ್ಕೆ ಕಾರಣ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ಜೀವ ಸಮಾಧಿಯಾಗಿರುವ ಶ್ರೀ ಶಿವಲಿಂಗ ಸ್ವಾಮಿಗಳು. ನೂರಾರು ವರ್ಷಗಳ ಹಿಂದೆ ಈ ವಿಗ್ರಹದ ರೂಪ ,ಗಾತ್ರ ಹೀಗೆ ಇರಬೇಕೆಂದು ಶಿವಲಿಂಗ ಸ್ವಾಮಿಗಳು ಒಂದು ಅಳತೆಯ ದಾರವನ್ನು ಮುದ್ದೇಗೌಡರಿಗೆ ನೀಡಿದ್ದಾರೆ. ಆ ದಾರವನ್ನು ಹಿಡಿದು ಕುಳಿತರೆ ಸಾಕು, ಮೂರ್ತಿ ಮಾಡುವುದಕ್ಕೆ ಕೌಶಲ್ಯ ಇಲ್ಲದವರು ಕೂಡ ಪ್ರಮಾಣ ಬದ್ಧವಾಗಿ ಮೂರ್ತಿ ತಯಾರಿಸುತ್ತಾರೆ.

 

ಹೀಗೆ ತಯಾರಾಗುವ ವಿಗ್ರಹಕ್ಕೆ ಮೂಗುತಿ ತೊಡಿಸುವ ಮೂಲಕ ಜೀವಕಳೆ ನೀಡಲಾಗುತ್ತದೆ. ಮೂಗುತಿ ತೊಡಿಸಿದ ನಂತರ ನಿರ್ಜೀವ ಮಣ್ಣಿನ ವಿಗ್ರಹಕ್ಕೆ ಜೀವ ಬರುತ್ತದೆ. ಆ ಮೂಗುತಿಯಲ್ಲಿ ಅಪಾರ ಶಕ್ತಿ ಅಡಗಿದೆ ಎನ್ನುವ ನಂಬಿಕೆ. ಇಲ್ಲಿನ ಜನರ ನಂಬಿಕೆಗೆ ತಕ್ಕಂತೆ ಜೀವಕಳೆಯಿಂದ ನಳನಳಿಸುತ್ತದೆ. ಸಾಕ್ಷಾತ್ ದೇವಿಯನ್ನು ನೋಡಿದ ಅನುಭವವಾಗುತ್ತದೆ. ನೂರಾರು ವರ್ಷದ ಹಿಂದೆ ಶ್ರೀ ಶಿವಲಿಂಗ ಸ್ವಾಮಿಗಳು ತಮ್ಮ ಆತ್ಮಶಕ್ತಿಯಿಂದ ಒಂದು ಬಂಗಾರದ ಮೂಗುತಿಯನ್ನು ನೀಡಿದ್ದರು, ಅದನ್ನೇ ಇಂದಿಗೂ ಪ್ರತಿವರ್ಷ ಗೌರಿಗೆ ತೊಡಿಸಲಾಗುತ್ತದೆ. ಬಂಗಾರದ ಮೂಗುತಿ ಬಿಟ್ಟರೆ ಬೇರೆ ಯಾವುದೇ ಬಂಗಾರದ ಒಡವೆಯನ್ನು ದೇವಿಗೆ ಹಾಕುವುದಿಲ್ಲ.ಪ್ರತಿವರ್ಷ ಗೌರಿ ಹಬ್ಬದ ಸಮಯದಲ್ಲಿ ಸಾಕ್ಷಾತ್ ಗೌರಿ ತಾಯಿಯೇ ಹಾರನಹಳ್ಳಿಯ ಕೋಡಿ ಮಠಕ್ಕೆ ಹೋಗಿ ಶ್ರೀ ಶಿವಲಿಂಗ ಸ್ವಾಮಿಗಳ ಗದ್ದುಗೆ ದರ್ಶನ ಮಾಡುತ್ತಾಳೆ. ಇದನ್ನು ಕಣ್ಣಾರೆ ಕಂಡ ಈಗಿನ ಕೋಡಿ ಮಠದ ಸ್ವಾಮಿಗಳ ಜೀವಂತ ನಿದರ್ಶನ.

