ಮನೋರಂಜನೆ

ಮತ್ತೊಂದು ಹಂತಕ್ಕೆ ಹೋಯ್ತು ಮುನಿರತ್ನ- ದರ್ಶನ್ ನಡುವಿನ ಒಳಜಗಳ: ನಡೆಯಿತು ಮತ್ತದೇ ತಪ್ಪು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಯಾವಾಗಲೋ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ.. ಚಿತ್ರ ತಡವಾಗುತ್ತಿರುವುದಕ್ಕೆ ಅಸಲಿ ಕಾರಣವೇನು? ಕುರುಕ್ಷತ್ರದಲ್ಲಿ ಶೀತಲ ಸಮರವೊಂದು ಶುರುವಾಗಿದೆಯಾ? ಅಷ್ಟಕ್ಕೂ ಈ ಚಿತ್ರದ ಹೀರೋ ಯಾರು? ಚಿತ್ರದ ವಿರುದ್ಧ ದರ್ಶನ್ ಮುನಿಸಿಕೊಂಡಿದ್ದಾರಾ? ಎಂಬಂಥಾ ಬಗೆಬಗೆಯ ಪ್ರಶ್ನೆಗಳು, ನಾನಾ ವೆರೈಟಿಯ ರೂಮರುಗಳು ಎಲ್ಲೆಂದರಲ್ಲಿ ಯಾರಿಂದ ಹರಿದಾಡುತ್ತಿದೆಯೋ ಗೊತ್ತಿಲ್ಲ. ಆದರೆ ಇಂಥಾ ವಿದ್ಯಮಾನಗಳು ಸ್ವತಃ ದರ್ಶನ್ ಅಭಿಮಾನಿಗಳಲ್ಲಿ ಅಸಹನೆ ಮೂಡಿಸಿರುವುದು ಸುಳ್ಳಲ್ಲ!

 

 

ದರ್ಶನ್ ಅವರಿಗೂ ಮುನಿರತ್ನ ಅವರಿಗೂ ಭಿನ್ನಾಭಿಪ್ರಾಯವುಂಟಾಗಿದೆ, ದರ್ಶನ್ ಅವರು ನಿಖಿಲ್ ಕುಮಾರ್ ಅವರ ಅಭಿಮನ್ಯು ಪಾತ್ರದ ವಿರುದ್ಧ ಬೇಸರ ಗೊಂಡಿದ್ದಾರೆ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರವಿರುದು ಒಂದು ಸ್ವಲ್ಪವೇ ಆಗಿದ್ದರೂ ಕುರುಕ್ಷೇತ್ರ ಸಿನಿಮಾದಲ್ಲಿ ಹೆಚ್ಚು ಬಿಲ್ಡಪ್ ಕೊಟ್ಟು ಚಿತ್ರೀಸಿದ್ದಾರೆ ಎಂದು ದಚ್ಚು ಮುನಿಸಿಕೊಂಡಿದ್ದಾರೆ” ಎಂಬಂತ ನಾನಾ ಸುದ್ದಿಗಳು ಹರಿದಾಡುತ್ತಿತ್ತು. ಇಷ್ಟು ದಿನ ಅಂಥಾ ಸುದ್ದಿಗಳು ಕೇವಲ ಗಾಸಿಪ್ ಎಂದುಕೊಳ್ಳಲಾಗುತ್ತಿತ್ತು. .ಇದೀಗ ಈ ಒಳಜಗಳ ಮತ್ತೊಂದು ಹಂತಕ್ಕ್ಕೆ ಹೋಗಿ ತಲುಪಿದೆ..

ಬುಕ್ ಮೈ ಶೋನಲ್ಲಿ ನಿಖಿಲ್ ಕುಮಾರಸ್ವಾಮಿ ‘ದರ್ಶನ’:
ಕುರುಕ್ಷೇತ್ರ ಸಿನಿಮಾ ಇದೀಗ ಬುಕ್ ಮೈ ಷೋ ನಲ್ಲೂ ಕಾಣಿಸಿಕೊಂಡಿದ್ದು ಇಲ್ಲೂ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಯಾಕಂದ್ರೆ ಕುರುಕ್ಷೇತ್ರ ಸಿನಿಮಾ ಡಿಸಪ್ಲೇ ಫೋಟೊದಲ್ಲಿ ದರ್ಶನ್ ಫೋಟೋ ಹಾಕುವ ಬದಲು ಅಭಿಮನ್ಯು ಪಾತ್ರ ಮಾಡಿರೋ ನಿಖಿಲ್ ಅವರ ಫೋಟೋವನ್ನು ಮಾತ್ರ ಹಾಕಲಾಗಿದೆ. ಇಷ್ಟೇ ಅಲ್ಲದೇ ಸಿನಿಮಾದ ಟೀಸರ್‌ ವಿಭಾಗದಲ್ಲೂ ದುರ್ಯೋಧನನ ಟೀಸರ್ ಕಾಣಿಸೋದಿಲ್ಲ ಇಲ್ಲೂ ಕೂಡ ಕೇವಲ ಅಭಿಮನ್ಯು ನಿಕಿಲ್ ಕುಮಾರ್ ಟೀಸರನ್ನ ಮಾತ್ರ ಹಾಕಲಾಗಿದೆ. ಇವೆಲ್ಲಾ ಹಾಳಾಗಿ ಹೋಗಲಿ ಚಿತ್ರದ ತಾರಾಬಳಗದ ಡಿಟೈಲ್‌ನಲ್ಲೂ ದರ್ಶನ್ ಅವರಿಗೆ ಕೊನೆ ಸ್ಥಾನ ನೀಡಲಾಗಿದೆ.. ಈ ಎಡವಟ್ಟುಗಳು ತಿಳಿಯದೆ ನಡೆದಿವೆಯೋ? ಅಥವಾ ಬೇಕಂತಲೇ ಆಗಿದೆಯೋ ಗೊತ್ತಿಲ್ಲಾ? ಇವೆಲ್ಲವನ್ನೂ ಗಮನಿಸಿದರೆ ಕುರುಕ್ಷೇತ್ರದೊಳಗೊಂದು ಯುದ್ಧ ಏರ್ಪಟ್ಟಿರುವುದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

 

ಅದೇನೇ ಇರಲಿ ಯಾವುದೇ ವಿಚಾರವೇ ಆದರೂ ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ. ಯಾಕೆಂದರೆ ಇಡೀ ಚಿತ್ರದಲ್ಲಿ ಸ್ವಲ್ಪ ಹೊತ್ತು ಕಾಣಿಸಿಕೊಳ್ಳೋ ಅಭಿಮನ್ಯುವಿನ ಪಾತ್ರವನ್ನೇ ಹೀರೋ ರೇಂಜಿಗೆ ಯಾಕೆ ಬಿಂಬಿಸಲಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಕುರುಕ್ಷೇತ್ರದಲ್ಲಿ ಹೀರೋ ಅಭಿಮನ್ಯುವಾ? ಅಥವಾ ದುರ್ಯೋಧನನಾ? ಎಂಬಂಥಾ ಪ್ರಶ್ನೆಯೂ ಪ್ರೇಕ್ಷಕರನ್ನು ಕಾಡುತ್ತಿದೆ. ವಿನಾಃ ಕಾರಣ ಗೊಂದಲಗಳು ಸೃಷ್ಟಿಯಾಗಿ ರಾಡಿಯೇಳದಂತೆ ಚಿತ್ರ ತಂಡ ಮುಂದುವರೆದರೊಳಿತು ಎನ್ನುತ್ತಿದ್ದಾರೆ ಪ್ರೇಕ್ಷಕರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top