ಜೀವಕಳೆ ತುಂಬಿಕೊಳ್ಳುವ ವಿಗ್ರಹಕ್ಕೆ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಪೂಜೆ ಉತ್ಸವ ನಡೆಯುತ್ತದೆ. ಉತ್ಸವದ ವೇಳೆ ಹರಕೆಯ ವಿಶೇಷ ಈ ದೇವಿಗೆ ಕರ್ಪೂರದ ಆರತಿ ಹೊತ್ತರೆ ಎಂತಹ ಕಷ್ಟ ಇದ್ದರೂ ಮಂಗ ಮಾಯವಾಗುತ್ತದೆ. ಹೀಗಾಗಿ ಹರಕೆಯನ್ನು ಹೊತ್ತ ಆಲ್ಲಿನ ಭಕ್ತರು ತಲೆಯ ಮೇಲೆ ಕರ್ಪೂರ ತುಂಬಿದ ಕುಡಿಕೆಯನ್ನು ಹೊತ್ತು ಹರಕೆಯನ್ನು ತೀರಿಸುತ್ತಾರೆ. ಈ ಗೌರಿ ಯಾವುದೇ ಆಡಂಬರವನ್ನು ಬಯಸುವುದಿಲ್ಲ. ಇಲ್ಲಿ ಭಕ್ತಿಯೇ ಪ್ರಧಾನ. ಇವಳಿಗೆ ಬೆಳ್ಳಿ ಬಂಗಾರ ಛತ್ರ ಚಾಮರಗಳ ಆಸೆ ಇಲ್ಲ. ಭಕ್ತರು ನೀಡುವ ಅಕ್ಕಿ, ಸೀರೆ, ಕರ್ಪೂರ ಸೇವೆಯೇ ಇವಳಿಗೆ ಅತ್ಯಂತ ಅಚ್ಚುಮೆಚ್ಚು. ಈ ಗೌರಮ್ಮ ದೇವಿ ಕರ್ಪೂರದ ಆರತಿಯನ್ನು ಮಾಡಿ ಗೌರಿಯನ್ನು ನೀರಿಗೆ ಬಿಡುತ್ತಾರೆ. ಗೌರಿ ದೇವಿಯನ್ನು ನೀರಿಗೆ ಬಿಡುವ ಕಲ್ಯಾಣಿಯ ಸುತ್ತ ಭಕ್ತರು ಹರಕೆಯನ್ನು ತೀರಿಸಲು ಕರ್ಪೂರವನ್ನು ಸುಡುತ್ತಾರೆ. ಉತ್ಸವದ ಸಮಯದಲ್ಲಿ ಇಲ್ಲಿ ಸರಿ ಸುಮಾರು 20 ರಿಂದ 30 ಲಕ್ಷ ರೂಪಾಯಿಯ ಕರ್ಪೂರವನ್ನು ಸುಡಲಾಗುತ್ತದೆ. ಈ ಗೌರಿ ದೇವಿಯನ್ನು ಮತ್ತೆ ಮತ್ತೆ ನೋಡಬೇಕೆಂಬ ಬಯಕೆ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ.

 

 

 

9 ದಿನ ಮಾಡಾಳು ಗೌರಮ್ಮನಿಗೆ ನಡೆಯುತ್ತದೆ ವಿಜೃಂಭಣೆಯ ಪೂಜೆ ಮತ್ತು ಉತ್ಸವ. ಹತ್ತನೇ ದಿನ ಮಾಡಾಳು ಗೌರಮ್ಮನ ಕಣ್ಣಲ್ಲಿ ನೀರು ಬರುತ್ತದೆ. ಕಣ್ಣೀರಿನ ಮೂಲಕ ಗೌರಮ್ಮ ಹೇಳುವುದೇನು ? ಮಾಡಾಳು ಗ್ರಾಮಕ್ಕೆ ಗೌರಮ್ಮ ಬಂದಿರುವುದೇ ಒಂದು ಅದ್ಭುತ. ದೇವಿ ಇಲ್ಲಿ ನೆಲೆಸಿರುವುದರ ಹಿಂದೆ ಒಂದು ಅದ್ಭುತವಾದ ರೋಚಕ ಕಥೆ ಇದೆ . ಮಾಡಾಳುವಿನ ದಿವಂಗತ ಮುದ್ದೇಗೌಡರ ಜೊತೆಗೆ ಶ್ರೀ ಶಿವಲಿಂಗ ಸ್ವಾಮಿಗಳು ಶಿಷ್ಯರು. ಒಮ್ಮೆ ಮುದ್ದೆ ಗೌಡರು ಶ್ರೀ ಶಿವಲಿಂಗ ಸ್ವಾಮಿಗಳನ್ನು ಕರೆದುಕೊಂಡು ತುಮಕೂರು ಜಿಲ್ಲೆ ಸಂಪಿಗೆ ಗ್ರಾಮದಲ್ಲಿರುವ ಗೌರಿದೇವಿಯ ದೇವಸ್ಥಾನಕ್ಕೆ ಹೋಗಿದ್ದರು. ಗೌರಿ ದೇವಿಯ ದರ್ಶನ ಮಾಡಿ ರಾತ್ರಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು .ಆಗ ನಾನು ನಿಮ್ಮ ಜೊತೆ ನಿಮ್ಮ ಊರಿಗೆ ಬರುವೆ ಎಂದು ಅಶರೀರವಾಣಿಯೊಂದು ಕೇಳಿಬಂತು. ಆಗ ಮುದ್ದೇಗೌಡರು ಹೊಳೆಯ ಒಳಗಿನ ನೀರನ್ನು ಒಂದು ಕಳಸದಲ್ಲಿ ಶೇಖರಿಸಿ ತರುತ್ತಾರೆ. ಆ ನೀರನ್ನು ತಮ್ಮ ಮನೆಯಲ್ಲಿದ್ದ ಆ ಬಾವಿಯಲ್ಲಿ ಹಾಕಿದ್ದರು. ಅಂದಿನಿಂದ ಗೌರಿ ಇಲ್ಲಿಯೇ ನೆಲೆಸಿದ್ದಾಳೆ ಎನ್ನಲಾಗುತ್ತದೆ. ಮಾಡಾಳು ಗೌರಮ್ಮನಿಗೆ ಪ್ರತಿ ವರ್ಷ 9 ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಹತ್ತನೇ ದಿನ ಮೂರ್ತಿಯನ್ನು ನೀರಿಗೆ ಬಿಡುವ ಮೂಲಕ ಉತ್ಸವ ಸಮಾಪ್ತಿಯಾಗುತ್ತದೆ. ಈ ಸಮಯದಲ್ಲಿ ಮೂರ್ತಿಗೆ ತೊಡಿಸಿರುವ ಬಂಗಾರದ ಮೂಗುತಿಯನ್ನು ಬಿಚ್ಚಿ ಕೊಳ್ಳಲಾಗುತ್ತದೆ.

 

ಕೆಲವು ವರ್ಷಗಳ ಹಿಂದೆ ಮೂರ್ತಿಯು ಕಳೆದು ಹೋಗುತ್ತದೆ. ನಂತರ ಗೌರಿ ಹಬ್ಬದ ವರ್ಷದ ಆಚರಣೆಯಲ್ಲಿ ಮೂಗುತಿ ಇಲ್ಲದೆ ಇರುವುದು ಮುದ್ದೆ ಗೌಡರಿಗೆ ನೋವು ತಂದಿತ್ತು. ಮುದ್ದೆ ಗೌಡರು ದಿಕ್ಕುತೋಚದೆ ಹೊಸ ಮೂಗುತಿ ಮಾಡಿಸಲು ಮುಂದಾದರೂ, ಆಗ ಅವರಿಗೆ ಯಾರೋ ಕಪಾಳಕ್ಕೆ ಹೊಡೆದ ಅನುಭವವಾಯಿತು. ಆ ಸಮಯದಲ್ಲಿ ಈಗಾಗಲೇ ಜೀವಂತ ಸಮಾಧಿಯಾಗಿರುವ ಶಿವಲಿಂಗ ಸ್ವಾಮಿಗಳು ಕನಸಿನಲ್ಲಿ ಬಂದು ಯಾವಾಗಲೂ ಮೂಗುತಿಯನ್ನು ಎಲ್ಲಿ ಇಡುತ್ತಿದ್ದೋ ಅಲ್ಲಿಯೇ ಇದೆ ನೋಡು ಎಂದು ಹೇಳಿದರು. ಆ ಕನಸನ್ನು ಕಂಡ ಮುದ್ದೆ ಗೌಡರು ಕೂಡಲೇ ಮನೆಯಲ್ಲಿ ಇರುವ ಒಂದು ಗೋಡೆಗೆ ಕೈ ಹಾಕಿದರು ಆಗಲೇ ಮೂಗುತಿ ಸಿಕ್ಕಿತ್ತು. ಅಗ ಉತ್ಸವ ನಡೆಯುತ್ತದೆ .ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಗೌರಿಯನ್ನು ನೀರಿಗೆ ಬಿಡುವಾಗ ಬಂಗಾರದ ಮೂಗುತಿಯನ್ನು ಬಿಚ್ಚಿ ಕೊಳ್ಳಲಾಗುತ್ತದೆ .ಆ ಗೌರಿಯ ಮೂರ್ತಿಯು ಜೀವಕಳೆಯನ್ನು ಕಳೆದುಕೊಳ್ಳುತ್ತದೆ. ಆಗ ವಿಗ್ರಹದ ಕಣ್ಣಲ್ಲಿ ನೀರು ಸುರಿಯುತ್ತದೆ. ವರ್ಷದಲ್ಲಿ ಕೇವಲ ಹತ್ತೆ ದಿನ ದರ್ಶನ ನೀಡುವ ಈ ಗೌರಿ ಲಕ್ಷಾಂತರ ಭಕ್ತರ ಆರಾಧ್ಯ ದೇವಿ. 9 ದಿನಗಳ ಕಾಲ ಲಕ್ಷಾಂತರ ಭಕ್ತರು ಭಕ್ತಿಪೂರ್ವಕವಾಗಿ ಉತ್ಸವ ನಡೆಸುತ್ತಾರೆ. ಹತ್ತನೇ ದಿನ ಗೌರಿ ಮೂರ್ತಿಯನ್ನು ನೀರಿಗೆ ಬಿಡಲಾಗುತ್ತದೆ. ಇದನ್ನು ನೋಡುವ ಕಣ್ಣುಗಳೇ ನಿಜಕ್ಕೂ ಧನ್ಯ. ಇಲ್ಲಿನ ಜನ ಈ ತಾಯಿಯನ್ನು ನಂಬಿದ್ದಾರೆ. ಇವರ ನಂಬಿಕೆಗೆ ದೇವಿ ಪಾತ್ರಳಾಗಿದ್ದಾಳೆ . ಈ ತಾಯಿಯ ಶಕ್ತಿ ಮತ್ತು ಪವಾಡದ ಬಗ್ಗೆ ಉದಾಹರಣೆ ಮತ್ತು ನಿದರ್ಶನಗಳು ಒಂದೆರಡಲ್ಲ. ದೇವಿಯ ಬಳಿ ಬೇಡಿ ಹರಕೆ ಹೊತ್ತ ಭಕ್ತರ ಕಷ್ಟಗಳು ಈಡೇರಿರುವ ಕಾರಣ ಇಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ಗೌರಮ್ಮನ ಜಾತ್ರೆ ಸಹಬಾಳ್ವೆಯ ಸಂಕೇತವಾಗಿದೆ. ಹೀಗಾಗಿ ಇವಳ ದರ್ಶನದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಭಕ್ತಸಾಗರವೇ ಹರಿದು ಬರುತ್ತದೆ.

ಹೆಣ್ಣು ಮಕ್ಕಳು ತವರು ಮನೆಯಿಂದ ಹೊರಡುವಾಗ ದುಃಖಿಸುತ್ತಾರೆ ಕಣ್ಣಲಿ ನೀರು ಹಾಕುತ್ತಾರೆ.ಅದೇ ರೀತಿ ವರ್ಷಕ್ಕೆ ಒಂದು ಬಾರಿ ಗೌರಿ ಹಬ್ಬಕ್ಕೆ ಬರುವ ದೇವಿ ತನ್ನ ತವರು ಮನೆಯಿಂದ ಹೊರಡುವಾಗ ಕಣ್ಣಲ್ಲಿ ನೀರು ಹಾಕುತ್ತಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top